Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಶ್ಮಿಕಾ ಬಗ್ಗೆ ನಿಮಗಿಂತ ನನಗೆ ಚೆನ್ನಾಗಿ ಗೊತ್ತು – ಕೊನೆಗೂ ಮೌನ ಮುರಿದ ರಕ್ಷಿತ್ ಶೆಟ್ಟಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ರಶ್ಮಿಕಾ ಬಗ್ಗೆ ನಿಮಗಿಂತ ನನಗೆ ಚೆನ್ನಾಗಿ ಗೊತ್ತು – ಕೊನೆಗೂ ಮೌನ ಮುರಿದ ರಕ್ಷಿತ್ ಶೆಟ್ಟಿ

Cinema

ರಶ್ಮಿಕಾ ಬಗ್ಗೆ ನಿಮಗಿಂತ ನನಗೆ ಚೆನ್ನಾಗಿ ಗೊತ್ತು – ಕೊನೆಗೂ ಮೌನ ಮುರಿದ ರಕ್ಷಿತ್ ಶೆಟ್ಟಿ

Public TV
Last updated: September 11, 2018 8:45 pm
Public TV
Share
4 Min Read
rakshith shetty rashmika mandanna
SHARE

– ಮದುವೆ ಆಗ್ತಾರಾ, ಎಂಗೇಜ್ಮೆಂಟ್ ಮುರಿದು ಬಿತ್ತಾ ಎಂಬ ವಿಚಾರ ಹೇಳಲೇ ಇಲ್ಲ!
– 2 ವರ್ಷದಿಂದ ಎಲ್ಲರಿಗಿಂತ ಚೆನ್ನಾಗಿ ನಾನು ರಶ್ಮಿಕಾಳನ್ನು ಅರಿತಿದ್ದೇನೆ
– ಮಾಧ್ಯಮಗಳಲ್ಲಿ ಬರುತ್ತಿರೋ ಸುದ್ದಿಗಳೆಲ್ಲಾ ನಿಜವಲ್ಲ ಅಂದ್ರು ರಕ್ಷಿತ್ ಶೆಟ್ಟಿ

ಬೆಂಗಳೂರು: ರಶ್ಮಿಕಾ ಮಂದಣ್ಣ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎನ್ನುವ ಸುದ್ದಿಗೆ ರಕ್ಷಿತ್ ಶೆಟ್ಟಿ ಕೊನೆಗೂ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ಹೊರ ಹೋಗಿದ್ದ ರಕ್ಷಿತ್ ಶೆಟ್ಟಿ ಮಂಗಳವಾರ ಸಂಜೆ ಮತ್ತೆ ವಾಪಸ್ ಬಂದು ಅಭಿಮಾನಿಗಳಿಗೆ ದೀರ್ಘ ಪತ್ರವನ್ನು ಬರೆಯುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಗೌರವಾನ್ವಿತ ಜನರಿಗೆ ಎಂದು ಆರಂಭಿಸಿರುವ ರಕ್ಷಿತ್ ಶೆಟ್ಟಿ, ಈ ಸ್ಪಷ್ಟನೆಯಲ್ಲಿ ರಶ್ಮಿಕಾ ಪರವಾಗಿ ಬರೆದುಕೊಂಡಿದ್ದು, ಈ ವಿಚಾರದಲ್ಲಿ ನೀವು ಯಾಕೆ ಆಕೆಯನ್ನು ದೂಷಣೆ ಮಾಡುತ್ತೀರಿ. ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳೆಲ್ಲವೂ ಸತ್ಯವಲ್ಲ ಎಂದು ಹೇಳಿಕೊಂಡಿದ್ದಾರೆ. ದೀರ್ಘ ಪತ್ರವನ್ನು ಬರೆದಿದ್ದರೂ ಎಲ್ಲೂ ನಿಶ್ಚಿತಾರ್ಥ ಬ್ರೇಕಪ್ ಆಗಿದ್ಯಾ, ಮದುವೆಯಾಗ್ತಾರಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಜನ ಈ ಪತ್ರವನ್ನು ಓದಿ ಇನ್ನೂ ಸರಿಯಾದ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ ಎಂದು ಫೇಸ್‍ಬುಕ್‍ನಲ್ಲಿ ಕಮೆಂಟ್ ಹಾಕೋಕೆ ಶುರು ಮಾಡಿದ್ದಾರೆ.  ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ರಶ್ಮಿಕಾ ಮಂದಣ್ಣ ಭೇಟಿ

rakshith shetty rashimak facebook post 1

ಫೇಸ್‍ಬುಕ್‍ನಲ್ಲಿ ಶೆಟ್ರು ಬರೆದಿದ್ದೇನು?
ಕೆಲಸದ ವಿಚಾರಗಳಿಗೆ ಹೆಚ್ಚು ಗಮನ ನೀಡುವ ಉದ್ದೇಶದಿಂದ ನಾನು ಸಾಮಾಜಿಕ ಜಾಲತಾಣದಿಂದ ದೂರ ಇರುತ್ತೇನೆ ಎಂದು ಈ ಹಿಂದೆ ಪ್ರಕಟಿಸಿದ್ದೆ. ಆದರೆ ಕೆಲ ದಿನಗಳಿಂದ ಓರ್ವ ವ್ಯಕ್ತಿಯ ಬಗ್ಗೆ ಹರಿದಾಡುತ್ತಿರುವ ವಿಚಾರಗಳಿಗೆ ಸ್ಪಷ್ಟನೆ ನೀಡಲು ಈಗ ನಾನು ಮತ್ತೆ ಬಂದಿದ್ದೇನೆ. ಇದನ್ನೂ ಓದಿ: ಭಾವಿ ಪತಿಯ ಮಾತನ್ನು ಅಚ್ಚುಕಟ್ಟಾಗಿ ಪಾಲಿಸಿದ ನಟಿ ರಶ್ಮಿಕಾ ಮಂದಣ್ಣ: ವಿಡಿಯೋ

ನೀವು ರಶ್ಮಿಕಾ ಬಗ್ಗೆ ಪೂರ್ವಾಗ್ರಹ ಅಭಿಪ್ರಾಯವನ್ನು ಹೊಂದಿದ್ದೀರಿ. ನಾನು ಯಾವುದೇ ಕಾರಣಕ್ಕೂ ನಿಮ್ಮನ್ನು ದೂಷಿಸುವುದಿಲ್ಲ ಯಾಕೆಂದರೆ ಕೆಲ ವಿಚಾರಗಳಿಂದಾಗಿ ನೀವು ಈ ನಿರ್ಧಾರಕ್ಕೆ ಬಂದಿದ್ದೀರಿ. ನಾನು ರಶ್ಮಿಕಾಳನ್ನು ಎರಡು ವರ್ಷದಿಂದ ನೋಡುತ್ತಿದ್ದು, ಆಕೆ ಏನು ಎನ್ನುವುದು ನಿಮಗೆಲ್ಲರಿಗಿಂತಲೂ ಚೆನ್ನಾಗಿ ನನಗೆ ತಿಳಿದಿದೆ. ದಯವಿಟ್ಟು ಆಕೆಯ ಮೇಲೆ ದೂಷಣೆ ಮಾಡುವುದನ್ನು ನಿಲ್ಲಿಸಿ. ಆಕೆಯನ್ನು ಶಾಂತಿಯಿಂದ ಇರಲು ಬಿಡಿ. ದಯವಿಟ್ಟು ಯಾವುದೇ ಮಾಧ್ಯಮಗಳ ಸುದ್ದಿಯನ್ನು ನಂಬಲು ಹೋಗಬೇಡಿ. ಯಾರೊಬ್ಬರು ನನ್ನಿಂದ ಅಥವಾ ರಶ್ಮಿಕಾಳಿಂದ ಈ ವಿಚಾರದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿಲ್ಲ. ಹಲವು ಮಂದಿ ಅವರ ಊಹೆಗೆ ತಕ್ಕಂತೆ ಅವರಿಗೆ ಬೇಕಾದಂತೆ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಊಹೆಗಳು ಯಾವತ್ತೂ ವಾಸ್ತವವಲ್ಲ. ಇದನ್ನೂ ಓದಿ: ರಕ್ಷಿತ್ ಶೆಟ್ಟಿ, ರಶ್ಮಿಕಾ ನಡುವೆ ಲವ್ ಆಗಿದ್ದು ಹೇಗೆ?-ಇಲ್ಲಿದೆ ಪೂರ್ಣ ಲವ್ ಸ್ಟೋರಿ

