Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಿನ್ನದ ಅಂಬಾರಿ ಮೈಸೂರಿಗೆ ಬಂದಿದ್ದು ಹೇಗೆ? `ಮೈಸೂರು ದಸರಾ’ವಾಗಿ ವಿಶ್ವವಿಖ್ಯಾತಿ ಪಡೆದ ಕಥೆ ಓದಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಚಿನ್ನದ ಅಂಬಾರಿ ಮೈಸೂರಿಗೆ ಬಂದಿದ್ದು ಹೇಗೆ? `ಮೈಸೂರು ದಸರಾ’ವಾಗಿ ವಿಶ್ವವಿಖ್ಯಾತಿ ಪಡೆದ ಕಥೆ ಓದಿ

Districts

ಚಿನ್ನದ ಅಂಬಾರಿ ಮೈಸೂರಿಗೆ ಬಂದಿದ್ದು ಹೇಗೆ? `ಮೈಸೂರು ದಸರಾ’ವಾಗಿ ವಿಶ್ವವಿಖ್ಯಾತಿ ಪಡೆದ ಕಥೆ ಓದಿ

Public TV
Last updated: October 17, 2018 1:27 pm
Public TV
Share
2 Min Read
golden ambari 2
SHARE

ಭಾರತದಲ್ಲಿ ದಸರಾ ಹಬ್ಬವನ್ನು ಎಲ್ಲ ಕಡೆ ಆಚರಿಸಿದ್ದರೂ, ಮೈಸೂರಿನ ದಸರಾ ಮಾತ್ರ ವಿಭಿನ್ನ. ಹೀಗಾಗಿ ಮೈಸೂರಿನ ದಸರಾ ವಿಶ್ವವಿಖ್ಯಾತಿಗಳಿಸಿದೆ. ದಸರಾ ಹಬ್ಬದ ಜಂಬೂ ಸವಾರಿಯಲ್ಲಿ ಪ್ರಮುಖ ಆಕರ್ಷಣೆಯೇ 750 ಕೆಜಿ ತೂಕದ ಚಿನ್ನದ ಅಂಬಾರಿ. ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿ ದೇವಿಯ ಈ ಮೆರವಣಿಗೆಯನ್ನು ನೋಡಲು ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಮೈಸೂರಿಗೆ ಬರುತ್ತಾರೆ.

ರಸ್ತೆಯ ಮೂಲೆಮೂಲೆಗಳಲ್ಲಿ ಜನಸಾಗರವೇ ಈ ಅಂಬಾರಿಯನ್ನು ನೋಡುತ್ತಿರುತ್ತದೆ. ತಾಯಿ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊತ್ತು ಅರ್ಜುನ ಮತ್ತು ಆತನ ಜೊತೆ ಆನೆಗಳು ಬನ್ನಿ ಮಂಟಪದತ್ತ ಹೋಗುವ ದೃಶ್ಯ ನೋಡುಗರನ್ನು ಮನಸೂರೆಗೊಳಿಸುವಂತೆ ಮಾಡುತ್ತದೆ.

jambu savari mysuru 6

ಈ ಅಂಬಾರಿಯ ಮೂಲ ಹಾಗೂ ನಡೆದು ಬಂದ ಕಥೆಯೇ ರೋಚಕ. ಅಂಬಾರಿಯ ನಂಟು ಕೊಪ್ಪಳದ ಕುಮ್ಮಟದುರ್ಗಕ್ಕೂ ಇದೆ. ಅಂಬಾರಿಯು 14ನೇ ಶತಮಾನದ ಪ್ರಾರಂಭದಲ್ಲಿ ಕಂಪಿಲರಾಯನ ಆಡಳಿತದ ಕುಮ್ಮಟ ದುರ್ಗದಲ್ಲಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಮಹಾರಾಷ್ಟ್ರದ ದೇವಗಿರಿಯಲ್ಲಿ ಮೂಲತಃ ಈ ರತ್ನ ಖಚಿತ ಅಂಬಾರಿ ಇತ್ತು. ದೇವಗಿರಿ ನಾಶವಾದ ಬಳಿಕ ಇದನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗ ನಾಯಕನಿಗೆ ಹಸ್ತಾಂತರ ಮಾಡಿ, ಕಾಪಾಡುವಂತೆ ಕೇಳಿಕೊಳ್ಳಲಾಗಿತ್ತು. ಮುಮ್ಮಡಿ ಸಿಂಗ ನಾಯಕ ಇದನ್ನು ಬಳ್ಳಾರಿ ಬಳಿಯ ರಾಮದುರ್ಗ ಕೋಟೆಯಲ್ಲಿ ಮುಚ್ಚಿಟ್ಟಿದ್ದ. ಈತನ ಮಗ ಕಂಪಿಲರಾಯ ರಾಜ್ಯ ವಿಸ್ತರಿಸುತ್ತಾ, ಕುಮ್ಮಟದುರ್ಗವನ್ನು ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಕುಮ್ಮಟದುರ್ಗದಲ್ಲಿ ಶ್ರೀ ದುರ್ಗಾದೇವಿಯನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಈ ಪೂಜೆಯನ್ನು ಕಂಪಿಲರಾಯನ ಮಗ ಯುವರಾಜನ ಕಾಲದಲ್ಲಿಯೂ ನಡೆಯುತ್ತದೆ.

