#MeToo ಮಾತು: ಕೊಡಗು ಸುಂದರಿ ಹರ್ಷಿಕಾ ಪೂಣಚ್ಚ ಫ್ಯಾನ್ ಆಗ್ಬಿಟ್ರಂತೆ ಪ್ರಥಮ್!

Public TV
3 Min Read
PRATAM

ನಟಿ ಹರ್ಷಿಕಾ ಪೂಣಚ್ಚ ಇತ್ತೀಚೆಗೆ ಮಿ ಟೂ ಅಭಿಯಾನದ ಬಗ್ಗೆ ನೇರಾನೇರ ಅಭಿಪ್ರಾಯ ಹಂಚಿಕೊಂಡು ಸುದ್ದಿ ಮಾಡಿದ್ದರು. ಕೆಲ ನಟಿಯರು ಮಿ ಟೂ ಅಭಿಯಾನಕ್ಕೆ ಬೆಂಬಲ ನೀಡುತ್ತಿದ್ದರೆ ಹರ್ಷಿಕಾ ಮಾತ್ರ ಈ ಅಭಿಯಾನವನ್ನು ಕೆಲ ನಟಿಯರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು.

ಒಂದೆಡೆ ಹರ್ಷಿಕಾರ ಈ ಅಭಿಪ್ರಾಯದ ಪರ ಮತ್ತು ವಿರುದ್ಧವಾಗಿ ಅನಿಸಿಕೆಗಳು ಕೇಳಿ ಬರುತ್ತಿರುವಾಗಲೇ ಪ್ರಥಮ್ ಹರ್ಷಿಕಾ ಪರವಾಗಿ ಮಾತಾಡಿದ್ದಾರೆ. ಇದ್ದುದನ್ನು ಇದ್ದ ಹಾಗೆ ಹೇಳಿರೋ ಹರ್ಷಿಕಾ ಪೂಣಚ್ಚಾ ಅಭಿಮಾನಿಯಾಗಿರೋದಾಗಿಯೂ ಹೇಳಿಕೊಂಡಿದ್ದಾರೆ.

pratham

ಪ್ರಥಮ್ ತಮಗೆ ಹರ್ಷಿಕಾ ಅವರ ಪ್ರಾಮಾಣಿಕ ನಿಲುವು ಇಷ್ಟವಾಗಿದೆ ಅಂತ ಹೇಳಿಕೊಂಡಿದ್ದಾರಲ್ಲದೇ, ಈಗ ನಡೆಯುತ್ತಿರೋ ಅಸಲಿ ವಿಚಾರವನ್ನು ಪ್ರಾಮಾಣಿಕವಾಗಿ ಹೇಳಿಕೊಂಡಿರುವ ಹರ್ಷಿಕಾ ಮೇಲೆ ತಮಗೆ ಅಭಿಮಾನ ಉಕ್ಕಿರೋದಾಗಿಯೂ ಹೇಳಿಕೊಂಡಿದ್ದಾರೆ. ಹೀಗೆ ಹರ್ಷಿಕಾ ಪರವಾಗಿ ಮಾತಾಡೋ ಮೂಲಕ ಪ್ರಥಮ್ ಕೂಡಾ ಮಿ ಟೂ ಅಭಿಯಾನದ ಅಖಾಡಕ್ಕಿಳಿದಂತಾಗಿದೆ!

ಹರ್ಷಿಕಾ ಏನ್ ಹೇಳಿದ್ದರು?
ನಾನು ಈಗ ನಡೆಯುತ್ತಿರುವ ಮೀಟೂ ಅಭಿಯಾನದ ಬಗ್ಗೆ ನೋಡುತ್ತಿದ್ದೇನೆ. ನಾನು ಒಂದು ಸದೃಢ ಮಹಿಳೆಯಾಗಿ ನಾನು ಚಿತ್ರರಂಗವನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಮಹಿಳೆಯರನ್ನು ಗೌರವ ನೀಡುವುದು ಸರಿ ಆದರೆ ಕೆಲವು ನಟಿಯರು ತಮ್ಮ ಫೆಮಿನಿಟಿ ಬಳಸಿ ಪಬ್ಲಿಸಿಟಿ ಪಡೆಯುತ್ತಿದ್ದಾರೆ. ಪಬ್ಲಿಸಿಟಿ ಪಡೆಯುವುದು ಒಳ್ಳೆಯದು. ಆದರೆ ಅದಕ್ಕೆ ಒಂದು ಮಿತಿ ಇರುತ್ತದೆ. ಒಬ್ಬರ ಕುಟುಂಬ ಒಡೆದು, ಅವರ ಪತ್ನಿ, ಮಕ್ಕಳಿಗೆ ನಾಚಿಕೆಯಾಗುವಂತೆ ಮಾಡುತ್ತಾರೆ. ನಂತರ 15-20 ವರ್ಷದಿಂದ ಚಿತ್ರರಂಗದಲ್ಲಿ ಹೆಸರು ಮಾಡಿದ ನಟರ ಹೆಸರನ್ನು ಒಂದು ಹೇಳಿಕೆ ಮೂಲಕ ಅದನ್ನು ಹಾಳು ಮಾಡುತ್ತಾರೆ ಅಂತ ಹರ್ಷಿಕಾ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದರು.

