ಫಿಲ್ಮ್ ಇಂಡಸ್ಟ್ರಿ ರೇಪ್‍ಗೆ ಬದಲಾಗಿ ತುತ್ತು ಅನ್ನ ನೀಡುತ್ತೆ: ಸರೋಜ್ ಖಾನ್

Public TV
1 Min Read
SarojKhan825

ಮುಂಬೈ: ಸಿನಿಮಾ ಉದ್ಯಮದಲ್ಲಿ ಕೆಲವು ದಿನಗಳಿಂದ ‘ಕಾಸ್ಟಿಂಗ್ ಕೌಚ್’ ಕುರಿತಾಗಿ ಭಾರೀ ಚರ್ಚೆಗಳು ನಡೆಯುತ್ತಿವೆ. ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಕಾಸ್ಟಿಂಗ್ ಕೌಚ್ ಪರ ಹೇಳಿಕೆ ನೀಡುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾರೆ.

ಬಾಲಿವುಡ್ ಕಾಸ್ಟಿಂಗ್ ಕೌಚ್ ನೆಪದಲ್ಲಿ ನಡೆಸುವ ರೇಪ್‍ಗೆ ಬದಲಾಗಿ ನಟಿಗೆ ಅನ್ನವನ್ನು ನೀಡುತ್ತದೆ ಅಂತಾ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ ವೇಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾಸ್ಟಿಂಗ್ ಕೌಚ್ ಕಿರುಕುಳ ಬಾಬಾ ಅಝಮ್ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸಿನಿಮಾ ಅಂಗಳದಲ್ಲಿರುವ ಪ್ರತಿಯೊಬ್ಬ ಹುಡುಗಿಯ ಮೇಲೆ ಒಬ್ಬರಾದ್ರೂ ಕೈ ಹಾಕುವ ಪ್ರಯತ್ನ ಮಾಡ್ತಾರೆ. ಇಂತಹ ಪ್ರಕರಣದಲ್ಲಿ ಸರ್ಕಾರದ ಪ್ರತಿನಿಧಿಗಳು ಸಹ ಇರ್ತಾರೆ. ಸರ್ಕಾರದ ಪ್ರತಿನಿಧಿಗಳು ಫಿಲ್ಮ್ ಇಂಡಸ್ಟ್ರಿಯ ಹಿಂದೆ ಯಾಕೆ ಬೀಳುತ್ತಾರೋ ಗೊತ್ತಾಗುತ್ತಿಲ್ಲ. ಕೊನೆ ಪಕ್ಷದಲ್ಲಿ ಸಿನಿಮಾದವರು ರೇಪ್ ಬದಲಾಗಿ ನಟಿಗೆ ತುತ್ತು ಅನ್ನವಾದ್ರೂ ನೀಡ್ತಾರೆ ಅಂತಾ ಹೇಳಿದ್ದಾರೆ.

ಈ ಎಲ್ಲ ವಿಷಯಗಳು ನಟಿಯ ಮೇಲೆ ನಿರ್ಧರಿಸಲ್ಪಡುತ್ತವೆ. ನಟಿ ಲೈಂಗಿಕ ಕಿರುಕುಳಕ್ಕೆ ಒಳಗಾಗಲು ಇಷ್ಟ ಪಡದೇ ಇದ್ದರೆ ದೂರ ಉಳಿಯುವ ಸ್ವಾತಂತ್ರ್ಯ ಆಕೆಗಿದೆ. ಅವಳಲ್ಲಿ ನಟನೆಯ ಕಲೆ ಇದ್ರೆ, ಆಕೆ ಎಲ್ಲಿಯಾದ್ರೂ ಬದುಕಬಹುದು. ಆದ್ರೆ ಫಿಲ್ಮ್ ಇಂಡಸ್ಟ್ರಿಗೆ ಅವಮಾನಿಸುವಂತಹ ಹೇಳಿಕೆಗಳನ್ನು ನೀಡಬಾರದು. ಫಿಲ್ಮ್ ಇಂಡಸ್ಟ್ರಿ ನಮಗೆ ತಂದೆ-ತಾಯಿ. ಹೀಗಾಗಿ ಅನಾವಶ್ಯಕ ಹೇಳಿಕೆಗಳನ್ನು ನೀಡಬಾರದು ಅಂತಾ ಸರೋಜ್ ಖಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ್ರು ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಸ್ಯಾಂಡಲ್ ವುಡ್ ನಟಿ

ಸರೋಜ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟಾಲಿವುಡ್ ನಟಿ ಶ್ರೀರೆಡ್ಡಿ, ಇದೂವರೆಗೂ ಸರೋಜ್ ಖಾನ್ ಮೇಡಂ ಮೇಲಿದ್ದ ಗೌರವವೆಲ್ಲಾ ಕಡಿಮೆಯಾಗಿದೆ. ಸಿನಿಮಾ ರಂಗದಲ್ಲಿರುವ ಒಬ್ಬ ಹಿರಿಯ ಕಲಾವಿದೆಯಾಗಿ, ಯುವ ನಟಿಯರಿಗೆ ಒಳ್ಳೆಯ ದಾರಿಯನ್ನು ತೋರಿಸಬೇಕು. ಅದರ ಬದಲಾಗಿ ನಟಿಯರು ನಿರ್ಮಾಪಕರ ಗುಲಾಮರು ಇದ್ದಂತೆ ನಿಮ್ಮ ಹೇಳಿಕೆ ಇದೆ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಕನ್ನಡದ ನಟಿ ಕವಿತಾ!

Saroj Khan

Share This Article
Leave a Comment

Leave a Reply

Your email address will not be published. Required fields are marked *