ಚಾಮರಾಜನಗರ: ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದಲ್ಲೂ ನಮ್ಮ ಕಾರ್ಯಕರ್ತನ್ನು ಟಚ್ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಹಿಂದೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ “ನಮ್ಮ ಕಾರ್ಯಕರ್ತರನ್ನ ನಾಳೆಯಿಂದ ಮುಟ್ಟಿದ್ರೆ ಜೋಕೆ! 73 ಜನರನ್ನು ಕಳೆದುಕೊಂಡ ನೋವಿಗೆ ನಾಳೆ ಅಂತಿಮ ತೆರೆ” ಬರೆದು ಟ್ವೀಟ್ ಮಾಡಿದ್ದರು.
ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ವೇಳೆ ಈಗ ಅದೇ ಪ್ರಶ್ನೆಯನ್ನು ಕೇಳಿದಾಗ ಈಗಲೂ ಅಷ್ಟೇ ಕುಮಾರಸ್ವಾಮಿ ಸರ್ಕಾರ ನಮ್ಮ ಕಾರ್ಯಕರ್ತನ್ನು ಟಚ್ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಇದನ್ನು ಓದಿ: ಸರ್ಕಾರ ರಚನೆಗೂ ಮೊದಲೇ ಉಗ್ರ ‘ಪ್ರತಾಪ’ ತೋರಿದ ‘ಸಿಂಹ’
ನಮ್ಮ ಕಾರ್ಯಕರ್ತರನ್ನ ನಾಳೆಯಿಂದ ಮುಟ್ಟಿದ್ರೆ ಜೋಕೆ! ೨೩ ಜನರನ್ನ ಕಳೆದುಕೊಂಡ ನೋವಿಗೆ ನಾಳೆ ಅಂತಿಮ ತೆರೆ!!
— Pratap Simha (@mepratap) May 16, 2018
ನಾನು ಊರು ಕೇರಿ ಗೊತ್ತಿಲ್ಲದೇ ಮೈಸೂರಿಗೆ ಬಂದಾಗ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಇತ್ತು. ಒಂದು ಜೆಡಿಎಸ್ ಇತ್ತು. ಇಂತಹ ಒಂದು ಗ್ರಾಮ ಪಂಚಾಯತ್ ಇಲ್ಲದೆ ಇದ್ದ ಸಂದರ್ಭದಲ್ಲಿ ಬಂದು ಮೈಸೂರಿನಲ್ಲಿ ಗೆದ್ದು, 11,000 ಕೋಟಿ ಅನುದಾನ ತಂದಿದ್ದೇನೆ. ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ 8 ಲೈನ್ ಹೈವೆ ಮಾಡಿಸುತ್ತಿದ್ದೇನೆ ಎಂದು ತಿಳಿಸಿದರು.
ಮೈಸೂರು – ಬೆಂಗಳೂರು ರೈಲ್ವೇ ಡಬ್ಲಿಂಗ್ ಕಂಪ್ಲೀಟ್ ಮಾಡಿಸಿ ಕರ್ನಾಟಕದಲ್ಲಿ ಹೊಸ ಅತೀ ದೊಡ್ಡ ರೈಲ್ವೇ ನಿಲ್ದಾಣವನ್ನು ನಾಗನಹಳ್ಳಿಯಲ್ಲಿ ಮಾಡಿಸುತ್ತಿದ್ದೇನೆ. ಮೈಸೂರಿನಲ್ಲಿರುವ ಇಎಸ್‍ಐ ಆಸ್ಪತ್ರೆಯನ್ನು 34 ಕೋಟಿಯಲ್ಲಿ ಸಂಪೂರ್ಣ ಮಾಡಿಸಿದ್ದೇನೆ. ಸೆಂಟ್ರಲ್ ರೋಡ್ ಫಂಡ್ ನಿಂದ ಮೈಸೂರಿಗೆ 202 ಕೋಟಿ ರೂ. ತಂದಿದ್ದೇನೆ. ಮೈಸೂರಿನ ಜನ ಇಷ್ಟು ಪ್ರೀತಿ ಕೊಟ್ಟು ಗೆಲ್ಲಿಸಿದ್ದಾರೆ. ಆದ್ದರಿಂದ ನಾನು ನಿಯತ್ತಿನಿಂದ ಕೆಲಸ ಮಾಡುತ್ತಿದ್ದೇನೆ. ನಾನು ಬೇರೆಯವರ ರೀತಿ ಆ ಪಕ್ಷ ಈ ಪಕ್ಷ ಹೋಗುವುದಿಲ್ಲ. ಯಾರೋ ಗಾಳಿ ಹಬ್ಬಿಸುತ್ತಿದ್ದಾರೆ. ನಾನು ಮೈಸೂರು ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.