ಬೆಂಗಳೂರು: ನಕಲಿ ಬಿಲ್ ತಯಾರಿಸಿ ವರ್ತಕರಿಗೆ ನೀಡಿ ಸರ್ಕಾರಕ್ಕೆ ಭಾರೀ ನಷ್ಟವನ್ನು ಉಂಟು ಮಾಡಿದ್ದ ಗುತ್ತಿಗೆದಾರನನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇಸ್ಮಾಯಿಲ್ ಬಂಧಿತ ಆರೋಪಿಯಾಗಿದ್ದು, ಸರ್ಕಾರದಿಂದ ಕಾಮಗಾರಿಗಳ ಗುತ್ತಿಗೆ ಪಡೆದುಕೊಂಡು ನಕಲಿ ಬಿಲ್ ಗಳನ್ನು ನೀಡಿ ತೆರಿಗೆ ಕಟ್ಟದೇ ಮೋಸ ಮಾಡುತ್ತಿದ್ದ ಆರೋಪದಡಿ ಆತನನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಆರೋಪಿ ಇಸ್ಮಾಯಿಲ್ ಇದುವರೆಗೂ 48 ಕೋಟಿ ರೂ. ಮೌಲ್ಯದ ನಕಲಿ ಬಿಲ್ ಗಳನ್ನು ನೀಡಿದ್ದು, ಇದರಿಂದ ಸರ್ಕಾರಕ್ಕೆ ಸುಮಾರು 9 ಕೋಟಿ ರೂ. ನಷ್ಟ ಮಾಡಿದ್ದಾನೆ. ಆರೋಪಿ ಎಆರ್ ಎಸ್ ಎಂಟರ್ಪ್ರೈಸಸ್ ಸಂಸ್ಥೆಯ ಮಾಲೀಕನಾಗಿದ್ದು, ನಕಲಿ ಬಿಲ್ ವರ್ತರಕರಿಗೆ ನೀಡುತ್ತಿದ್ದ ಖಚಿತ ಮಾಹಿತಿ ತಿಳಿದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv