ಬೆಂಗಳೂರು: ಇತ್ತೀಚೆಗೆ ಸಿನಿಮಾ ನಟರ ಹೇರ್ ಸ್ಟೈಲ್ ಟ್ರೆಂಡ್ ಆಗುತ್ತಿತ್ತು. ಈಗ ನಟರ ವಾಕಿಂಗ್ ಸ್ಟೈಲ್ ಕೂಡ ಟ್ರೆಂಡ್ ಆಗುತ್ತಿದೆ.
ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ಸುದೀಪ್ ತಮ್ಮ ವಿಭಿನ್ನ ಹೇರ್ ಸ್ಟೈಲ್ ಮೂಲಕ ಗಮನ ಸೆಳೆದಿದ್ದರು. ಸುದೀಪ್ ಅಭಿಮಾನಿಗಳಂತೂ ಇದೇ ಹೇರ್ ಸ್ಟೈಲ್ ಮಾಡಿಸಿಕೊಂಡು ಕಿಚ್ಚ ಸುದೀಪ್ ಮೇಲಿನ ಅಭಿಮಾನವನ್ನು ಮೆರೆದಿದ್ದರು. ಈಗ ಸುದೀಪ್ ಅಭಿಯನದ `ದಿ ವಿಲನ್’ ಸಿನಿಮಾದ ಕಿಚ್ಚನ ವಾಕಿಂಗ್ ಸ್ಟೈಲ್ ಟ್ರೆಂಡ್ ಆಗಿದೆ.
ಇದೊಂದು ಟ್ರೆಂಡಿ ವಾಕಿಂಗ್ ಸ್ಟೈಲ್ ಆಗಿದ್ದು, ಈ ಲುಕ್ ಅವರ ಮುಂದಿನ ಚಿತ್ರ `ದಿ ವಿಲನ್’ ನಲ್ಲಿ ನೋಡಬಹುದು. ನಟ ಮತ್ತು ನಿರ್ದೇಶಕ ಪ್ರೇಮ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ `ದಿ ವಿಲನ್’ ಸಿನಿಮಾದಲ್ಲಿ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಪ್ರೇಮ್ ಸಿನಿಮಾದ ಎರಡು ಪೋಸ್ಟರ್ ಬಿಡುಗಡೆ ಮಾಡಿದ್ದರು. ಒಂದು ಶಿವರಾಜ್ ಕುಮಾರ್ ಅವರು ಕುಳಿತಿರುವ ಪೋಸ್ಟರ್ ಆಗಿದ್ದು, ಮತ್ತೊಂದು ಸುದೀಪ್ ನಿಂತಿರೋದು. ಈಗ ಆ ಪೋಸ್ಟರ್ ಭಾರೀ ಸದ್ದು ಮಾಡುತ್ತಿದೆ.
ಸಿನಿಮಾದಲ್ಲಿ ಸುದೀಪ್ ಅವರು ನಿಂತಿರುವ ಸ್ಟೈಲ್ ಈಗ ಟ್ರೆಂಡ್ ಆಗಿದ್ದು, ಅಭಿಮಾನಿಗಳು ಅದನ್ನು ಅನುಕರಣೆ ಮಾಡುತ್ತಿದ್ದಾರೆ. ಕಿಚ್ಚನಂತೆ ಫೋಸ್ ಕೊಟ್ಟು ಸ್ಮೈಲ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಸುದೀಪ್ ರೀತಿ ನಿಂತು ಫೋಟೋ ಕ್ಲಿಕ್ಕಿಸಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.
ಅಭಿಮಾನಿಗಳ ಕ್ರೇಜ್ ನೋಡಿದ ಸುದೀಪ್ ಅವರ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. `ದಿ ವಿಲನ್’ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ಇದೇ ವರ್ಷ ತೆರೆಗೆ ಬರುತ್ತಿದೆ.