2020ರಿಂದ ಮಾರುತಿ ಓಮ್ನಿ ಕಾರು ಉತ್ಪಾದನೆ ಸ್ಥಗಿತ

Public TV
2 Min Read
maruti suzuki omni

ನವದೆಹಲಿ: 2020ರ ಅಕ್ಟೋಬರ್ ನಿಂದ ಓಮ್ನಿ ಕಾರಿನ ಉತ್ಪಾದನೆಯನ್ನು ನಿಲ್ಲಿಸಲು ಮಾರುತಿ ಸುಝುಕಿ ಕಂಪನಿ ನಿರ್ಧರಿಸಿದೆ.

ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಅಸೆಸ್ಮೆಂಟ್ ಪ್ರೋಗ್ರಾಂ(ಬಿಎನ್‍ವಿಎಸ್‍ಎಪಿ) 2020 ಅಕ್ಟೋಬರ್ ನಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಹಲವು ವಾಹನಗಳ ಉತ್ಪಾದನೆ ಸ್ಥಗಿತವಾಗಲಿದೆ. ಅದರಲ್ಲಿ ಮಾರುತಿ ಓಮ್ನಿ ಕಾರು ಕೂಡ ಒಂದು ಎಂದು ಮಾರುತಿ ಸುಝುಕಿ ಕಂಪನಿಯ ಮುಖ್ಯಸ್ಥ  ಆರ್‌ಸಿ ಭಾರ್ಗವ ತಿಳಿಸಿದ್ದಾರೆ.   ಇದನ್ನೂ ಓದಿ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಪೆಟ್ರೋಲ್ ಕಾರುಗಳ ವಿವರ ಇಲ್ಲಿದೆ ನೋಡಿ

Maruti Omni Interiors

1983 ರಲ್ಲಿ ಮಾರುತಿ 800 ಕಾರುಗಳನ್ನು ಬಿಡುಗಡೆ ಮಾಡಿದ್ದ ಮಾರುತಿ ಸುಝುಕಿ ಎರಡನೇ ಉತ್ಪನ್ನವಾಗಿ ಮಾರುತಿ ವ್ಯಾನ್ ಬಿಡುಗಡೆ ಮಾಡಿತ್ತು. 34 ವರ್ಷಗಳಲ್ಲಿ ಮೂಲ ಕಾರಿನ ಮಾದರಿಯಲ್ಲಿ 2 ಬಾರಿ ಮಾತ್ರ ಬದಲಾವಣೆಯಾಗಿತ್ತು. 1998 ರಲ್ಲಿ ಹೆಡ್ ಲ್ಯಾಂಪ್ ಬದಲಾಗಿದ್ದರೆ, 2005 ರಲ್ಲಿ ಕಾರಿನ ಮುಂಭಾಗದ ಡ್ಯಾಶ್ ಬೋರ್ಡ್ ನಲ್ಲಿ ಸಣ್ಣ ಬದಲಾವಣೆ ಮಾಡಿ ಬಿಡುಗಡೆ ಮಾಡಿತ್ತು.

ಮಾರುತಿ ಅಲ್ಟೋ ಮತ್ತು ಮಾರುತಿ ಇಕೋದಲ್ಲೂ ಸುರಕ್ಷತೆಗೆ ಸಂಬಂಧಿಸಿ ದೋಷಗಳಿರುವ ಹಿನ್ನೆಲೆಯಲ್ಲಿ ಅವುಗಳ ವಿನ್ಯಾಸವನ್ನು ಬದಲಾವಣೆ ಮಾಡಿ ಬಿಡುಗಡೆ ಮಾಡಲಾಗುವುದು ಎಂದು ಭಾರ್ಗವ ತಿಳಿಸಿದ್ದಾರೆ.  ಇದನ್ನೂ ಓದಿ: ಗಮನಿಸಿ, 2020 ರಿಂದ ಬಿಎಸ್4 ವಾಹನಗಳ ಮಾರಾಟ ರದ್ದು

8310 3

ಸ್ಥಗಿತ ಯಾಕೆ?
ಅಪಘಾತಗಳಿಂದ ಪ್ರಾಣ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2020ರ ವೇಳೆಗೆ ಎಲ್ಲ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಎಲ್ಲಾ ಕಾರು ಉತ್ಪಾದಕಾ ಕಂಪನಿಗಳಿಗೆ ಸೂಚಿಸಿದೆ. ಓಮ್ನಿ ಕಾರಿನ ಮುಂಭಾಗ ನೇರವಾಗಿರುವ ಕಾರಣ ಅಪಘಾತದ ಸಮಯದಲ್ಲಿ ಒಳಗಿದ್ದವರಿಗೆ ಸುರಕ್ಷತೆ ನೀಡಲು ಸಾಧ್ಯವೇ ಇಲ್ಲ. ಬಿಎನ್‍ವಿಎಸ್‍ಎ ಮಾನದಂಡವನ್ನು ಅನುಸರಿಸಿ ಕಾರನ್ನು ಬಿಡುಗಡೆ ಮಾಡಲು ಓಮ್ನಿ ಮಾಡೆಲ್ ನಲ್ಲಿ ಸಾಧ್ಯವಿಲ್ಲ. ಈ ಕಾರಣಕ್ಕೆ ಈ ಮಾಡೆಲ್ ಅನ್ನೇ ಸಂಪೂರ್ಣವಾಗಿ ನಿಲ್ಲಿಸಲು ಮಾರುತಿ ಸುಝುಕಿ ಕಂಪನಿ ಮುಂದಾಗಿದೆ.   ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್ ನಲ್ಲಿ 4 ಸ್ಟಾರ್ ಪಡೆದ ವಿಟಾರಾ ಬ್ರೇಝಾ- ವಿಡಿಯೋ ನೋಡಿ ಏನಿದು ಕ್ರ್ಯಾಶ್ ಟೆಸ್ಟ್? ಹೇಗೆ ಅಂಕ ನೀಡಲಾಗುತ್ತದೆ?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *