ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಗೆ ಅಪಾರ ಅಭಿಮಾನಿಗಳಿದ್ದಾರೆ. ಆದರೆ ಸುದೀಪ್ ತಮ್ಮ ಅಭಿಮಾನಿಗಳಿಗೆ ನನ್ನಲ್ಲೂ ಕೊರತೆಗಳಿವೆ ಎಂದು ಹೇಳಿದ್ದಾರೆ.
ಅಭಿಮಾನಿಗಳ ಟ್ವೀಟ್ ಗೆ ಪ್ರತಿಕ್ರಿಯೆ ನೀಡುವ ವೇಳೆ ನನ್ನಲ್ಲೂ ಕೊರತೆಗಳಿವೆ ಎಂದು ಸುದೀಪ್ ಹೇಳಿದ್ದಾರೆ.
ಅಭಿಮಾನಿಯೊಬ್ಬರು ಸುದೀಪ್ ಅಭಿನಯಿಸಿದ ಫೋಟೋಗಳನ್ನು ತಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟುಕೊಂಡಿದ್ದಾರೆ. `ಹೆಬ್ಬುಲಿ’, `ದಿ ವಿಲನ್’, `ರನ್ನ’ ಮತ್ತು ಬಾಹುಬಲಿ ಸಿನಿಮಾದ ಫೋಟೋವನ್ನು ಹಾಕಿದ್ದಾರೆ. ಜೊತೆಗೆ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಭಿನಯದ `ನಾಗರಹಾವು’ ಸಿನಿಮಾದ ಪೋಸ್ಟರನ್ನೂ ಕೂಡ ಅವರ ಮನೆಯ ದೇವರ ಕೋಣೆಯಲ್ಲಿ ಇಟ್ಟು ದಿನ ನಮಸ್ಕರಿಸುತ್ತಾರೆ.
https://twitter.com/KSFCBkiccha/status/1018494500509974528
ಈ ಅಭಿಮಾನಿ ಹಾಕಿದ್ದ ಫೋಟೋಗಳನ್ನು ಸುದೀಪ್ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ನೋಡಿ ಸುದೀಪ್ “ನಿಮ್ಮ ಮನಸ್ಸಿನಲ್ಲಿ ಕೊಟ್ಟಿರುವ ಸ್ಥಾನ ಸಾಕು. ದೇವರ ಪಕ್ಕದಲ್ಲಿ ಇಡಬೇಡಿ. ನನ್ನಲ್ಲೂ ಕೊರತೆಗಳು ಇವೆ. ನಿಮ್ಮ ಈ ಪ್ರೀತಿಗೆ ಚಿರಋಣಿ” ಎಂದು ಬರೆದು ಅಭಿಮಾನಿಗೆ ಧನ್ಯವಾದ ತಿಳಿಸಿದ್ದಾರೆ.
Nimma manasalli kottiruva aa sthaana saaku…. devara pakkadhallidabedi,,,nannallu korathegalive….
Nimma ee preethige chiraruni.
???????? https://t.co/W60U8QMRiZ
— Kichcha Sudeepa (@KicchaSudeep) July 15, 2018