ತುಮಕೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಯಾರಿಗೂ ನೆಮ್ಮದಿಯಿಂದ ಇರಲೂ ಬಿಡಲ್ಲ. ದೇವೇಗೌಡರು ಅವರದೇ ಸ್ಟೈಲಿನಲ್ಲಿ ರಾಜಕೀಯ ಮಾಡ್ತಾರೆ ಅಂತಾ ಬಿಜೆಪಿ ಮಾಜಿ ಸಚಿವ ವಿ.ಸೋಮಣ್ಣ ಲೇವಡಿ ಮಾಡಿದ್ದಾರೆ.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವರು, ನಾನು ಸಹ ದೇವೇಗೌಡರ ಗರಡಿಯಲ್ಲಿ ಬೆಳೆದು ಬಂದವನು. ಅವರ ರಾಜಕೀಯ ಲೆಕ್ಕಾಚಾರ ಬಗ್ಗೆ ನನಗೂ ಸ್ವಲ್ಪ ಮಾಹಿತಿ ಇದೆ. ಪುತ್ರ ಕುಮಾರಸ್ವಾಮಿ ಸೇರಿದಂತೆ ಯಾರನ್ನೂ ನೆಮ್ಮದಿಯಿಂದ ಇರಲು ಬಿಡಲ್ಲ ಅಂತಾ ಟೀಕಿಸಿದ್ರು.
ಒಂದು ರಾಷ್ಟ್ರೀಯ ಪಕ್ಷ ಒಬ್ಬ ಯಡಿಯೂರಪ್ಪ ರನ್ನ ಸೋಲಿಸಲು ದೇವೇಗೌಡರ ಜೊತೆ ಸೇರಿ ನಿರಾಯುಧರಾಗಿದ್ದಾರೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ನಮಗೂ ಕಳವಳ ಹುಟ್ಟಿಸಿದೆ. ಈಗಾಗಲೇ ಕೇಂದ್ರದಲ್ಲಿ ಬೆಲೆ ಇಳಿಕೆಯ ಬಗ್ಗೆ ಚಿಂತನೆ ನಡೆದಿದೆ. ಬೆಲೆ ಏರಿಕೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಮಾನ್ಯ ಪ್ರಧಾನಿ ಮೋದಿಯವರು ಬೆಲೆ ಏರಿಕೆಯನ್ನು ತಹಬದಿಗೆ ತರಲಿದ್ದಾರೆ ಅಂತಾ ಹೇಳಿದ್ರು.