ವಿಚ್ಛೇದನಕ್ಕೆ ಅರ್ಜಿಸಲ್ಲಿಸಿ ಮನೆಬಿಟ್ಟು ಹೋಗಿದ್ದ ಲಾಲು ಪುತ್ರ ಪತ್ತೆ!

Public TV
2 Min Read
Tej Pratap Yadav 1

-ಪಟ್ಟಣದ ಯುವತಿಯ ಜೊತೆಗೆ ಮದುವೆ ನಿರಾಕರಿಸಿದ್ದರೂ ಒತ್ತಾಯಿಸಿದ್ದ ಲಾಲು

ಪಾಟ್ನಾ: ವಿಚ್ಛೇದನ ವಿಚಾರವಾಗಿ ಮನನೊಂದು ಮನೆಬಿಟ್ಟು ಹೋಗಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪುತ್ರ, ಶಾಸಕ ತೇಜ್ ಪ್ರತಾಪ್ ಯಾದವ್ ಹರಿದ್ವಾರದಲ್ಲಿ ಇದ್ದಾರೆ ಎಂದು ವರದಿಯಾಗಿದೆ.

ತೇಜ್ ಪ್ರತಾಪ್ ಯಾದವ್ ಐಶ್ವರ್ಯ ರಾಯ್ ಜೊತೆಗೆ ವಿವಾಹವಾಗಿ ಕೆಲವೇ ತಿಂಗಳಿಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಈ ಬೆಳವಣಿಗೆಯಿಂದ ಮಾನಸಿಕವಾಗಿ ಕುಗ್ಗಿದ್ದ ತೇಜ್ ಪ್ರತಾಪ್ ಜೈಲಿನಲ್ಲಿದ್ದ ತಂದೆ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿಯಾಗಿ ಮರಳುವಾಗ ನಾಪತ್ತೆಯಾಗಿದ್ದರು.

ತೇಜಸ್ ಫೋನ್ ಮಾಡಿದ್ದ. ವಿಚ್ಛೇದನ ಸಮಸ್ಯೆ ಬಗೆಹರಿಯುವವರೆಗೆ ನಾನು ಮನೆಯಿಂದ ದೂರ ಇರುತ್ತೇನೆ ಅಂತಾ ತಿಳಿಸಿದ್ದಾನೆ. ಹೀಗಾಗಿ ಹಬ್ಬಕ್ಕೆ ಹಾಗೂ ನನ್ನ ಹುಟ್ಟು ಹಬ್ಬಕ್ಕೆ ತೇಜಸ್ ಬರಲು ನಿರಾಕರಿಸಿದ್ದಾನೆ ಎಂದು ಹಿರಿಯ ಸಹೋದರಿ ತೇಜಸ್ವಿನಿ ಯಾದವ್ ತಿಳಿಸಿದ್ದಾರೆ.

Lalu Prasad Yadav 1

ಏನಿದು ಪ್ರಕರಣ?:
ತೇಜ್ ಪ್ರತಾಪ್ ಯಾದವ್ ಆರು ತಿಂಗಳ ಹಿಂದೆಯಷ್ಟೇ ಆರ್‌ಜೆಡಿ ಪಕ್ಷದ ಮಾಜಿ ಸಚಿವ ಚಂದ್ರಿಕಾ ಪ್ರಸಾದ್ ರಾಯ್ ಅವರ ಪುತ್ರಿ ಐಶ್ವರ್ಯ ರಾಯ್ ಅವರನ್ನು ವಿವಾಹವಾಗಿದ್ದರು. ಆದರೆ ಈ ಮದುವೆ ನನಗೆ ಇಷ್ಟವಿಲ್ಲದೆ ನಡೆದು ಹೋಗಿದೆ ಅಂತಾ ನವೆಂಬರ್ 2ರಂದು ಪಾಟ್ನಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ವೇಳೆ ಮಾಧ್ಯಮಗಳ ಮಾತನಾಡಿದ್ದ ತೇಜ್ ಪ್ರತಾಪ್ ಯಾದವ್ ಅವರು, ಪಟ್ಟಣದಲ್ಲಿ ಬೆಳೆದಿದ್ದ ಐಶ್ವರ್ಯಾ ರಾಯ್ ಅವರನ್ನು ಮದುವೆಯಾಗಲು ನನಗೆ ಇಷ್ಟವಿರಲಿಲ್ಲ. ಈ ಕುರಿತು ತಂದೆ ತಾಯಿಗೆ ಮುಂಚೆಯೇ ಹೇಳಿದ್ದೆ. ನನ್ನ ಮಾತನ್ನು ಯಾರೋಬ್ಬರೂ ಕೇಳಲಿಲ್ಲ. ಈಗ ಆಕೆಯ ಜೊತೆಗೆ ದಾಂಪತ್ಯ ಜೀವನ ಸಾಗಿಸಲು ನನ್ನಿಂದ ಅಸಾಧ್ಯ ಎಂದು ಹೇಳಿದ್ದರು.

ನಾನು ಈ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ ಅಂತಾ ಸ್ಪಷ್ಟಪಡಿಸಿದ್ದರು. ವಿಚ್ಛೇದನ ಅರ್ಜಿ ವಿಚಾರಣೆ ನವೆಂಬರ್ 29ರಂದು ನಡೆಯಲಿದ್ದು, ಮನೆಯಲ್ಲಿ ಇದ್ದರೆ ತಮ್ಮ ನಿರ್ಧಾರವನ್ನು ಬದಲಿಸಲು ಪ್ರಯತ್ನಗಳು ನಡೆಯುತ್ತವೆ. ಹೀಗಾಗಿ ನಾನು ಮನೆಯಿಂದ ದೂರ ಉಳಿಯುವುದೇ ಉತ್ತಮ ಅಂತಾ ತೇಜ್ ಪ್ರತಾಪ್ ಯಾದವ್ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

Tej Pratap Yadav

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/

Share This Article
Leave a Comment

Leave a Reply

Your email address will not be published. Required fields are marked *