ಶ್ರದ್ಧಾ ಬಳಿಕ ಶೃತಿ ಬೆನ್ನಿಗೆ ನಿಂತ ರಾಗಿಣಿ

Public TV
1 Min Read
shruthi hariharan ragini

ಮಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧದ ಮೀಟೂ ಆರೋಪ ಮಾಡಿದ್ದ ಶೃತಿ ಹರಿಹರನ್ ಪರ ಶ್ರದ್ಧಾ ಶ್ರೀನಾಥ್ ಬೆಂಬಲ ನೀಡಿದ ಬೆನ್ನಲ್ಲೇ ನಟಿ ರಾಗಿಣಿ ಕೂಡ ಬೆನ್ನಿಗೆ ನಿಂತಿದ್ದಾರೆ.

ಮಂಗಳೂರಿನ ಮಂಗಳಾದೇವಿ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ರಾಗಿಣಿ, ಮೀಟೂ ಅಭಿಯಾನದಿಂದ ಸಮಸ್ಯೆ ಹೇಳಿಕೊಳ್ಳುವುದು ಒಳ್ಳೆಯ ವಿಷಯ. ಅದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಶ್ರುತಿ ಹರಿಹರನ್ ಒಳ್ಳೆ ಹುಡುಗಿ, ಅನಗತ್ಯವಾಗಿ ಹೇಳಿಕೊಳ್ಳಲ್ಲ. ಶೃತಿ ಅವರಿಗೆ ನಿಜವಾಗಿ ಅಂತಹ ಘಟನೆ ನಡೆದಿದ್ದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಅಭಿಪ್ರಾಯ ಪಟ್ಟರು.

ragini 1 copy

ಮೀಟೂ ಅಭಿಯಾನವನ್ನು ಯಾರು ಕೂಡ ಸ್ವಾರ್ಥಕ್ಕೆ ಬಳಸುವುದು ಸರಿಯಲ್ಲ ಎಂದು ತಿಳಿಸಿದ ರಾಗಿಣಿ, ಪ್ರತಿ ದಿನ ಈ ಅಭಿಯಾನ ಹೆಚ್ಚಾಗುತ್ತಿದೆ. ಇದು ಕೇವಲ ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ಅನ್ವಯವಾಗುತ್ತದೆ. ಈ ಅಭಿಯಾನ ಆಗುತ್ತಿರುವುದು ನನಗೆ ಸಂತಸ ತಂದಿದೆ. ನಾನು ಮೀಟೂ ಪರವಾಗಿ ನಿಲ್ಲುತ್ತೇನೆ ಎಂದರು. ಇದನ್ನೂ ಓದಿ: #MeToo ಅಭಿಯಾನವನ್ನ ಕೆಲವರು ಪ್ರಚಾರಕ್ಕೆ ಬಳಸಿಕೊಳ್ತಿದ್ದಾರೆ: ನಟಿ ರಾಗಿಣಿ

ಇದೇ ವೇಳೆ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ದೇವರ ಪೂಜೆಯಲ್ಲಿ ಯಾವತ್ತೂ ತಾರತಮ್ಯ ಮಾಡಬಾರದು. ಪೂಜೆ, ಭಕ್ತಿ ವಿಚಾರದಲ್ಲಿ ಗಂಡು- ಹೆಣ್ಣೆಂಬ ಭೇದ ಇರಲ್ಲ. ಮಹಿಳೆಯರ ಋತುಚಕ್ರ ಹೆಸರಲ್ಲಿ ಪ್ರವೇಶ ನಿಷೇಧಿಸುವುದು ತಪ್ಪು. ಆದರೆ ಸಂಸ್ಕೃತಿ, ಸಂಪ್ರದಾಯದ ವಿಚಾರ ಇದ್ದರೆ ಚರ್ಚೆ ನಡೆಯುವುದು ಉತ್ತಮ, ಯಾರೂ ಸಂಪ್ರದಾಯವನ್ನು ಪ್ರಶ್ನೆ ಮಾಡಲು ಮುಂದಾಗಬಾರದು ಎಂದರು. ಇದನ್ನೂ ಓದಿ: #MeToo ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

ragini 2 copy

Share This Article
Leave a Comment

Leave a Reply

Your email address will not be published. Required fields are marked *