ನಾನ್ಯಾವ ದುಡ್ಡು ಮಾಡಿದ್ದೀನಿ- ಯೋಗೇಶ್ವರ್ ವಿರುದ್ಧ ಗುಡುಗಿದ ಅನಿತಾ ಕುಮಾರಸ್ವಾಮಿ

Public TV
1 Min Read
ANITA KUMARSWAMY CPY

ರಾಮನಗರ: ನಾನ್ಯಾವ ದುಡ್ಡು ಮಾಡಿದ್ದೀನಿ, ಅವರು ಮಾಡುವ ಕೆಲಸವನ್ನು ನನಗೆ ಹೇಳುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮಾಜಿ ಶಾಸಕ ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಅನಿತಾ ಕುಮಾರಸ್ವಾಮಿ ಕೋಟಿ ಕೋಟಿ ದುಡ್ಡು ಮಾಡಿದ್ದಾರೆ ಎನ್ನುವ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಹುಣಸಹಳ್ಳಿಯ ಪ್ರಚಾರದಲ್ಲಿ ತಿರುಗೇಟು ನೀಡಿದ ಅವರು, ಚನ್ನಪಟ್ಟಣದ ಸೋಲನ್ನು ಅವರಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮಧುಗಿರಿಯಲ್ಲಿ ನಾನು ಮಾಡಿರುವ ಕೆಲಸವನ್ನು ಸುದ್ದಿಗೋಷ್ಠಿ ಮಾಡಿ ತಿಳಿಸುತ್ತೇನೆ. ಅವರು ಮಾಡಿರುವ ಕೆಲಸವನ್ನು ನನಗೆ ಹೇಳುತ್ತಿದ್ದಾರೆ. ಈ ರೀತಿಯ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದನ್ನು ಯೋಗೇಶ್ವರ್ ಬಿಡಬೇಕು. ಗೌರವದಿಂದ ಆ ಮನುಷ್ಯ ಬದುಕಲಿ ಎಂದು ಗುಡುಗಿದರು.

vlcsnap 2018 10 26 20h54m01s345

ಡಿಕೆ ಸಹೋದರರು ದೇವೇಗೌಡರ ಕುಟುಂಬಕ್ಕೆ ಶರಣಾಗಿದ್ದಾರೆ ಎನ್ನುವ ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಡಿಕೆ ಸುರೇಶ್, ನಾವು ಯಾರಿಗೂ ಶರಣಾಗಿಲ್ಲ. ಅಧಿಕಾರಕ್ಕಾಗಿ ನಾವು ಈ ಕೆಲಸ ಮಾಡುತ್ತಿಲ್ಲ. ಹೈಕಮಾಂಡ್ ಸೂಚನೆ ಮೇರೆಗೆ ಚುನಾವಣೆಯಲ್ಲಿ ಭಾಗವಹಿಸಿದ್ದೇವೆ. ಯೋಗೇಶ್ವರ್ ಬಳಿ ನಾವು ಕಲಿಯಬೇಕಾದದ್ದು ಏನು ಇಲ್ಲ. ಅವನು ಏನು ಬೇಕಾದರೂ ಹೇಳಲಿ, ಏನಾದ್ರು ಬೇಕಿದ್ರೆ ನಮ್ಮ ಹತ್ತಿರ ಬಂದೇ ಹೇಳಬಹುದು ಎಂದು ಏಕವಚನದಲ್ಲೇ ಕಿಡಿಕಾರಿದರು.

vlcsnap 2018 10 26 20h54m12s786

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *