ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧಿಯಾಗಿರೋ ಶಶಿಕಲಾ ನಟರಾಜನ್‍ಗೆ ವಿಶೇಷ ಸೌಲಭ್ಯ ನೀಡುವಂತೆ ನಾನು ಹೇಳಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶಶಿಕಲಾ ಕಡೆಯವರು ನನ್ನನ್ನು ಬಂದು ಭೇಟಿ ಆಗಿದ್ರು. ಚಾಪೆ, ದಿಂಬು ಕೊಡ್ತಿಲ್ಲ ಅಂತ ಹೇಳಿದ್ರು. ಆಗ ನಾನೇ ಜೈಲು ನಿಯಮ ಪ್ರಕಾರ ಏನು ಸವಲತ್ತು ಕೊಡ್ಬಹುದೋ ಅದನ್ನು ಕೊಡಿ ಅಂತ ಕಾರಾಗೃಹ ಡಿಜಿಪಿ ಆಗಿದ್ದ ಸತ್ಯನಾರಾಯಣರಾವ್‍ಗೆ ಸೂಚಿಸಿದ್ದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಶಶಿಕಲಾ ರಾಜಾತಿಥ್ಯಕ್ಕೆ ಆದೇಶ ಕೊಟ್ಟಿದ್ದೇ ಸಿಎಂ- ಸತ್ಯನಾರಾಯಣ ರಾವ್ ಆರೋಪ
Advertisement
Advertisement
ಮುಖ್ಯಮಂತ್ರಿಯವರು ಖುದ್ದು ನನ್ನನ್ನು ಕರೆದು ಶಶಿಕಲಾಗೆ ಜೈಲಲ್ಲಿ ಹಾಸಿಗೆ, ದಿಂಬು ಕೊಡುವಂತೆ ಸೂಚಿಸಿದ್ದರು. ಆದ್ರೆ ಇಂತಹ ಐಷಾರಾಮಿ ಸೌಲಭ್ಯ ನೀಡಲು ನನಗೆ ಅಧಿಕಾರವಿಲ್ಲವೆಂದರೂ ಸಿದ್ದರಾಮಯ್ಯ ಅವರು ಬಿಡಲಿಲ್ಲ. ಹೀಗಾಗಿ ಮುಖ್ಯಮಂತ್ರಿಗಳ ಆದೇಶದಂತೆ ನಾನು ಐಷಾರಾಮಿ ಸೌಲಭ್ಯ ನೀಡಿದ್ದೇನೆ. ಇದರಲ್ಲಿ ನನ್ನ ತಪ್ಪೇನಿಲ್ಲ ಅಂತ ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಸಮಿತಿ ಎದುರು ಸತ್ಯನಾರಾಯಣ ರಾವ್ ಹೇಳಿದ್ದರು. ಅಲ್ಲದೇ ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ಸತ್ಯನಾರಾಯಣ ರಾವ್ ಮಂಗಳವಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
Advertisement
ಜೈಲಿನಲ್ಲಿ ಶಶಿಕಲಾಗೆ ರಾಜಮರ್ಯಾದೆ ಕೊಡುತ್ತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಆಗಿನ ಡಿಐಜಿಯಾಗಿದ್ದ ರೂಪಾ ಅವರು ವರದಿ ಕೊಟ್ಟಿದ್ದರು. ಆ ಬಳಿಕ ರಾಜಮರ್ಯಾದೆ ಕೊಡುತ್ತಿರೋ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಆ ವರದಿಯ ತನಿಖೆಗೆ ಸರ್ಕಾರ ಕೂಡ ಆದೇಶ ಮಾಡಿತ್ತು.