ಟಿಪ್ಪು ಜಯಂತಿ ಆಚರಣೆ ಕುರಿತ ಚರ್ಚೆಗೆ ಆಗ್ರಹ – ಬಿಜೆಪಿ ಬೆಂಬಲಕ್ಕೆ ನಿಂತ ಬಸವರಾಜ ಹೊರಟ್ಟಿ

Public TV
2 Min Read
Basavaraj Horatti

ಬೆಳಗಾವಿ: ವಿಧಾನ ಪರಿಷತ್ ಕಲಾಪದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರದ ಚರ್ಚೆಗೆ ಪಟ್ಟು ಹಿಡಿದ ವೇಳೆ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸದಸ್ಯರ ಬೆಂಬಲಕ್ಕೆ ನಿಂತಿದ್ದಾರೆ.

ಪರಿಷತ್‍ನಲ್ಲಿ ಟಿಪ್ಪು ಜಯಂತಿ ಕುರಿತ ಚರ್ಚೆಗೆ ಸಿಎಂ ಕುಮಾರಸ್ವಾಮಿ ಅವರು ಕಾಲಾವಕಾಶ ಕೇಳಿದ್ರು, ಹೀಗಾಗಿ ಸಭಾಪತಿಗಳು ಚರ್ಚೆಗೆ ಅವಕಾಶ ಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು, ಸಂಜೆ ಒಳಗೆ ಸಿಎಂ ಉತ್ತರ ಕೊಡಲೇಬೇಕು ಅಂತ ಬಿಗಿಪಟ್ಟು ಹಿಡಿದರು.

ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದಂತೆ ಅಚ್ಚರಿಯ ರೀತಿಯಲ್ಲಿ ಬೆಂಬಲಕ್ಕೆ ನಿಂತ ಹೊರಟ್ಟಿ ಅವರು, ಹೌದು, ಅಜೆಂಡಾದಿಂದ ಯಾಕೆ ಇದನ್ನು ಬಿಟ್ಟಿದ್ದೀರಿ ಎನ್ನುವುದನ್ನು ಹೇಳಬೇಕು. ಸರ್ಕಾರ ವಿಪಕ್ಷಕ್ಕೆ ಮನವರಿಕೆ ಮಾಡಬೇಕು ಎಂದರು. ನಂತರ ಮಾತನಾಡಲು ಮುಂದಾದ ಐವಾನ್ ಡಿಸೋಜಾ ಅವರನ್ನು ಹೊರಟ್ಟಿ ತರಾಟೆಗೆ ತೆಗೆದುಕೊಂಡರು. ಈ ರೀತಿ ಮಾಡಿ ದಾರಿ ತಪ್ಪಿಸಬೇಡಿ. ನೀವು ಸುಮ್ನೆ ಕುಳಿತುಕೊಳ್ಳಿ ಅಂತ ಹೇಳಿ ಗದರಿದರು.

basavaraj Horatti

ಹೊರಟ್ಟಿ ಅವರ ಮಾತಿನಂತೆ ಐವಾನ್ ಡಿಸೋಜಾ ಅವರು ತಮ್ಮ ಸ್ಥಾನದಲ್ಲಿ ಕುಳಿತರು. ಬಳಿಕ ಮಾತನಾಡಿದ ಸಚಿವೆ ಜಯಮಾಲಾ ಅವರು ಎರಡು ದಿನ ಸಮಯ ಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ಒಪ್ಪಿಗೆ ನೀಡಲಿಲ್ಲ. ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಸಾರಾ ಮಹೇಶ್ ಅವರು, ನೀವು ಹೇಳಿದಂತೆ ಕೇಳಬೇಕಿಲ್ಲ ಎಂದು ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು. ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೆಯಿತು. ಸರ್ಕಾರ ನಡೆಯನ್ನು ವಿರೋಧಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.

ಸಿಎಂ ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ವಿಚಾರದಲ್ಲಿ ನಿಲುವು ತಿಳಿಸಲು ಹಿಂದೇಟು ಹಾಕುತ್ತಿದ್ದಾರೆ. ಅದ್ದರಿಂದಲೇ 15 ದಿನಗಳ ಕಾಲಾವಕಾಶ ಕೇಳಿ ಪಲಾಯನ ಮಾಡುತ್ತಿದ್ದಾರೆ. ಅದ್ದರಿಂದ ನಮಗೇ ಈ ಕುರಿತು ತಮ್ಮ ನಿಲುವುವಿನ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಸಚಿವ ಕೃಷ್ಣಬೈರೈಗೌಡ ಮಾತನಾಡಿ ಈ ಕುರಿತು ಸಿಎಂ ಕುಮಾರಸ್ವಾಮಿ ಅವರ ಜೊತೆ ಮಾತನಾಡುತ್ತೇನೆ. ಏಕೆ ಹೆಚ್ಚಿನ ಸಮಯ ಕೇಳಿದರು ಎಂದು ತಿಳಿದುಕೊಂಡು ಹೇಳುತ್ತೇನೆ ಎಂದರು. ಆದರೆ ಇವರ ಸಮಾಜಯಿಸಿಗೆ ಕೂಡ ಬಿಜೆಪಿ ನಾಯಕರು ಸಮ್ಮತಿ ಸೂಚಿಸಲಿಲ್ಲ. ಗದ್ದಲ ಜಾಸ್ತಿಯಾದ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು ಮುಂದೂಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *