ಮೈಸೂರು: ಗ್ರಾಮದಲ್ಲಿ ಏಕಾಂಗಿಯಾಗಿದ್ದ ಕತ್ತೆಗೆ ಪಕ್ಕದ ಗ್ರಾಮದಿಂದ ಹೆಣ್ಣು ಕತ್ತೆಯನ್ನು ಹುಡುಕಿ ನಂಜನಗೂಡಿನ ಹುರ ಗ್ರಾಮಸ್ಥರು ಮದುವೆ ಮಾಡಿಸಿ ಈಗ ಸುದ್ದಿಯಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಹುರ ಗ್ರಾಮದಲ್ಲಿ ಗಂಡು ಕತ್ತೆಯೊಂದು ವಾಸವಾಗಿತ್ತು. ಆದರೆ ಇದಕ್ಕೆ ಜೋಡಿಯೇ ಇರಲಿಲ್ಲ. ಹೀಗಾಗಿ ಏಕಾಂಗಿಯಾಗಿ ಕತ್ತೆ ಗ್ರಾಮದಲ್ಲಿ ಇರಬಾರದು ಅಂತಾ ಹೆಣ್ಣು ಕತ್ತೆಯನ್ನು ಖರೀದಿಸಿ ಮದುವೆ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದರು.
ಮದುವೆಗಾಗಿ ಗ್ರಾಮದಲ್ಲಿ ಚಂದಾ ಎತ್ತಿ ಹಣ ಸಂಗ್ರಹ ಮಾಡಲಾಗಿತ್ತು. ಇಂದು ನಿರ್ಧರಿಸಿದ್ದ ಮದುವೆಯಲ್ಲಿ ಗ್ರಾಮಸ್ಥರು ಗಂಡು ಕತ್ತೆಗೆ ಪಂಚೆ, ಹೆಣ್ಣು ಕತ್ತೆಗೆ ಸೀರೆ ಉಡಿಸಿ, ನವ ವಧುವರರಂತೆ ಸಿಂಗರಿಸಿದ್ದಾರೆ. ಪೆಂಡಾಲ್ ಹಾಕಿ, ಸಕಲ ಶಾಸ್ತ್ರೋಕ್ತವಾಗಿ ಗ್ರಾಮಸ್ಥರು ಕತ್ತೆಯ ಮದುವೆ ಮಾಡಿಸಿದ್ದಾರೆ.
ಇತ್ತ ಮದುವೆಗೆ ಆಗಮಿಸಿದ್ದವರಿಗೆ ಹಾಗೂ ಗ್ರಾಮಸ್ಥರಿಗೆ ಶುಚಿಯಾದ ಹಾಗೂ ರುಚಿಯಾದ ಅಡುಗೆ ಮಾಡಿಸಿ, ಉಣ ಬಡಿಸಿದ್ದಾರೆ. ಏಕಾಂಗಿಯಾಗಿದ್ದ ಕತ್ತೆಗೆ ಜೋಡಿ ಹುಡುಕಿದ ಗ್ರಾಮಸ್ಥರಲ್ಲಿ ಇದೀಗ ಖುಷಿ ಮನೆ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv