ಮತ್ತೆ ಒಂದಾಗಲಿದ್ದಾರೆ ಗೋಲ್ಡನ್ ಸ್ಟಾರ್, ಪ್ರೀತಂ ಗುಬ್ಬಿ

Public TV
1 Min Read
ganesh movie copy

ಬೆಂಗಳೂರು: ‘ಮರೆಯುವ ಮುನ್ನಾ’ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್‍ವುಡ್‍ನಲ್ಲಿ ಮಿಂಚಲು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಸಜ್ಜಾಗಿದ್ದಾರೆ.

ದಿಲ್ ರಂಗೀಲಾ, ಮಳೆಯಲಿ ಜೊತೆಯಲಿ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ತೆರೆ ಮೇಲೆ ಮಿಂಚಿಸಿದ ಈ ಜೋಡಿ, ಇದೀಗ ಮತ್ತೆ ಚಂದನವನದಲ್ಲಿ ‘ಮರೆಯುವ ಮುನ್ನಾ’ ಎಂಬ ಸಿನಿಮಾದ ಮೂಲಕ ಚಾಪು ಮೂಡಿಸಲು ಬರುತ್ತಿದ್ದಾರೆ. ಗಣೇಶ ಹಬ್ಬದಂದೇ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.

ಈಗಾಗಲೇ ಪ್ರೀತಂ ಗುಬ್ಬಿ, ಯೋಗ್‍ರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಾರಥ್ಯದಲ್ಲಿ ಮುಂಗಾರು ಮಳೆ ಸಿನಿಮಾ ತೆರೆಯ ಮೇಲೆ ಮಿಂಚಿತ್ತು. ಇದೀಗ ಮೂರನೇ ಬಾರಿ ಇಬ್ಬರೂ ಸೇರಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

16110134 140423636459702 4700142794033856512 n

ಚಿತ್ರದ ಬಗ್ಗೆ ಮಾತನಾಡಿದ ಪ್ರೀತಂ ಗುಬ್ಬಿ ‘ಮರೆಯುವ ಮುನ್ನಾ’ ರೋಮ್ಯಾಂಟಿಕ್ ಚಿತ್ರಕಥೆಯಾಗಿದ್ದು, ಇದು ಗಣೇಶ್ ಅವರಿಗೆ ಹೋಲುವಂತೆ ಇದೆ. ಕೆಲವು ತಿಂಗಳಿಂದ ಮರೆಯುವ ಮುನ್ನಾ ಸಿನಿಮಾದ ಪ್ರಾಜೆಕ್ಟ್ ಶುರು ಮಾಡಲಾಗಿದೆ. ಗಣೇಶ್ ಅವರು ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಆ ಸಿನಿಮಾ ಚಿತ್ರೀಕರಣ ಮುಗಿದ ಕೂಡಲೇ ಮರೆಯುವ ಮುನ್ನಾ ಸಿನಿಮಾ ಸ್ಟಾರ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಗಣೇಶ್ ಪ್ರಶಾಂತ್ ರಾಜ್ ಅವರ ನಿರ್ದೇಶನದ ‘ಅರೆಂಜ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅದು ಕೊನೆಯ ಹಂತ ತಲುಪಿದೆ. ಬಳಿಕ ನಾಗಣ್ಣ ನಿರ್ದೇನದ ‘ಗಿಮಿಕ್’ ಮತ್ತು ವಿಜಯ್ ನಾಗೇಂದ್ರ ಅವರ ‘ಗೀತಾ’ ಸಿನಿಮಾದ ನಂತರ ಮರೆಯುವ ಮುನ್ನಾ ಸಿನಿಮಾ ಚಿತ್ರೀಕರಣ ಆರಂಭಿಸಲಾಗುವುದು ಎಂದರು.

ganesh

 

 

 

 

 

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *