EXCLUSIVE: ದರ್ಶನ್ ಸೋದರಳಿಯ ‘ಟಕ್ಕರ್’ ಮನೋಜ್ ಫೈಟ್ ನೋಡಿ!

Public TV
1 Min Read
Takkar

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ಈಗ ಹೀರೋ ಆಗಿ ಎಂಟ್ರಿ ಕೊಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರೋದೇ. ಈ ಹಿಂದೆ ಮಾವ ದರ್ಶನ್ ಅವರ ಜೊತೆಗೆ ಅಂಬರೀಶ ಮತ್ತು ಚಕ್ರವರ್ತಿ ಸಿನಿಮಾಗಳಲ್ಲಿ ಮುಖಕ್ಕೆ ಬಣ್ಣ ಹಚ್ಚಿದ್ದ ಮನೋಜ್ ಈಗ ‘ಟಕ್ಕರ್’ ಸಿನಿಮಾದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಟಕ್ಕರ್ ಮೈಸೂರಿನ ಬೀದಿಬೀದಿಗಳಲ್ಲಿ ಚಿತ್ರೀಕರಣದಲ್ಲಿ ಬ್ಯುಸಿ!

ಇಲ್ಲೊಂದು ವಿಡಿಯೋವನ್ನು ಪಬ್ಲಿಕ್ ಟಿವಿ ನಿಮಗಾಗಿ ನೀಡುತ್ತಿದೆ. ಈ ವಿಡಿಯೋದಲ್ಲಿ ಮನೋಜ್ ಬಾರೀ ಗಾತ್ರದ ಹೂಕುಂಡವನ್ನು ನಿರಾಯಾಸವಾಗಿ ಗುದ್ದಿ ಪುಡಿ ಮಾಡೋದು ಕಾಣುತ್ತಿದೆ. ಟಕ್ಕರ್ ಸಿನಿಮಾದಲ್ಲಿ ಡಿಫರೆಂಟ್ ಡ್ಯಾನಿ ಕಂಪೋಸ್ ಮಾಡುತ್ತಿರುವ ಭಿನ್ನ ಬಗೆಯ ಆ್ಯಕ್ಷನ್ ಸೀನುಗಳಿವೆಯಂತೆ. ಹುಲಿರಾಯ ಖ್ಯಾತಿಯ ನಾಗೇಶ್ ಕೋಗಿಲು ನಿರ್ಮಾಣದ ಈ ಚಿತ್ರವನ್ನು ನಿರ್ದೇಶನ ಮಾಡ್ತಿರೋದು ರನ್ ಆ್ಯಂಟನಿ ರಘು. ರಘು ಪಾಲಿಗೆ ಮೊದಲ ಸಿನಿಮಾ ವರ್ಕೌಟ್ ಆಗಿರಲಿಲ್ಲ. ಹೀಗಾಗಿ ಭಯಂಕರ ಶ್ರಮ ಹಾಕಿ ಟಕ್ಕರ್ ಸಿನಿಮಾವನ್ನು ರೆಡಿ ಮಾಡ್ತಿದ್ದಾರಂತೆ. ನಿರ್ಮಾಪಕ ನಾಗೇಶ್ ಕೋಗಿಲು ಅವರಂತೂ ಸಿನಿಮಾಗೆ ಏನೇನೂ ಕೊರತೆಯಾಗದಂತೆ ಧಾರಾಳವಾಗಿ ಖರ್ಚು ಮಾಡಿ ಟಕ್ಕರ್ ಗೆ ಪುಷ್ಠಿ ನೀಡುತ್ತಿದ್ದಾರೆ. ಇದನ್ನೂ ಓದಿ: ‘ಟಕ್ಕರ್’ ಕ್ಯಾಮೆರಾ ದರ್ಶನ್ ಮೆಚ್ಚಿದ ಛಾಯಾಗ್ರಾಹಕ ಕಿರಣ್ ಕೈಗೆ!

Takkar 1

ಇಲ್ಲಿರುವ ಹೊಡೆದಾಟದ ದೃಶ್ಯವನ್ನು ನೋಡಿದರೆ ಮನೋಜ್ ಕೂಡಾ ಮಾವ ದರ್ಶನ್ ಅವರಂತೆಯೇ ಆ್ಯಕ್ಷನ್ ಹೀರೋ ಆಗಿ ನಿಲ್ಲುವುದು ನಿಜ ಎನಿಸುತ್ತಿದೆ. ಈ ಸಿನಿಮಾಗಾಗಿ ಮನೋಜ್ ಸಾಕಷ್ಟು ತಯಾರಿ ನಡೆಸಿ ಕ್ಯಾಮೆರಾ ಎದುರಿಸುತ್ತಿದ್ದಾರೆ. ಪುಟ್ಟಗೌರಿ ಮದುವೆಯ ರಂಜನಿ ರಾಘವನ್ ಟಕ್ಕರ್ ಗೆ ನಾಯಕಿ. ಇನ್ನು ಭಜರಂಗಿ ಲೋಕಿ ಟಕ್ಕರ್ ಗೆ ಎದುರಾಗಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

https://youtu.be/ie-xeBo4DA4

Share This Article
Leave a Comment

Leave a Reply

Your email address will not be published. Required fields are marked *