ಕನ್ನಡಿಗ ಮಾಯಾಂಕ್ ಅಗರ್ವಾಲ್ ಪರ ಹರ್ಭಜನ್ ಬೌಲಿಂಗ್!

Public TV
2 Min Read
Mayank Agarwal Harbhajan Singh 1

ಮುಂಬೈ: ಸೆ.15 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆರಂಭವಾಗಲಿರುವ ಏಷ್ಯಾಕಪ್ ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾಗವಹಿಸಲಿದೆ. ಆದರೆ ಟೂರ್ನಿಗೆ ಬಿಸಿಸಿಐ ಆಯ್ಕೆ ಮಾಡಿರುವ ತಂಡದ ಕುರಿತು ಹಿರಿಯ ಆಟಗಾರ ಹರ್ಭಜನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿರುವ ತಂಡದ ಆಟಗಾರರ ಫೋಟೋ ಟ್ವೀಟ್ ಮಾಡಿರುವ ಹರ್ಭಜನ್, ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮಾಯಾಂಕ್ ಅರ್ಗವಾಲ್ ಎಲ್ಲಿ? ತಂಡದಲ್ಲಿ ಮಾಯಾಂಕ್ ಹೆಸರು ಇಲ್ಲ. ಒಬ್ಬರಿಗೆ ಒಂದು ನಿಯಮ ಮತ್ತೊಬ್ಬರಿಗೆ ಮತ್ತೊಂದು ನಿಯಮ ಎಂದು ಖಾರವಾಗಿ ಬರೆದುಕೊಂಡಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಮಾಯಾಂಕ್‍ಗೆ ತಂಡದಲ್ಲಿ ಸ್ಥಾನ ನೀಡುವ ಕುರಿತು ಭರವಸೆ ನೀಡಿದ್ದು, ಕಳೆದ 10-12 ತಿಂಗಳಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಂಡಕ್ಕೆ ಆಯ್ಕೆ ಆಗಲು ಮಾಯಾಂಕ್ ಇನ್ನು ಒಂದು ಮೆಟ್ಟಿಲು ಮಾತ್ರ ಬಾಕಿ ಇದೆ. ಮೂರು ಮಾದರಿಯ ಕ್ರಿಕೆಟ್‍ನಲ್ಲಿ ಮಾಯಾಂಕ್ ಸ್ಥಾನ ಪಡೆಯವುದು ಖಚಿತ ಎಂದು ಹೇಳಿದ್ದಾರೆ. ಇದನ್ನು ಓದಿ:  ಚಿನ್ನ ಗೆದ್ದ ಸ್ವಪ್ನಾ ಸಾಧನೆಯ ಹಿಂದಿದೆ ದ್ರಾವಿಡ್ ಸಹಾಯಹಸ್ತ!

ಈ ಹಿಂದೆ ಟೀಂ ಇಂಡಿಯಾದಲ್ಲಿ ಮಿಂಚಿದ್ದ ಕುಂಬ್ಳೆ, ದ್ರಾವಿಡ್, ವೆಂಕಟೇಶ್ ಪ್ರಸಾದ್, ಸುನೀಲ್ ಜೋಶಿ ಆಟಗಾರ ಬಳಿಕ ಕರ್ನಾಟಕದ ಆಟಗಾರರಿಗೆ ಹೆಚ್ಚಿನ ಅವಕಾಶ ಲಭಿಸಿಲ್ಲ. ಸದ್ಯ ಇಂಗ್ಲೆಂಡ್ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದ ಕೆಎಲ್ ರಾಹುಲ್ ರಿಂದ ಉತ್ತಮ ಪ್ರದರ್ಶನ ಮೂಡಿ ಬಂದಿಲ್ಲ. ಒಂದೊಮ್ಮೆ ಮಾಯಾಂಕ್‍ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕರೆ ತಮ್ಮ ಬ್ಯಾಟ್ ಮೂಲಕ ಮಿಂಚುವಲ್ಲಿ ಯಾವುದೇ ಅನುಮಾನವಿಲ್ಲ.  ಇದನ್ನು ಓದಿ:  ರಾಹುಲ್ ದ್ರಾವಿಡ್ ಸಲಹೆಗಳು ಇಂದಿಗೂ ಕಿವಿಯಲ್ಲಿ ಗುಂಯ್‍ಗುಡುತ್ತಿದೆ: ಶಿವಂ ಮಾವಿ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಲಿದೆ. ಸರಣಿಗೆ ವಿಶೇಷವಾಗಿ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ 20 ವರ್ಷದ ರಾಜಸ್ಥಾನ ಯುವ ಆಟಗಾರ ಖಲೀಲ್ ಅಹ್ಮದ್ ಆಯ್ಕೆ ಆಗಿದ್ದಾರೆ. ಇದನ್ನು ಓದಿ: ನನ್ನ ವೃತ್ತಿ ಜೀವನವನ್ನು ಬದಲಿಸಿದ್ದು ರಾಹುಲ್ ದ್ರಾವಿಡ್ – ಖಲೀಲ್ ಅಹ್ಮದ್

ಮಾಯಾಂಕ್ ಸಾಧನೆ
ಪ್ರಥಮ ದರ್ಜೆ ಕ್ರಿಕೆಟ್: 43 ಪಂದ್ಯ, 3372 ರನ್, 50.32 ಸರಾಸರಿ.
ಟೀಂ ಇಂಡಿಯಾ `ಎ’ ತಂಡ: 67 ಪಂದ್ಯ, 3360 ರನ್, 50.90 ಸರಾಸರಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *