ವಿನೋದ್‍ರಾಜ್ ಕಾರಿನಲ್ಲಿದ್ದ 1 ಲಕ್ಷ ರೂ. ದೋಚಿದ ಕಳ್ಳರು!

Public TV
1 Min Read
Actor Vinod raj

ಬೆಂಗಳೂರು: ಸರ್ ಟೈರ್ ಪಂಚರ್ ಆಗಿದೆ ಎಂದು ಹೇಳಿ, ನಟ ವಿನೋದ್ ರಾಜ್ ಅವರ ಗಮನವನ್ನು ಬೇರೆಡೆಗೆ ಸೆಳೆದು ಕಳ್ಳರು ಕಾರಿನಿಂದ 1 ಲಕ್ಷ ರೂ. ಹಣವನ್ನು ಕದ್ದು ಪರಾರಿಯಾಗಿದ್ದಾರೆ.

ನೆಲಮಂಗಲ ಪಟ್ಟಣದ, ಇಂಡಸ್‍ಲ್ಯಾಂಡ್ ಬ್ಯಾಂಕ್ ಮುಂಭಾಗದಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಚಿತ್ರೋದ್ಯಮದಿಂದ ದೂರ ಉಳಿದಿರುವ ನಟ ವಿನೋದ್‍ರಾಜ್ ಕೃಷಿ ಚಟುವಟಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ತೋಟದ ಕೂಲಿಯಾಳುಗಳಿಗೆ ಸಂಬಳ ನೀಡಲು ಬ್ಯಾಂಕ್‍ನಿಂದ ಹಣವನ್ನು ಡ್ರಾ ಮಾಡಿದ್ದರು.

Nelamangal Police Station

ನಡೆದಿದ್ದು ಏನು?
ವಿನೋದ್‍ರಾಜ್ ಅವರು ಇಂಡಸ್‍ಲ್ಯಾಂಡ್ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು, ಬ್ಯಾಂಕ್ ಮುಂಭಾಗದಲ್ಲಿ ನಿಲ್ಲಿಸಿದ್ದ ತಮ್ಮ ಕಾರಿನಲ್ಲಿ ಕುಳಿತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಒಬ್ಬ ಕಳ್ಳರು, ಸರ್ ನಿಮ್ಮ ಕಾರಿನ ಟೈರ್ ಪಂಚರ್ ಆಗಿದೆ ಅಂತ ಹೇಳಿದ್ದಾರೆ. ಅವರ ಮಾತು ಕೇಳಿ ವಿನೋದ್‍ರಾಜ್ ಕಾರಿನಿಂದ ನೋಡುತ್ತಿದ್ದಂತೆ ಕಳ್ಳರು ತಮ್ಮ ಕೈಚಳಕ ತೋರಿಸಿ, ಕಾರಿನಲ್ಲಿದ್ದ ಒಂದು ಲಕ್ಷ ರೂ. ಇದ್ದ ಹಣದ ಬ್ಯಾಗ್ ಎಗರಿಸಿದ್ದಾರೆ. ಈ ಕುರಿತು ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

vinod leelavati

Share This Article
Leave a Comment

Leave a Reply

Your email address will not be published. Required fields are marked *