ಅಂಪೈರ್ ಕೆಟ್ಟ ತೀರ್ಪಿಗೆ ಧೋನಿ ಔಟ್- ಕೆಎಲ್ ರಾಹುಲ್ ಟ್ರೋಲ್ ಮಾಡಿದ ಟ್ವಿಟ್ಟಿಗರು

Public TV
2 Min Read
Dhoni kl rahul

ದುಬೈ: ಇಲ್ಲಿನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡೋ ಅಫ್ಘಾನ್ ಕದನ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯಕಂಡಿದ್ದು, ಕ್ರಿಕೆಟ್ ಶಿಶು ಅಫ್ಘಾನ್ ಹೋರಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಈ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ಧೋನಿ ಅಂಪೈರ್ ಕೆಟ್ಟ ತೀರ್ಪಿಗೆ ಔಟಾಗಿದ್ದರು. ಆದರೆ ಇದನ್ನು ಕಂಡ ಅಭಿಮಾನಿಗಳು ಕೆಎಲ್ ರಾಹುಲ್‍ರನ್ನು ಟ್ರೋಲ್ ಮಾಡಿದ್ದಾರೆ.

ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಆಡಲು ಅವಕಾಶ ಪಡೆದ ಕೆಎಲ್ ರಾಹುಲ್ ಆರಂಭಿಕರಾಗಿ ಕಣ್ಣಕ್ಕೆ ಇಳಿದು ಅರ್ಧ ಶತಕ ಪೂರೈಸಿದ್ದರು. ಆದರೆ ಪಂದ್ಯದ 21 ಓವರ್ ಎಸೆದ ರಶೀದ್ ಖಾನ್ ಬೌಲಿಂಗ್‍ನಲ್ಲಿ ಎಲ್‍ಬಿ ಡಬ್ಲ್ಯೂ ಆಗಿದ್ದರು. ಈ ವೇಳೆ ರಾಹುಲ್ ಅಂಪೈರ್ ತೀರ್ಪು ಪರಾಮರ್ಶೆ (ಡಿಆರ್‍ಎಸ್) ಪಡೆದರು. ಮೂರನೇ ಅಂಪೈರ್ ಪರಿಶೀಲನೆ ವೇಳೆಯೂ ರಾಹುಲ್ ಔಟಾಗಿದ್ದರು. ಇದರೊಂದಿಗೆ ಟೀಂ ಇಂಡಿಯಾ ಡಿಆರ್‍ಎಸ್ ಅವಕಾಶವನ್ನು ಕಳೆದುಕೊಂಡಿತ್ತು. ಬಳಿಕ ಬಂದ ಧೋನಿ ಕೂಡ ಜಾವೇದ್ ಅಹಮ್ಮದಿ ಬೌಲಿಂಗ್‍ನಲ್ಲಿ ಎಲ್‍ಬಿ ಡಬ್ಲ್ಯೂ ಆಗದಿದ್ದರು ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಇದನ್ನು ಅಂಪೈರ್ ತೀರ್ಪು ಮರುಪರಿಶೀಲನೆ ಮಾಡಲು ಅವಕಾಶವಿಲ್ಲದೇ 8 ರನ್ ಗಳಿಸಿದ್ದ ಧೋನಿ ಪೆವಿಲಿಯನತ್ತ ಸಾಗಿದ್ದರು. ಇದರಿಂದ ಅಭಿಮಾನಿಗಳು ಸದ್ಯ ರಾಹುಲ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ರಾಹುಲ್, ಪಂದ್ಯದಲ್ಲಿ ಒಂದೇ ಬಾರಿ ಡಿಆರ್‍ಎಸ್ ಪಡೆಯುವ ಅವಕಾಶ ಇದ್ದಾಗ ಕಷ್ಟವಾಗುತ್ತದೆ. ಆದರೆ ನಾನು ಆಡುವ ವೇಳೆ ಔಟ್ ಸೈಡ್ ನಲ್ಲಿದ್ದೆ ಎನಿಸಿತ್ತು. ಅದ್ದರಿಂದ ಡಿಆರ್‍ಎಸ್ ಅವಕಾಶ ಪಡೆದೆ ಎಂದು ತಿಳಿಸಿದ್ದಾರೆ. ಎಲ್ಲದರ ನಡುವೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಹುಲ್ 66 ಎಸೆತಗಳಲ್ಲಿ 60 ರನ್ ಸಿಡಿಸಿ ಮಿಂಚಿದ್ದರು. ಅಲ್ಲದೇ ಆರಂಭಿಕ ರಾಯುಡು, ರಾಹುಲ್ ಜೋಡಿ 110 ರನ್ ಜೊತೆಯಾಟ ನೀಡಿ ತಂಡಕ್ಕೆ ಉತ್ತಮ ಆರಂಭ ನೀಡಿತ್ತು.

ಅಘ್ಘಾನ್ ವಿರುದ್ಧ ಪಂದ್ಯದಲ್ಲಿ ಅಂಪೈರ್ ಗಳ ಕೆಟ್ಟ ತೀರ್ಪಿನಿಂದ ಭಾರೀ ಬೆಲೆ ಪಡೆದ ಟೀಂ ಇಂಡಿಯಾ ಮೊದಲು ಎಂಎಸ್ ಧೋನಿರನ್ನು ಕಳೆದು ಕೊಂಡರೆ, ಬಳಿಕ 44 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ದಿನೇಶ್ ಕಾರ್ತಿಕ್ ರನ್ನು ಕಳೆದುಕೊಂಡಿತ್ತು. ಅಂತಿಮವಾಗಿ ಅಫ್ಘಾನ್ ತಂಡ ನೀಡಿದ್ದ 252 ರನ್ ಗುರಿಯನ್ನು ಬೆನ್ನತ್ತಿದ್ದ ಟೀಂ ಇಂಡಿಯಾ 49.5 ಓವರ್ ಗಳಲ್ಲಿ 252 ರನ್‍ಗಳಿಗೆ ಅಲೌಟ್ ಆಗುವ ಮೂಲಕ ಡ್ರಾ ಮಾಡಿಕೊಂಡಿತ್ತು.

ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಯ ಓವರ್ ನಲ್ಲಿ ಗೆಲ್ಲಲು 7 ರನ್ ಗಳಿಸಬೇಕಿತ್ತು. ಈ ವೇಳೆ ಮೊದಲ 4 ಎಸೆತಗಳಲ್ಲಿ 6 ರನ್ ಗಳಿಸಿದ್ದ ವೇಳೆ ಮೋಡಿ ಮಾಡಿದ ರಷಿದ್ ಖಾನ್ ಜಡೇಜಾ ವಿಕೆಟ್ ಪಡೆಯುವ ಮೂಲಕ ಪಂದ್ಯ ಡ್ರಾ ಆಗುವಂತೆ ಮಾಡಿದ್ದರು. ಇದರೊಂದಿಗೆ ವಿಶ್ವ ಕ್ರಿಕೆಟ್‍ನಲ್ಲಿ ಇದುವರೆಗೂ ಆಡಿರುವ 4,046 ಏಕದಿನ ಪಂದ್ಯಗಳಲ್ಲಿ 36ನೇ ಪಂದ್ಯ ಡ್ರಾ ಆಯಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://twitter.com/royji7306/status/1044772744330719237?

Share This Article
Leave a Comment

Leave a Reply

Your email address will not be published. Required fields are marked *