https://www.facebook.com/harshika.poonacha/posts/10156288695679902

ನಾನು 10 ವರ್ಷದಿಂದ ಇಂಡಸ್ಟ್ರಿಯಲ್ಲಿದ್ದೀನಿ. ನನ್ನ ಕಣ್ಣಿನಿಂದ ನಾನು ಎಲ್ಲವನ್ನೂ ನೋಡಿದ್ದೇನೆ. ಸಾಕಷ್ಟು ನಟಿಯರು ಚಿತ್ರರಂಗದಲ್ಲಿ ಮೇಲೆ ಬರಲು ಏನು ಬೇಕಾದರು ಮಾಡುತ್ತಾರೆ. ಪುರುಷರಿಗೆ ಎಲ್ಲ ಸ್ವಾತ್ರಂತ್ಯ ಕೊಟ್ಟು ಅವರ ಜೊತೆ ನಗುತ್ತಾ, ಸಲುಗೆಯಿಂದ ತಿರುಗಾಡುತ್ತಾರೆ. ನಂತರ ಪಬ್ಲಿಸಿಟಿಗಾಗಿ ಅವರ ಮೇಲೆ ಆರೋಪ ಮಾಡುತ್ತಾರೆ. ಆರೋಪ ಮಾಡುವ ನಟಿಯರು ಈ ಹಿಂದೆ ಗಾಂಜಾ ಸೇವಿಸಿ, ವಿದೇಶದಲ್ಲಿ ಹಾಡಿನ ಶೂಟಿಂಗ್ ಇದ್ದಾಗ ನಟ ಅಥವಾ ಖ್ಯಾತ ವ್ಯಕ್ತಿ ಮೈಮೇಲೆ ಬೀಳುವುದ್ದನ್ನು ನಾನು ಸ್ವತಃ ನೋಡಿದ್ದೇನೆ. ಕೆಲವು ವಿಷಯಗಳನ್ನು ನಾನು ಹೇಳುವುದನ್ನು ಇಷ್ಟಪಡುವುದಿಲ್ಲ.

ಚಿತ್ರರಂಗದಲ್ಲಿ ಹೆಸರು ಮಾಡುವವರೆಗೂ ಅವರು ಏನೂ ಮಾಡಿದರು ನಿಮಗೆ ಸರಿ ಎಂದು ಎನಿಸುತಿತ್ತು. ಚಿತ್ರರಂಗದಲ್ಲಿ ಹೆಸರು ಮಾಡಿದ ಮೇಲೆ ಇನ್ನಷ್ಟು ಯಶಸ್ಸಿಗಾಗಿ ನೀವು ಅವರ ಮೇಲೆ ಆರೋಪ ಮಾಡುತ್ತೀರಿ. 10, 5, 2 ವರ್ಷಗಳ ಹಿಂದೆ ಈ ರೀತಿ ನಡೆಯುವಾಗ ನಿಮಗೆ ಮೀಟೂ ಏನಾಗಿತ್ತು. ಆ ಸಮಯದಲ್ಲಿ ನಿಮಗೆ ಇದೆಲ್ಲ ಸರಿ ಅನ್ನಿಸಿತ್ತು. ಆದರೆ ಈಗ ನಿಮಗೆ ಮಹಿಳೆಯರನ್ನು ಈ ಪುರುಷರಿಂದ ರಕ್ಷಿಸಬೇಕು ಎಂದು ಅನಿಸುತ್ತಿದ್ದೆ ಅಲ್ವಾ. ನಾನ್ಸೆನ್ಸ್, ಇದು ಅಟ್ಟರ್ ನಾನ್ಸೆನ್ಸ್ ಎಂದು ಪೋಸ್ಟ್ ಮಾಡಿದ್ದಾರೆ.

