15 ದಿನಗಳ ನಂತರ ತನ್ನ ಹೊಸ ಸ್ನೇಹಿತನನ್ನು ಹೊರ ಕರೆದುಕೊಂಡು ಹೋದ್ರು ದರ್ಶನ್!

Public TV
1 Min Read
Darshan Still

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಹೊಸ ಸ್ನೇಹಿತ ಬಂದು ಸುಮಾರು 15 ದಿನಗಳೇ ಕಳೆಯಿತು. ಆ ಸ್ನೇಹಿತನನ್ನು ದರ್ಶನ್ ಇಷ್ಟು ದಿನ ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದರು. ಆದರೆ ಶೂಟಿಂಗ್‍ಯಿಂದ ವಾಪಸ್ಸಾಗಿ ದರ್ಶನ್ ತಮ್ಮ ಹೊಸ ಸ್ನೇಹಿತನನ್ನು ಕರೆದುಕೊಂಡು ಒಂದು ಜಾಗಕ್ಕೆ ಹೋಗಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲಿಗಾದರೂ ಬರುತ್ತಾರೆ ಅನ್ನುವ ಸುಳಿವು ಸಿಕ್ಕಿದರೆ ಅಲ್ಲಿ ಜನಜಾತ್ರೆ ಶುರುವಾಗುತ್ತದೆ. ಈ ಸಂದರ್ಭಕ್ಕೆ ಇದೀಗ ಮೈಸೂರು ಸಾಕ್ಷಿಯಾಯ್ತು. ಹೇಗೋ ಏನೋ ದರ್ಶನ್ ಮೈಸೂರಿಗೆ ಬರುತ್ತಾರೆ ಎನ್ನುವ ಸುಳಿವಿನಿಂದಾಗಿ ಶನಿವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಭಕ್ತರ ಜೊತೆ ದರ್ಶನ್ ಭಕ್ತರು ಸೇರಿಕೊಂಡಿದ್ದರು.

DARSHAN 1

ಕೊನೆಗೂ ತಮ್ಮ ಹೊಸ ಸ್ನೇಹಿತನ ಜೊತೆ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ದರ್ಶನ್ ಮನೆಗೆ ಬಂದ ಹೊಸ ಸ್ನೇಹಿತ ಅಂದರೆ ಅವರ ಫೆವರೇಟ್ ಕಾರು ಫೋರ್ಡ್ ಮಸ್ಟ್ಯಾಂಗ್ ಕಾರ್. ಈ ಕಾರು ದರ್ಶನ್ ಮನೆಗೆ ಮೆ 19ರಂದೇ ಆಗಮಿಸಿತ್ತು. ಆದರೆ ದರ್ಶನ್ ಸಿನಿಮಾ ಚಿತ್ರೀಕರಣ ಮತ್ತು ವೈಯಕ್ತಿಕ ಕೆಲಸದಲ್ಲಿ ಬ್ಯುಸಿಯಾದರು. ಹೀಗಾಗಿ ಆ ಕಾರನ್ನು ರಸ್ತೆಗೆ ತಂದಿರಲಿಲ್ಲ.

DARSHAN 4

ಆ ಕಾರ್ ಓಡಿಸದಿರೋದಕ್ಕೆ ಇನ್ನೊಂದು ಬಲವಾದ ಕಾರಣ ಎಂದರೆ ದರ್ಶನ್ ಯಾವುದೇ ವಾಹನ ಖರೀದಿಸಿದರು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪೂಜೆ ನೆರವೇರಿಸಿಯೇ ಮುನ್ನಡೆಯೋದು. ಹೀಗಾಗಿ ಸಮಯದ ಅಭಾವದಿಂದ ಇಲ್ಲಿಯವರೆಗೂ ದರ್ಶನ್ ತಮ್ಮ ಹಳದಿ ಬಣ್ಣದ ಫೋರ್ಡ್ ಕಾರಿಗೆ ತಾಯಿ ಚಾಮುಂಡೇಶ್ವರಿ ದರ್ಶನ ಮಾಡಿಸಿರಲಿಲ್ಲ. ಇದೀಗ ದರ್ಶನ್ ಚಾಮುಂಡೇಶ್ವರಿ ಬೆಟ್ಟಕ್ಕೆ ತಮ್ಮ ಹೊಸ ಕಾರ್ ತೆಗೆದುಕೊಂಡು ಹೋಗಿದ್ದರು.

DARSHAN 5

ದರ್ಶನ್ ತಮ್ಮ ನೂತನ ಫೋರ್ಡ್ ಕಾರಿನಲ್ಲಿ ಚಾಮುಂಡೇಶ್ವರಿ ಸನ್ನಿಧಿ ತಲುಪುತ್ತಿದ್ದಂತೆಯೇ ಮೈಸೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ದರ್ಶನ್ ಹೊಸ ಕಾರಿನ ಫೋಟೋ ಜೊತೆಗೆ ದರ್ಶನ್ ಜೊತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು. ಈ ಹಿಂದೆ ದರ್ಶನ್ ಲ್ಯಾಂಬೋರ್ಗಿನಿ ಖರೀದಿಸಿದಾಗಲೂ ಇದೇ ರೀತಿ ಫ್ಯಾನ್ಸ್ ದರ್ಶನ್ ದರ್ಶನಕ್ಕಾಗಿ ಮುಗಿಬಿದ್ದಿದ್ದರು. ಇದೀಗ ಮತ್ತೊಂದು ಹೊಸ ಕಾರ್ ಜೊತೆ ದರ್ಶನ್ ಬಂದಾಗ ಚಾಮುಂಡಿ ಬೆಟ್ಟದಲ್ಲಿ ದರ್ಶನ್ ಜಯಘೋಶ ಮುಗಿಲುಮುಟ್ಟಿತ್ತು.

Share This Article
Leave a Comment

Leave a Reply

Your email address will not be published. Required fields are marked *