ಪ್ರಧಾನಿ ಮೋದಿ ವಿರುದ್ಧ ಮತ್ತೊಮ್ಮೆ ನಾಲಗೆ ಹರಿಬಿಟ್ಟ ಸಿಎಂ ಇಬ್ರಾಹಿಂ- ವಿಡಿಯೋ ನೋಡಿ

Public TV
1 Min Read
modi

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂ.. ಎಂದು ಕರೆಯುವ ಮೂಲಕ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ತಮ್ಮ ನಾಲಗೆಯನ್ನು ಮತ್ತೊಮ್ಮೆ ಹರಿಬಿಟ್ಟಿದ್ದಾರೆ.

ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಾವೇಶ ಕಾರ್ಯಕ್ರಮದ ವೇಳೆ ಮಾತನಾಡಿದ ಸಿಎಂ ಇಬ್ರಾಹಿಂ, ಪ್ರಧಾನಿ ಮೋದಿ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

CM Ibrahim and Modiಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೆಚ್ಚು ಮಾತನಾಡುತ್ತಿರಲಿಲ್ಲ, ಕೆಲಸ ಮಾಡುತ್ತಿದ್ದರು. ಆದರೆ ಪ್ರಧಾನಿ ಮೋದಿ ಅವರ ಆಡಳಿತವನ್ನು ಟೀಕಿಸಿ, ಈ ಮುಂ.. ಬರೀ ಮಾತನಾಡುತ್ತೆ ಹೊರತು ಕೆಲಸ ಮಾಡಲ್ಲ. `ಅಚ್ಚೇ ದಿನ್’ ಬರುತ್ತದೆ ಎಂದು ಜನರನ್ನು ನಂಬಿಸಿ ಆಡಳಿತ ಪಡೆದರು. ಆದರೆ ಇವರು ಅಧಿಕಾರವಹಿಸಿದ ಬಳಿಕ ಅಚ್ಚೇ ದಿನ್ ಪದದ ಅರ್ಥವೇ ಬದಲಾಗಿದೆ. ನಮಗೆ ಅಚ್ಚೇ ದಿನ್ ಬೇಡ ಎಂದರು.

ಯಾವುದೇ ಬ್ಯಾಂಕ್ ಗೆ ಭೇಟಿ ನೀಡಿದ್ರೂ ಹಣ ಸಿಗುತ್ತಿಲ್ಲ. ಎಲ್ಲರಿಗೂ ಕೇವಲ ಡೆಬಿಟ್ ಕಾರ್ಡ್ ನೀಡುತ್ತಿದ್ದಾರೆ. ಆದರೆ 500 ರೂ. ಬಂಡವಾಳ ಹೂಡಿ ತರಕಾರಿ ವ್ಯಾಪಾರ ನಡೆಸುವ ಅನಕ್ಷರಸ್ಥ ಮಹಿಳೆಯರು ಹೇಗೆ ತಮ್ಮ ಜೀವನ ನಡೆಸುತ್ತಾರೆ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

ಹಲವು ಉದ್ಯಮಿಗಳು ಬ್ಯಾಂಕ್ ಗಳಿಗೆ ಮೋಸ ಮಾಡಿ ದೇಶ ಬಿಟ್ಟಿದ್ದಾರೆ. ನೀರವ್ ಮೋದಿ, ವಿಜಯ್ ಮಲ್ಯರಂತಹ ಉದ್ಯಮಿಗಳು ದೇಶ ಬಿಟ್ಟಿದ್ದಾರೆ. ಬ್ಯಾಂಕ್ ಗಳನ್ನು ದಿವಾಳಿ ಮಾಡಿದ್ದಾರೆ. ದೈನಂದಿನ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗಿದೆ ಎಂದು ಆರೋಪಿಸಿದರು.  ಇದನ್ನೂ ಓದಿ: ಮೋದಿಗೆ ಅಧಿಕಾರ ಕೊಟ್ಟಿರೋದು ಹುಚ್ಚನ ಕೈಗೆ ಶೇವಿಂಗ್ ಕತ್ತಿ ಕೊಟ್ಟಂಗಾಗಿದೆ: ಸಿಎಂ ಇಬ್ರಾಹಿಂ ಲೇವಡಿ

cm ibrahim 1

Share This Article
Leave a Comment

Leave a Reply

Your email address will not be published. Required fields are marked *