ನನ್ನ ಈ ಸಂದೇಶ ಎಲ್ಲರಿಗೂ ತಲುಪಬೇಕು ಎಂಬ ಉದ್ದೇಶದಿಂದ ಈ ಪೇಜ್ ಇನ್ನೂ ಕೆಲವು ದಿನಗಳ ಕಾಲ ಇರುತ್ತದೆ. ಯಾವಾಗ ನನಗೆ ಸಾಮಾಜಿಕ ಜಾಲತಾಣದ ಅಗತ್ಯ ಇದೆಯೋ ಆ ಸಂದರ್ಭದಲ್ಲಿ ನಾನು ಬರುತ್ತೇನೆ. ಕೆಲಸದಲ್ಲಿ ಜಾಸ್ತಿ ಗಮನಹರಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಿಂದ ದೂರ ಇರುತ್ತೇನೆ. ಇದನ್ನೂ ಓದಿ: ತೆಲುಗು ಕಾರ್ಯಕ್ರಮದಲ್ಲಿ ತನ್ನ ತವರೂರಿನ ಬಗ್ಗೆ ಮಾತನಾಡಿದ್ರು ರಶ್ಮಿಕಾ ಮಂದಣ್ಣ

rakshith shetty rashimak facebook post

ಬ್ರೇಕಪ್ ಸುದ್ದಿ ಹೊರಬಿದ್ದಿದ್ದು ಯಾಕೆ?
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಒಂದಾಗಿ ನಟಿಸಿ ಸಿನಿ ಅಭಿಮಾನಿಗಳ ಮನಗೆದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ವಿಚಾರದ ಬಗ್ಗೆ ಇಬ್ಬರು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಬ್ರೇಕಪ್ ಆಗಿದ್ದಾರೆ ಎನ್ನುವ ಸುದ್ದಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ರಶ್ಮಿಕಾಗೆ ವಿಶೇಷ ಗಿಫ್ಟ್ ಕೊಟ್ಟ ರಕ್ಷಿತ್ ಶೆಟ್ಟಿ

ಈ ನಡುವೆ ತೆಲುಗಿನ ಗೀತ ಗೋವಿಂದಂ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರ ಕೆಮೆಸ್ಟ್ರಿ ನೋಡಿ, ವಿಜಯ್ ದೇವರಕೊಂಡ ಅಭಿಮಾನಿಗಳು, ವಿಜಯ್ ಅವರನ್ನೇ ಮದುವೆಯಾಗಿ. ಸ್ಕ್ರೀನ್ ಅಲ್ಲದೇ ನಿಜ ಜೀವನದಲ್ಲೂ ನೀವಿಬ್ಬರು ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಕಮೆಂಟ್ ಮಾಡಿದ್ದರು. ಈ ನಡುವೆಯೇ ಅದು ಹೇಗೋ ಗೀತ ಗೋವಿಂದಂ ಚಿತ್ರದ ಲಿಪ್ ಲಾಕ್ ಸೀನ್ ವೈರಲ್ ಆಗಿತ್ತು. ಈ ದೃಶ್ಯಕ್ಕೆ ಕನ್ನಡದ ಅಭಿಮಾನಿಗಳು ರಶ್ಮಿಕಾ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು. ಖ್ಯಾತ ನಟನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಈ ರೀತಿಯ ತುಟಿಗೆ ತುಟಿ ಬೆಸೆಯೋ ಈ ಸೀನ್ ನಲ್ಲಿ ಅಭಿನಯಿಸಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡತೊಡಗಿದರು. ಪ್ರಶ್ನೆ ಮಾಡುವುದರ ಜೊತೆ ರಕ್ಷಿತ್ ಶೆಟ್ಟಿ ಅವರಿಗೆ ಟ್ಯಾಗ್ ಮಾಡಿ ನೀವು ಸ್ವಲ್ಪ ಹೇಳಬಾರದೇ ಎಂದು ಪ್ರಶ್ನಿಸತೊಡಗಿದರು. ಇದನ್ನೂ ಓದಿ: ರಶ್ಮಿಕಾ, ವಿಜಯ್ ಮದ್ವೆಯಾದ್ರೆ Made For Each Other- ದೇವರಕೊಂಡ ಅಭಿಮಾನಿ

