ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 2018ರ ಸಂಭ್ರಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾನುವಾರ ಯುವ ಸಂಭ್ರಮಕ್ಕೆ ಚಾಲನೆ ನೀಡಲಾಗಿದ್ದು, ನಟಿ ಹರ್ಷಿಕಾ ಪೂಣಚ್ಚ ಯೂತ್ಸ್ ಉತ್ತಾಹ ಹೆಚ್ಚಿಸಿದ್ದಾರೆ.
ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಡೋಲು ಬಾರಿಸುವ ಮೂಲಕ ಯುವ ಸಂಭ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಶಾಸಕರಾದ ಎಲ್.ನಾಗೇಂದ್ರ, ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಎಸ್‍ಪಿ ಅಮಿತ್ ಸಿಂಗ್ ಉಪಸ್ಥಿತರಿದ್ದರು.
ಯುವ ಸಂಭ್ರಮಕ್ಕೆ ನಟಿ ಹರ್ಷಿಕಾ ಪೂರ್ಣಚ್ಚ ತಾರಾ ಮೆರಗು ನೀಡಿದರು. ಭಾನುವಾರದಿಂದ ಅಕ್ಟೋಬರ್ 7ರ ವರೆಗೂ ಯುವ ಸಂಭ್ರಮ ನಡೆಯಲಿದ್ದು, ಪ್ರತಿದಿನ 20 ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಯುಕ್ರೆನ್ ದೇಶದ ಯುಲಿಯಾ ನೃತ್ಯಗಾರ್ತಿ ವಿಶೇಷ ನೃತ್ಯ ಮಾಡಿದ್ದಾರೆ. ಕ್ಲಸ್ಟರ್ ಇಲಿಯಂ ಬಲೂನ್ ಮೂಲಕ ನೃತ್ಯ ಮಾಡಲಾಗಿದ್ದು, ಬಯಲು ರಂಗಮಂದಿರದ ಯುವ ಸಂಭ್ರಮದಲ್ಲಿ ಯುವ ಸಮೂಹ ಮಿಂದೆದ್ದಿದ್ದಾರೆ.
ವಿಂಟೇಜ್ ಕಾರು ರ‍್ಯಾಲಿ ಕೂಡ ಮೈಸೂರಿಗೆ ತಲುಪಿದೆ. ಐತಿಹಾಸಿಕ ವಾಹನಗಳ ಭಾರತದ ಕಾರು ಒಕ್ಕೂಟ ಹಾಗೂ ಯುನೆಸ್ಕೋ ಸಹಯೋಗದಲ್ಲಿ ಕಾರ್ ರ‍್ಯಾಲಿ ನಡೆದಿದೆ. ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಸಿಎಂ ಕುಮಾರಸ್ವಾಮಿ ರ‍್ಯಾಲಿ ಉದ್ಘಾಟಿಸಿದ್ದರು. ವಿಧಾನಸೌಧ ಆವರಣದಲ್ಲಿ ವಿಂಟೇಜ್ ಕಾರ್ ರ್ಯಾಲಿಗೆ ಚಾಲನೆ ನೀಡಿದರು.
ಬೆಂಜ್, ಫೋಕ್ಸ್ ವಾಗನ್, ಬೀಡಲ್ ಕಾರು ಸೇರಿದಂತೆ 19ನೇ ಶತಮಾನದ ಕಾರ್ ಗಳ ರ‍್ಯಾಲಿ ನಡೆದಿದೆ. ಸದ್ಯ ವಿಂಟೇಜ್ ಕಾರುಗಳನ್ನು ನೋಡಲು ಜನತೆ ಮುಗಿಬಿದ್ದಿದ್ದು, ಕಾರುಗಳು ಲಲಿತ್ ಮಹಲ್ ತಲುಪಿದೆ. ಸಚಿವ ಜಿ.ಟಿ ದೇವೇಗೌಡ ವಿಂಟೇಜ್ ಕಾರಿನಲ್ಲಿ ಸುತ್ತು ಹೊಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv