ತಿರುವನಂತಪುರಂ: ತನ್ನ ಮೆಚ್ಚಿನ ಆಟಗಾರನ ತಂಡ ಸೋತಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.
ಕೇರಳದ ಕೊಟ್ಟಾಯಂನ ದಿನು ಜೋಸೆಫ್ (30) ಆತ್ಮಹತ್ಯೆ ಮಾಡಿಕೊಂಡ ಯುವಕ. ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ದಿನು ಜೋಸೆಫ್‍ನ ಮೆಚ್ಚಿನ ಆಟಗಾರ. ಅಲ್ಲದೇ ದಿನು ಅರ್ಜೆಂಟೀನಾ ತಂಡವನ್ನು ಅಷ್ಟೇ ಬೆಂಬಲಿಸುತ್ತಿದ್ದ.
2018ರ ಫಿಫಾ ಕಪ್ ಪಂದ್ಯ ಪ್ರಾರಂಭವಾಗಿದ್ದು, ಫುಟ್ ಬಾಲ್ ಪ್ರಿಯರಿಗೆ ದಿನವೂ ಹಬ್ಬ. ಆದರೆ ಜೂನ್ 22ರಂದು ಅರ್ಜೆಂಟೀನಾ ಕ್ರೊವೇಷ್ಯಾ ಎದುರು 3-0 ಗೋಲುಗಳ ಅಂತರಲ್ಲಿ ಸೋತಿತ್ತು. ಇದರಿಂದಾಗಿ ಅರ್ಜೆಂಟೀನಾ ಫಿಫಾ ಕಪ್ 2018ರ ಪಂದ್ಯದಿಂದ ಹೊರ ಬಿಳ್ಳುವ ಸಾಧ್ಯತೆ ಇದೆ ಎನ್ನುವುದನ್ನು ಅರಿತ ದಿನು ಜೋಸೆಫ್ ಆಘಾತಕ್ಕೆ ಒಳಗಾಗಿದ್ದ. ಅಂದು ರಾತ್ರಿ ಮನೆ ಬಿಟ್ಟ ದಿನು ಮತ್ತೆ ಮನೆಯ ಕಡೆಗೆ ಬಂದಿರಲಿಲ್ಲ. ಇದರಿಂದಾಗಿ ದಿನು ಪತ್ತೆಗಾಗಿ ಪೊಲೀಸರು ಹಾಗೂ ಮನೆಯ ಸದಸ್ಯರು ಹುಡುಕಾಟ ಪ್ರಾರಂಭಿಸಿದ್ದರು. ಆದರೆ ಭಾನುವಾರ ದಿನು ಮೃತ ದೇಹ ಸೇತುವೆ ಬಳಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
Kerala: Body of 30-year-old Dinu Joseph, a fan of Argentinian captain Lionel Messi who went missing on June 22, has been found near Illikkal Bridge in Kottayam. He had gone missing after Argentina's 3-0 loss to Croatia in 2018 FIFA World Cup. pic.twitter.com/oultMxrtDZ
— ANI (@ANI) June 24, 2018