ವಿಜಯಪುರ: ಹೂತಿದ್ದ ಶವ ತೆಗೆದು ಮತ್ತೆ ಮರಣೋತ್ತರ ಪರೀಕ್ಷೆ ಮಾಡಿರುವ ಘಟನೆ ಸಿಂದಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ.
ಸಿಂದಗಿ ತಹಶೀಲ್ದಾರ್ ಡಿಹೆಚ್ ಜಮಾದಾರ ನೇತೃತ್ವದಲ್ಲಿ ದೇವರಹಿಪ್ಪರಗಿ ಪೊಲೀಸರು ಹೂತಿದ್ದ ಬನ್ನಿಹಟ್ಟಿ ನಿವಾಸಿ ಪ್ರಕಾಶ್ ಹರಿಜನ್ ಶವವನ್ನು ಹೊರ ತೆಗೆದಿದ್ದಾರೆ. ನಂತರ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
- Advertisement 2-
ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎಂದು ಪತ್ನಿ ಸುನೀತಾ ಹರಿಜನ್ ಹಾಗೂ ಮತ್ತಿಬ್ಬರು ಸೇರಿ ಮಾರ್ಚ್ 21 ರಂದು ಪ್ರಕಾಶ್ ಅವರನ್ನು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.