harshika poonacha

ಹೆಸರಾಂತ ನಿರ್ಮಾಪಕರೊಬ್ಬರು ನನಗೆ ಒಂದು ವಿಡಿಯೋವನ್ನು ತೋರಿಸಿದ್ದರು. ಆ ವಿಡಿಯೋದಲ್ಲಿ ಈಗ ಮೀಟೂ ಎಂದು ಅಭಿಯಾನ ಮಾಡುತ್ತಿರುವ ನಟಿಯರು ಖ್ಯಾತ ವ್ಯಕ್ತಿ ಭುಜದ ಮೇಲೆ ಮಲಗಿ ಖುಷಿಯಾಗಿ ಗಾಂಜಾ ಹೊಡೆಯುತ್ತಾ ಇನ್ನೊಬ್ಬರ ಹೆಸರನ್ನು ಹೇಗೆ ಹಾಳು ಮಾಡಬೇಕೆಂದು ಮಾತನಾಡಿರುವುದನ್ನು ನೋಡಿದ್ದೇನೆ. ಅಲ್ಲದೇ ಮತ್ತೊಂದು ವಿಡಿಯೋದಲ್ಲಿ ಆ ಖ್ಯಾತ ನಟನೇ ಅರ್ಧ ನಗ್ನಳಾಗಿರುವ ನಟಿಯ ವಿಡಿಯೋ ಮಾಡುತ್ತಿರುತ್ತಾರೆ. ಆ ವಿಡಿಯೋದಲ್ಲಿ ನಟಿಯೊಬ್ಬಳು ನಗುತ್ತಾ ನಿನ್ನ ಮುಂದಿನ ಚಿತ್ರದಲ್ಲೂ ನಾನೇ ನಟಿ ಓಕೆನಾ ಎಂದು ಹೇಳುತ್ತಾಳೆ.

ನಾನು ಒಬ್ಬಳು ನಟಿಯಾಗಿ ನಾನು ಈ ರೀತಿಯ ಪ್ರಕರಣಗಳು ನಡೆದಿದೆ. ಆದರೆ ನಾನು ಅದನ್ನು ನಿರಾಕರಿಸಿದ್ದೇನೆ. ನಾನು 10 ವರ್ಷದಿಂದ ಚಿತ್ರರಂಗದಲ್ಲಿ ಇದ್ದೇನೆ. ಇದೂವರೆಗೂ ಯಾರೂ ನನ್ನನ್ನು ಬೆರಳು ಮಾಡಿ ತೋರಿಸಲಿಲ್ಲ. ನಾನು ಈಗಲೂ ಕ್ಲೀನ್ ಹಾಗೂ ಪ್ಯೂರ್ ಆಗಿದ್ದೀನಿ. ನಾನು ದೊಡ್ಡ ನಟರ ಜೊತೆ ಹಲವು ಚಿತ್ರಗಳನ್ನು ಮಿಸ್ ಮಾಡಿಕೊಂಡೆ. ಆದರೆ ನಾನು ಈಗ ಖುಷಿಯಾಗಿದ್ದೇನೆ. ಅಲ್ಲದೇ ಎಲ್ಲ ಚಿತ್ರರಂಗದ ಕಲಾವಿದರ ಜೊತೆ ನನ್ನ ಬಾಂಧವ್ಯ ಚೆನ್ನಾಗಿದೆ.

Harshika Pooncha 1

ನಾನು ಈಗ ಹೇಳಿರುವುದನ್ನು ಕೆಲವರು ವಿರೋಧಿಸಬಹುದು. ಆದರೆ ಇದು ನಿಜ. ಕೆಲವು ಪುರುಷರು ಕೆಟ್ಟವರು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅವರು ನಿಮ್ಮನ್ನು ರೇಪ್ ಮಾಡುವುದಿಲ್ಲ. ನೀವು ಧೈರ್ಯವಾಗಿ ಇಲ್ಲ ಎಂದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಆಗುತ್ತದೆ. ಈಗ ಪುರುಷರು ವಿಟೂ ಮಾಡುವ ಸಮಯ. ಏಕೆಂದರೆ ಸಾಕಷ್ಟು ನಟಿಯರು ಹೆಸರು ಪಡೆಯಲು ಖ್ಯಾತ ವ್ಯಕ್ತಿಗಳನ್ನು ಬಳಸಿಕೊಂಡಿದ್ದಾರೆ. ಅವರಿಗೆ ಬೇಕಾಗಿದ್ದು ಸಿಕ್ಕಿದ ನಂತರ ಅವರನ್ನು ದೂರ ತಳ್ಳಿ ಅವರ ಮೇಲೆಯೇ ಆರೋಪ ಮಾಡುತ್ತಾರೆ ಅಂತ ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=5JRSNBMt95Q

https://www.youtube.com/watch?v=U2km30FcBdY

Share This Article
Leave a Comment

Leave a Reply

Your email address will not be published. Required fields are marked *