ಅಕ್ಟೋಬರ್ ನಿಂದ ನಂದಿನಿ ಹಾಲಿನ ದರ ಹೆಚ್ಚಳ?

Public TV
1 Min Read
KMF

ಬೆಂಗಳೂರು: ಪೆಟ್ರೋಲ್ ಬೆಲೆ ಏರಿಕೆ ಆಗುತ್ತಿರುವ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ಹಾಲಿನ ದರವನ್ನು ಹೆಚ್ಚಳ ಮಾಡಲು ಕೆಎಂಎಫ್ ಚಿಂತನೆ ನಡೆಸಿದೆ.

ಈ ಕುರಿತು ಇಂದು ನಗರದಲ್ಲಿ ಕೆಎಂಎಫ್ ಬೋರ್ಡ್ ಮೀಟಿಂಗ್ ನಡೆದಿದ್ದು, ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಅಂತ ಮ್ಯಾನೇಜಿಂಗ್ ಡೈರೆಕ್ಟರ್ ರಾಕೇಶ್ ಸಿಂಗ್ ಪಬ್ಲಿಕ್ ಟಿವಿಗೆ ಮಾಹಿತಿ ನಿಡಿದ್ದಾರೆ.

KMF MILK

ಒಂದು ವೇಳೆ ರಾಜ್ಯ ಸರ್ಕಾರದಿಂದ ಅಂಕಿತ ಸಿಕ್ಕಿದರೆ ದರ ಏರಿಕೆ ಆಗುತ್ತೆ. ಅಕ್ಟೋಬರ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆಯಲ್ಲಿ 2 ರೂ. ಹೆಚ್ಚಳವಾಗಲಿದೆ. ಇದರಲ್ಲಿ 1 ರೂಪಾಯಿ ಕೆಎಂಎಫ್ ಗೆ, ಇನ್ನು 1 ರೂಪಾಯಿ ರೈತರಿಗೆ ನೀಡಲು ಕೆಎಂಎಫ್ ಚಿಂತನೆ ನಡೆಸಿದೆ. ಇದನ್ನೂ ಓದಿ: ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?

ಕೆಎಂಎಫ್ ನಷ್ಟದಲ್ಲಿ ನಡೀತಾ ಇದೆ ಅಂತ ಒಂದು ಕಾರಣವಾದ್ರೆ ಇನ್ನೊಂದು ಹಾಲಿನ ಪೂರೈಕೆ ಹೆಚ್ಚಾಗುತ್ತಿದ್ದು ಬೇಡಿಕೆ ಹೆಚ್ಚಾಗುತ್ತಿಲ್ಲ. ಹೀಗಾಗಿ ರೈತರಿಗೆ ಸಿಗುವ ಪ್ರೋತ್ಸಾಹ ಧನದಲ್ಲಿ 2 ರೂ.ಕಡಿತ ಮಾಡಲಾಗಿದೆ. ದರವನ್ನು ಕಡಿತಗೊಳಿಸಿದ್ದಕ್ಕೆ ಕಳೆದ ತಿಂಗಳು ರೈತರು ಪ್ರತಿಭಟನೆ ನಡೆದಿದ್ದರು. ಈ ನಿಟ್ಟಿನಲ್ಲಿ ಕೆಎಂಎಫ್ ಈ ನಿರ್ಧಾರಕ್ಕೆ ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=3lQkr1fwB0I

Share This Article
Leave a Comment

Leave a Reply

Your email address will not be published. Required fields are marked *