rashmika mandanna scene

ಅಭಿಮಾನಿಗಳು ತಮ್ಮ ಸಂಬಂಧದ ಬಗ್ಗೆ ವಿಪರೀತವಾಗಿ ಕಮೆಂಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೇಸರಗೊಂಡು ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಿಂದ ದೂರ ಸರಿದರು ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ರಶ್ಮಿಕಾ ಜೊತೆ ಶೀಘ್ರವೇ ಮದುವೆಯಾಗೋಣ ಎಂದು ಹೇಳಿದ್ದರಂತೆ. ಈ ಪ್ರಸ್ತಾಪವನ್ನು ರಶ್ಮಿಕಾ ಒಪ್ಪದೇ ಇದ್ದ ಕಾರಣ ಇಬ್ಬರ ನಡುವೆ ಸಂಬಂಧ ಬ್ರೇಕಪ್ ಆಗಿದೆ. ಎರಡು ಕುಟುಂಬಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿಗಳು ಈಗ ಹರಿದಾಡುತ್ತಿದೆ. ಗೀತ ಗೋವಿಂದಂ ಚಿತ್ರ ರಿಲೀಸ್ ಆದ ನಂತರ ರಶ್ಮಿಕಾ ಮಂದಣ್ಣಗೆ ಟಾಲಿವುಡ್ ನಿಂದ ಹೆಚ್ಚು ಆಫರ್ ಗಳು ಬರುತ್ತಿದೆ. ಸದ್ಯಕ್ಕೆ ಆಕೆಗೆ ಮದುವೆಗಿಂತ ವೃತ್ತಿ ಜೀವನವೇ ಪ್ರಮುಖವಾದುದು. ಈ ಹಿನ್ನೆಲೆಯಲ್ಲಿ ಆಕೆ ಸಿನೆಮಾ ಇಂಡಸ್ಟ್ರಿಯಲ್ಲಿ ಇನ್ನೂ ಕೆಲವು ಸಿನೆಮಾಗಳಲ್ಲಿ ನಟಿಸಲು ಮನಸು ಮಾಡಿದ್ದಾರೆ ಎಂಬ ಸುದ್ದಿಯೂ ಇಂಗ್ಲಿಷ್ ವೆಬ್‍ಸೈಟ್‍ಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಗೀತಾ ಗೋವಿಂದಂ ಚಿತ್ರದಲ್ಲಿ ಲಿಪ್‍ಲಾಕ್ ಸೀನ್ ಕಟ್- ಸೀಕ್ರೆಟ್ ರಿವೀಲ್ ಮಾಡಿದ್ರು ರಶ್ಮಿಕಾ

https://www.youtube.com/watch?v=uh5_9oujdto

https://www.youtube.com/watch?v=jzSaQ0QLDCE

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

TAGGED:kannada newsRakshith ShettyRashmika MandannasandalwoodSplitಗೀತಾಗೋವಿಂದಂಟಾಲಿವುಡ್ನಿಶ್ಚಿತಾರ್ಥಬ್ರೇಕಪ್ರಕ್ಷಿತ್ ಶೆಟ್ಟಿರಶ್ಮಿಕಾ ಮಂದಣ್ಣಲವ್ಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Davanagere Kavya Murder Case
Crime

ಮಹಿಳೆ ಅನುಮಾನಾಸ್ಪದ ಸಾವು – ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ?

Public TV
By Public TV
12 minutes ago
Pahalgam QR Code IdentificationS
Latest

ಪಹಲ್ಗಾಮ್‌ ನರಮೇಧಕ್ಕೆ 1 ವರ್ಷ – ಪ್ರವಾಸಿಗರ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?

Public TV
By Public TV
54 minutes ago
pm modi meeting
Latest

ದೇಶವನ್ನು ಉದ್ದೇಶಿಸಿ ಭಾಷಣ – ಮೋದಿ ವಿರುದ್ಧ ಕಾಂಗ್ರೆಸ್‌, ಸಿಪಿಎಂನಿಂದ ದೂರು

Public TV
By Public TV
59 minutes ago
UP Man Kills Twin Daughters In kanpur
Crime

ಅವಳಿ ಹೆಣ್ಣುಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ತಂದೆ

Public TV
By Public TV
1 hour ago
Modi 1
Latest

ಕಾಂಗ್ರೆಸ್‌ ಜೊತೆ ಸೇರಿ ಟಿಎಂಸಿ ಪಿತೂರಿ, ಬಂಗಾಳದ ಮಹಿಳೆಯರಿಗೆ ಮತ್ತೆ ದ್ರೋಹ: ಮೋದಿ ವಾಗ್ದಾಳಿ

Public TV
By Public TV
1 hour ago
italy police
Crime

ಇಟಲಿಯಲ್ಲಿ ಇಬ್ಬರು ಭಾರತೀಯರಿಗೆ ಗುಂಡಿಕ್ಕಿ ಹತ್ಯೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?