ಶಶಿಕಲಾ ರಾಜಾತಿಥ್ಯಕ್ಕೆ ಆದೇಶ ಕೊಟ್ಟಿದ್ದೇ ಸಿಎಂ- ಸತ್ಯನಾರಾಯಣ ರಾವ್ ಆರೋಪ

Public TV
1 Min Read
SASI CM NAYARAN

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆಯಲ್ಲಿ ಜೈಲು ಸೇರಿರೋ ಶಶಿಕಲಾ ನಟರಾಜನ್‍ಗೆ ರಾಜ ಮರ್ಯಾದೆ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿರುವುದಾಗಿ ನಿವೃತ್ತ ಕಾರಾಗೃಹ ಡಿಜಿಪಿ ಸತ್ಯನಾರಾಯಣರಾವ್ ಆರೋಪ ಮಾಡಿದ್ದಾರೆ.  ಇದನ್ನೂ ಓದಿ: ಶಶಿಕಲಾಗೆ ವಿಶೇಷ ಸವಲತ್ತು ಕೊಡಿ ಅಂತ ಹೇಳಿಲ್ಲ – ಸತ್ಯನಾರಾಯಣರಾವ್ ಆರೋಪಕ್ಕೆ ಸಿಎಂ ಸ್ಪಷ್ಟನೆ

SATYANARAYAN
ಜೈಲಲ್ಲಿ ಹಾಸಿಗೆ, ದಿಂಬು ಕೊಡುವಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಖುದ್ದು ಕರೆದು ಸೂಚಿಸಿದ್ದರು. ಆದ್ರೆ ಇಂತಹ ಐಷಾರಾಮಿ ಸೌಲಭ್ಯ ನೀಡಲು ನನಗೆ ಅಧಿಕಾರವಿಲ್ಲವೆಂದರೂ ಸಿದ್ದರಾಮಯ್ಯ ಅವರು ಬಿಡಲಿಲ್ಲ. ಹೀಗಾಗಿ ಮುಖ್ಯಮಂತ್ರಿಗಳ ಆದೇಶದಂತೆ ನಾನು ಐಷಾರಾಮಿ ಸೌಲಭ್ಯ ನೀಡಿದ್ದೇನೆ. ಇದರಲ್ಲಿ ನನ್ನ ತಪ್ಪೇನಿಲ್ಲ ಅಂತ ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಸಮಿತಿ ಎದುರು ಸತ್ಯನಾರಾಯಣ ರಾವ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ಸತ್ಯನಾರಾಯಣ ರಾವ್ ಮಂಗಳವಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಶಶಿಕಲಾಗೆ ಕಿಚನ್ ಅಲ್ಲದೇ ಜೈಲಿನಲ್ಲಿದೆ ವಿಶೇಷ ವಿಸಿಟಿಂಗ್ ರೂಂ!

JAI

ಜೈಲಿನಲ್ಲಿ ಶಶಿಕಲಾಗೆ ರಾಜಮರ್ಯಾದೆ ಕೊಡುತ್ತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಆಗಿನ ಡಿಐಜಿಯಾಗಿದ್ದ ರೂಪಾ ಅವರು ವರದಿ ಕೊಟ್ಟಿದ್ದರು. ಆ ಬಳಿಕ ರಾಜಮರ್ಯಾದೆ ಕೊಡುತ್ತಿರೋ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಆ ವರದಿಯ ತನಿಖೆಗೆ ಸರ್ಕಾರ ಕೂಡ ಆದೇಶ ಮಾಡಿತ್ತು. ಅದರಲ್ಲಿ ಸತ್ಯನಾರಾಯಣ ರಾವ್ ವಿರುದ್ಧ ಆರೋಪ ಮಾಡಲಾಗಿತ್ತು. ಆದ್ರೆ ಈ ಕುರಿತು ಸತ್ಯನಾರಾಯಣ ರಾವ್ ಅವರು ಪ್ರತಿಕ್ರಿಯಿಸಿ, ಶಸಿಕಲಾಗೆ ರಾಜಮರ್ಯಾದೆ ಕೊಟ್ಟಿರುವುದು ನನ್ನ ವೈಯಕ್ತಿಕ ಹಿತಾಸಕ್ತಿಯಿಂದಲ್ಲ. ಇದರಲ್ಲಿ ನಾನು ಯಾವುದೇ ರೀತಿಯ ಲಂಚ ಪಡೆದುಕೊಂಡಿಲ್ಲ. ಸರ್ಕಾರದ ಆದೇಶವನ್ನು ನಾನು ಪಾಲಿಸಿದ್ದೇನೆ ಅಂತ ಅರ್ಜಿಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಹಣ ಕೊಟ್ರೆ ಜೈಲಲ್ಲೇ ಅರಮನೆ ಸೌಕರ್ಯ: ಆರೋಪ ಸುಳ್ಳು ಎಂದ ಡಿಜಿ, ತನಿಖೆ ಮಾಡ್ಲಿ ಎಂದ ರೂಪಾ

ಇದನ್ನೂ ಓದಿ: ಎಲ್‍ಇಡಿ ಟಿವಿ,ಕುಷನ್ ಬೆಡ್, ಮಿನರಲ್ ವಾಟರ್- ಪರಪ್ಪನ ಅಗ್ರಹಾರದಲ್ಲಿ ವಂಚಕ ತೆಲಗಿಗೆ ರಾಜಮರ್ಯಾದೆ

vlcsnap 2018 03 07 11h51m24s145

Share This Article
Leave a Comment

Leave a Reply

Your email address will not be published. Required fields are marked *