ಜೈಪುರ: ಗೋಹತ್ಯೆಯು ಭಯೋತ್ಪಾದನೆಗಿಂತ ಅತಿ ದೊಡ್ಡ ಅಪರಾಧವೆಂದು ರಾಜಸ್ಥಾನದ ರಾಮ್‍ಗರ್ ಶಾಸಕನಾದ ಗ್ಯಾನ್ ದೇವ್ ಅಹುಜಾ ಹೇಳಿಕೆ ನೀಡಿದ್ದಾರೆ.
ಲಾಲವಂಡಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾರವರು, ಇತ್ತೀಚೆಗೆ ರಾಜಸ್ಥಾನದಲ್ಲಿ ಗೋ ರಕ್ಷಕರಿಂದ ಖಾನ್ ಎಂಬವರ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದ್ದು, ಹಸುಗಳನ್ನು ಕದ್ದು ಸಾಗಿಸುತ್ತಿದ್ದ ಎಂಬ ಶಂಕೆಯಿಂದಲೇ ಹೊರತು, ಯಾವುದೇ ವೈಯಕ್ತಿಕ ವಿಚಾರದಿಂದಲ್ಲ. ಅವರು ಒಂದು ಹಸುವನ್ನು ಕೊಂದಾಗ, ಕೋಟ್ಯಾಂತರ ಹಿಂದೂಗಳ ಮನಸ್ಸಿಗೆ ನೋವಾಗುತ್ತದೆ, ಹೀಗಾಗಿ ಗೋಹತ್ಯೆ ಭಯೋತ್ಪಾದನೆಗಿಂತಲೂ ಅತಿದೊಡ್ಡ ಅಪರಾಧ ಎಂದು ಹೇಳಿಕೆ ನೀಡಿದ್ದಾರೆ.
ಪೊಲೀಸರ ವಶದಲ್ಲಿದ್ದಾಗ ಖಾನ್ ಸಾವನ್ನಪ್ಪಿದ್ದಾನೆಯೇ ಹೊರತು, ಗೋರಕ್ಷಕರಿಂದಲ್ಲ. ಅವನನ್ನು ಗೋ ರಕ್ಷಕರೇ ಕೊಂದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಖಾನ್ ನನ್ನು ಕೊಂದವರು ಕೊಲೆಗಡುಕರಲ್ಲ, ಅವರು ಸಹ ಛತ್ರಪತಿ ಶಿವಾಜಿ ಹಾಗೂ ಗುರು ಗೊಬಿಂದ್ ಸಿಂಗ್‍ರ ಅನುಯಾಯಿಗಳು. ಅಂತಹ ಮಕ್ಕಳನ್ನು ಹೆತ್ತಿದ್ದ ತಾಯಂದಿರುಗಳು ಪುಣ್ಯವಂತರು ಎಂದು ತಿಳಿಸಿದ್ದಾರೆ.
ಭಯೋತ್ಪಾಕರುಗಳು ಒಬ್ಬರು ಅಥವಾ ಇಬ್ಬರನ್ನು ಕೊಲ್ಲುಬಹುದು, ಆದರೆ ಒಂದು ಹಸುವನ್ನು ಕೊಂದಾಗ ಕೋಟ್ಯಾಂತರ ಹಿಂದೂಗಳ ಮನಸ್ಸಿಗೆ ನೋವುಂಟಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.