ಗೌರಿ ಸಂತಾನ, ಆ ಸಂತಾನ ಅಂತಾ ಹೇಳಿಕೊಳ್ಳುವ ಬಹುತೇಕ ಬುದ್ದಿ ಜೀವಿಗಳು ಮಾರಾಟವಾಗಿದ್ದಾರೆ: ಅನಂತಕುಮಾರ್ ಹೆಗ್ಡೆ

Public TV
1 Min Read
Ananthkumar hegde Gauri

ಬೆಳಗಾವಿ: ಪ್ರಧಾನಿ ಮೋದಿ ವಿರುದ್ಧ ಪ್ರಚಾರ ನಡೆಸಲು ಕಾಂಗ್ರೆಸ್ ಕೆಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ 5 ಲಕ್ಷ ಕೋಟಿ. ರೂಪಾಯಿಗೆ ಗುತ್ತಿಗೆ ನೀಡಿದೆ. ಮೋದಿ ವಿರುದ್ಧ ಪ್ರಚಾರ ನಡೆಸಲು ಗೌರಿ ಸಂತಾನ, ಆ ಸಂತಾನ ಎಂಬ ಎಲ್ಲ ವಿಚಾರವಾದಿಗಳ ಬೆಂಬಲವಿದೆ. ರಾಜ್ಯದ ಬಹುತೇಕ ಬುದ್ದಿಜೀವಿಗಳು ತಮ್ಮನ್ನ ಹಣಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ ಅಂತಾ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಆರೋಪಿಸಿದ್ರು.

ಭಾನುವಾರ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅನಂತಕುಮಾರ್ ಹಗ್ಡೆ, ನಟ ಪ್ರಕಾಶ್ ರೈ ನಾಲಿಗೆ ಎರಡು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಪ್ರಕಾಶ್ ರೈ ನಾನು ಹಿಂದೂ ವಿರೋಧಿ ಅಲ್ಲ, ಆದ್ರೆ ಮೋದಿ, ಅಮಿತ್ ಶಾ ಮತ್ತು ಅನಂತಕುಮಾರ್ ಹಗ್ಡೆ ವಿರೋಧಿ ಅಂತಾ ಹೇಳ್ತಾರೆ. ನಿದ್ದೆ ಮಂಪರಿನಲ್ಲಿ ಹುಚ್ಚು ಹಿಡಿದವ್ರು ಮಾತ್ರ ಈ ರೀತಿ ಹೇಳೋದಕ್ಕೆ ಸಾಧ್ಯ ಅಂತಾ ರೈ ವಿರುದ್ಧ ಕಿಡಿಕಾರಿದ್ರು.

vlcsnap 2018 04 30 10h13m09s849

ನರೇಂದ್ರ ಮೋದಿ ಕಪ್ಪು ಹಣದ ಬಾಣ ಬಿಡುತ್ತಿದ್ದಂತೆ ಒಬ್ಬೊಬ್ಬರು ದೇಶ ಬಿಟ್ಟು ಹೋಗಲು ಆರಂಭಿಸಿದ್ರು. ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕೊಲೊಂಬಿಯಾ ಗರ್ಲ್ ಫ್ರೆಂಡ್ ಜೊತೆ ಹೋಗಲಿದ್ದಾರೆ. ಮಗನ ಜೊತೆ ಸೋನಿಯಾ ಗಾಂಧಿ ದೇಶ ಬಿಡ್ತಾರೆ ಅಂತಾ ಭವಿಷ್ಯ ನುಡಿದ್ರು.

ಸಿದ್ದರಾಮಯ್ಯ ರಾಜ್ಯದ ದೇವಸ್ಥಾನ, ಮಠಗಳ ಮೇಲೆ ಕಣ್ಣೀಟ್ಟಿದ್ದಾರೆ. ಆದ್ರೆ ಜಕಾತ್ (ದಾನ) ಹೆಸರಲ್ಲಿ ಮಸೀದಿ, ಚರ್ಚ್ ಗಳಿಗೆ ಎಷ್ಟು ಹಣ ಬರುತ್ತೆಂದು ಲೆಕ್ಕ ಇಟ್ಟಿದ್ದಾರಾ? ಜಕಾತ್ ಹೆಸರಲ್ಲಿ ಬಂದ ಹಣದಿಂದ ಬಾಂಬ್, ತಲ್ವಾರ್ ಖರೀದಿ ಮಾಡಲಾಗುತ್ತೆ ಅಂತಾ ಆರೋಪ ಮಾಡಿದ್ರು.

Share This Article
Leave a Comment

Leave a Reply

Your email address will not be published. Required fields are marked *