jambu savari mysuru 4

1327ರಲ್ಲಿ ದೆಹಲಿ ಸುಲ್ತಾನರ ದಾಳಿಗೆ ಕಂಪಿಲ ರಾಜ್ಯ ನಾಶವಾಗುತ್ತದೆ. ಆಗ ಭಂಡಾರ ಸಂರಕ್ಷಣೆ ಮಾಡುತ್ತಿದ್ದ ಹಕ್ಕ-ಬುಕ್ಕ ಸಹೋದರರು ಚಿನ್ನದ ಅಂಬಾರಿಯನ್ನು ಹುತ್ತವೊಂದರಲ್ಲಿ ಮುಚ್ಚಿಟ್ಟು ಹೋಗುತ್ತಾರೆ. ಇದಾದ ನಂತರ 1,336ರ ವೇಳೆಗೆ ದೆಹಲಿ ಸುಲ್ತಾನರು ನಾಶವಾದ ಸಮಯದಲ್ಲಿ ಪುನಃ ರಾಜ್ಯ ಸ್ಥಾಪಿಸುವುದಕ್ಕೆ ಹಕ್ಕಬುಕ್ಕರು ಮುಂದಾಗುತ್ತಾರೆ. ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಲಾಗುತ್ತದೆ. ಇದು ವಿಜಯನಗರ ಸಾಮ್ರಾಜ್ಯದ ಮೊದಲನೇ ರಾಜಧಾನಿಯಾಗುತ್ತದೆ. ನಂತರ ಹಕ್ಕ ಬುಕ್ಕರು ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿ ಸ್ಥಾಪನೆ ಮಾಡುತ್ತಾರೆ. ಇದಾದ ನಂತರ ಹಂಪಿಗೆ ಅಂಬಾರಿ ಸ್ಥಳಾಂತರ ಮಾಡಲಾಗುತ್ತದೆ.

ಸಂಗಮ, ಸಾಳವ, ತುಳುವ ಹಾಗೂ ಅರವಿಡು ಎನ್ನುವ ನಾಲ್ಕು ವಂಶಗಳು ವಿಜಯನಗರ ಸಾಮ್ರಾಜ್ಯ ಆಳ್ವಿಕೆ ಮಾಡುತ್ತವೆ. ವಿಜಯನಗರ ಸಾಮ್ರಾಜ್ಯ ನಾಶವಾದಾಗ ಅಂಬಾರಿಯನ್ನು ಸಂರಕ್ಷಣೆಗಾಗಿ ಆಂಧ್ರದ ಪೆನಗೊಂಡಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಬಳಿಕ ಕೆಲವು ವರ್ಷದ ನಂತರ ಶ್ರೀರಂಗಪಟ್ಟಣ, ಕೊನೆಯದಾಗಿ ಮೈಸೂರಿಗೆ ಬಂದು ಸೇರುತ್ತದೆ.

jambu savari mysuru 3

`ಮೈಸೂರು ದಸರಾ’ ಆಗಿದ್ದು ಹೇಗೆ?
ಆರಂಭದಲ್ಲಿ ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರು. ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ಮೈಸೂರಿನ ಯದುವಂಶಸ್ಥರು ಇದನ್ನು ಮುಂದುವರಿಸಿಕೊಂಡು ಬಂದರು ಎಂದು ಇತಿಹಾಸ ಹೇಳುತ್ತದೆ. ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯವನ್ನು ಆಳುತ್ತಿದ್ದ ರಾಜ ಒಡೆಯರ್ 1610ರಲ್ಲಿ ವಿಜಯದಶಮಿಯನ್ನು ಮೊದಲು ಆಚರಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದರು. 1800ರಲ್ಲಿ ಮೈಸೂರಿನಲ್ಲಿ ದಸರಾ ಆರಂಭವಾಗಿ ಬಳಿಕ “ಮೈಸೂರು ದಸರಾ” ಎಂದೇ ವಿಶ್ವವಿಖ್ಯಾತಿ ಪಡೆಯಿತು.

jambu savari mysuru 7

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

TAGGED:ambarimysurumysuru dasaraPublic TVಅಂಬಾರಿಪಬ್ಲಿಕ್ ಟಿವಿಮೈಸೂರುಮೈಸೂರು ದಸರಾ
Share This Article
Facebook Whatsapp Whatsapp Telegram

Cinema news

Samantha Ruth Prabhu 1
ಮೊದಲು ನಿಧಿ ಅಗರ್ವಾಲ್‌, ನಂತ್ರ ಸಮಂತಾ – ಫ್ಯಾನ್ಸ್‌ನಿಂದಲೇ ಕಸಿವಿಸಿ
Cinema Latest South cinema Top Stories
Darshan Fans
ವಿಜಯಲಕ್ಷ್ಮಿ ದರ್ಶನ್‌ ಬೆಂಕಿ ಮಾತು – ಕಿಚ್ಚನ ವಿರುದ್ಧ ಮಾತಿನ ಯುದ್ಧಕ್ಕೆ ನಿಂತ ಡಿಬಾಸ್‌ ಫ್ಯಾನ್ಸ್‌
Bengaluru City Cinema Latest Main Post Mandya Sandalwood
sudeep vijayalakshmi
ಸುದೀಪ್ ಮಾತಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟಕ್ಕರ್
Cinema Latest Sandalwood Top Stories
rajath Chaitra
ಕಂಟೆಸ್ಟೆಂಟ್‌ಗಳಲ್ಲ.. ಅತಿಥಿಗಳು – ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್
Cinema Latest Sandalwood Top Stories

You Might Also Like

Bangladesh Hindu Man
Latest

ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ – ಭಾರತದ ಆರೋಪ ತಿರಸ್ಕರಿಸಿದ ಬಾಂಗ್ಲಾ ವಿದೇಶಾಂಗ ಸಚಿವಾಲಯ

Public TV
By Public TV
18 minutes ago
India Bangal Clash
Latest

ಹಾದಿ ಹತ್ಯೆ ಬಳಿಕ ಭುಗಿಲೆದ್ದ ಹಿಂಸಾಚಾರ – ಬಾಂಗ್ಲಾದಲ್ಲಿ ಭಾರತೀಯ ವೀಸಾ ಸೇವೆ ಸ್ಥಗಿತ

Public TV
By Public TV
35 minutes ago
Sheikh Hasina 1
Latest

ಬಲವಿಲ್ಲದ ಯೂನಸ್ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ವಿಫಲ – ಬಾಂಗ್ಲಾ ಹಿಂಸಾಚಾರಕ್ಕೆ ಮಾಜಿ ಪ್ರಧಾನಿ ಶೇಖ್ ಹಸೀನಾ ಕಿಡಿ

Public TV
By Public TV
2 hours ago
Chitradurga
Chitradurga

ಹಿಂದೂ ದೇವರ ಶಿಲಾಶಾಸನವಿರುವ ಭೂಮಿಗೆ ವಕ್ಫ್ ಕೊಕ್ಕೆ – ಕೋಟೆ ನಾಡಿನಲ್ಲಿ ಧರ್ಮ ದಂಗಲ್‌ ಜೋರು

Public TV
By Public TV
3 hours ago
crime news honour killing case man kills daughter in Hubballi Manya
Crime

ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ | ಮನೆಗೆ ನುಗ್ಗಿ 7 ತಿಂಗಳ ಗರ್ಭಿಣಿಯನ್ನೇ ಕೊಂದ ತಂದೆ

Public TV
By Public TV
3 hours ago
Kukke Shri Subrahmanya
Dakshina Kannada

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ಕಿರುಷಷ್ಠಿ ಮಹೋತ್ಸವ; ಅನ್ಯಧರ್ಮಿಯರ ಆಹ್ವಾನಕ್ಕೆ ಭಾರೀ ವಿರೋಧ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?