ಬೆಂಗಳೂರು: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್-6 ಬಂದು ಎರಡು ವಾರಗಳಾಗಿದೆ. ಎರಡನೇ ವಾರದಲ್ಲಿ ಸೋನು ಪಾಟೀಲ್ ತನ್ನ ಸಹ ಸ್ಪರ್ಧಿ ಗಾಯಕ ನವೀನ್ ಸಜ್ಜು ಅವರಿಗೆ ಎಲ್ಲರ ಸಮ್ಮುಖದಲ್ಲಿ ಐ ಲವ್ ಯೂ ಎಂದು ಹೇಳಿದ್ದಾರೆ.
ಹೌದು. ಸೋಮವಾರ ಬಿಗ್ ಬಾಸ್ ಎಲ್ಲರಿಗೂ ಒಂದು ಟಾಸ್ಕ್ ನೀಡಿದ್ದರು. ಸ್ಪರ್ಧಿಗಳ ಮೊದಲ ಪ್ರೀತಿಯ ನೆನಪನ್ನು ಹೊರಹಾಕಲು ಪ್ರೀತಿ ಎಂಬ ಚಟುವಟಿಕೆ ನೀಡಿದ್ದರು. ಚಟುವಟಿಕೆ ಪ್ರಕಾರ ಎಲ್ಲರೂ ತಮ್ಮ ಫಸ್ಟ್ ಲವ್ ಅನ್ನು ಎಲ್ಲರ ಮುಂದೆ ಹೇಳಬೇಕಿತ್ತು.
ಬಿಗ್‍ಬಾಸ್ ನೀಡಿದ ಈ ಚಟುವಟಿಕೆಯಲ್ಲಿ ಸೋನು ಅವರು ನಾನು ಹುಡುಗರನ್ನು ಇಷ್ಟಪಡುವುದಿಲ್ಲ. ನನಗೆ ಈವರೆಗೂ ಎಂಟು ಜನ ಪ್ರಪೋಸ್ ಮಾಡಿದ್ದಾರೆ. ಅಲ್ಲದೇ ಅದರಲ್ಲಿ ನಾಲ್ಕು ಮಂದಿ ‘ಸೋನು’ ಎಂದು ಅಚ್ಚೆ ಹಾಕಿಸಿದ್ದಾರೆ. ಆದರೆ ನಾನು ಯಾರನ್ನು ಪ್ರೀತಿಸಿಲ್ಲ ಎಂದು ಹೇಳಿದರು.
ಈ ಚಟುವಟಿಕೆಯಲ್ಲಿ ಸೋನು ಮೊದಲು ತಮ್ಮ ಅಜ್ಜ ಬಗ್ಗೆ ಮಾತನಾಡಿದ್ದರು. ನನ್ನ ಅಜ್ಜಿ ನನ್ನನ್ನು ಕಷ್ಟಪಟ್ಟು ಸಾಕಿದ್ದಾರೆ. ನನಗೆ ಅವರೆಂದರೆ ತುಂಬಾ ಇಷ್ಟ. ಅವರ ಮೇಲೆ ನನಗೆ ತುಂಬಾ ಪ್ರೀತಿ. ಅವರು ಕೂಡಿಟ್ಟ ಹಣದಲ್ಲಿ ನಾನು ಬಟ್ಟೆ ಖರೀದಿಸಿದ್ದೇನೆ ಎಂದು ತಮ್ಮ ಅಜ್ಜಿ ಬಗ್ಗೆ ಪ್ರೀತಿ ವ್ಯಕ್ತಪಡಿಸಿದರು.
ಅಜ್ಜಿ ಬಗ್ಗೆ ಮಾತನಾಡಿದ ನಂತರ ಸೋನು, ನವೀನ್ ನನಗೆ ಒಳ್ಳೆಯ ಸ್ನೇಹಿತ. ನನಗೆ ಅವನ ಮೇಲೆ ಲವ್ ಇಲ್ಲ. ಕಷ್ಟ ಬಂದಾಗ ನನಗೆ ಯಾರೂ ಸಹಾಯ ಮಾಡಿಲ್ಲ. ಆದರೆ ನವೀನ್ ಹೆಣ್ಣುಮಕ್ಕಳಿಗೆ ಬಹಳ ಗೌರವ ನೀಡುತ್ತಾನೆ. ನನಗೆ ಚಳಿ ಆಗುತ್ತಿರುವಾಗ ಅವನು ಜಾಕೇಟ್ ಕೊಟ್ಟ. ಹಾಗಾಗಿ ಫ್ರೆಂಡ್ ಆಗಿ ನವೀನ್ ‘ಐ ಲವ್ ಯು’ ಎಂದು ಹೇಳಿದರು.
ನಾನು ಸ್ನೇಹಿತನಾಗಿ ನಿನ್ನನ್ನು ಇಷ್ಟಪಡುತ್ತೇನೆ. ಲವ್, ಮದುವೆ ಎಂದರೆ ನನಗೆ ಇಷ್ಟವಿಲ್ಲ ಎಂದು ಸೋನು ಅವರು ನವೀನ್‍ಗೆ ಸ್ಪಷ್ಟಪಡಿಸಿದರು. ಸೋನು ಮಾತನ್ನು ಕೇಳಿ ನವೀನ್, “ನಿನ್ನನ್ನು ಒಳ್ಳೆಯ ಗೆಳತಿ ಎಂದು ಸ್ವೀಕರಿಸುತ್ತೇನೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv