ಬೆಳಗಾವಿ/ಬಾಗಲಕೋಟೆ: ಅಕ್ರಮ ಆಸ್ತಿ ಗಳಿಕೆಯ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಾಗಲಕೋಟೆ ಗ್ರಾಮೀಣ ಕುಡಿಯೋ ನೀರು ಸರಬರಾಜು ಇಲಾಖೆಯ ಮುಖ್ಯ ಸಹಾಯಕ ಎಂಜನಿಯರ್ ಚಿದಾನಂದ್ ಮಿಂಚನಾಳ್ ಎಂಬವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಚೇರಿ ಹಾಗೂ ವಿಜಯಪುರದಲ್ಲಿರುವ ಮನೆಯ ಮೇಲೆಯೂ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ಬಾಗಲಕೋಟೆ ಎಸಿಬಿ ಡಿವೈಎಸ್.ಪಿ ಎಂ.ವಿ ಮಲ್ಲಾಪುರ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ವಿಜಯಪುರ ವಜ್ರ ಹನುಮಾನ್ ನಗರ, ಎಂ.ಬಿ ಪಾಟೀಲ್ ನಗರದಲ್ಲಿರುವ ಎರಡು ಮನೆ ಹಾಗೂ ಬಾಗಲಕೋಟೆಯ ಕಚೇರಿ ಮೇಲೆ ದಾಳಿ ಮಾಡಿ ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೆಳಗಾವಿಯಲ್ಲೂ ಕೂಡ ಖಾನಾಪುರ ತಾಲೂಕಿನ ಉಪಅರಣ್ಯ ಸಂರಕ್ಷಣಾ ಅಧಿಕಾರಿಯ ಮನೆ ಮೇಲೆ ದಾಳಿ ಮಾಡಲಾಗಿದೆ. ಎಸಿಬಿ ಎಸ್.ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಮನೆ, ಸಿಬಿ ಪಾಟೀಲ್ ಎಸಿಎಫ್ ಅಧಿಕಾರಿಯ ಮನೆ ಹಾಗೂ ಖಾನಾಪುರದಲ್ಲಿರುವ ಕಚೇರಿ ಮತ್ತು ಬೈಲಹೊಂಗಲದಲ್ಲಿರುವ ಸಹೋದರ ಮನೆ ಸೇರಿ ಒಟ್ಟು ಮೂರು ಕಡೆ ದಾಳಿ ನಡೆಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv