ಅಪಘಾತ ನಡೆದರೂ ಕಾರು ನಿಲ್ಲಿಸದೆ ಹೋದ ಸಚಿವ ಅನಂತ್ ಕುಮಾರ್ ಹೆಗ್ಡೆ!

Public TV
1 Min Read
Ananth kumar hegde F

ಚಿಕ್ಕಬಳ್ಳಾಪುರ: ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಅವರ ಹಿಂಬಾಲಕರ ಕಾರಿನ ಡ್ರೈವರ್ ಸಡನ್ ಬ್ರೇಕ್ ಹಾಕಿದ್ರಿಂದ ಕಾರ್ ಬೈಕಿಗೆ ಡಿಕ್ಕಿ ಹೊಡೆದಿದೆ. ಆದ್ರೆ ಅಪಘಾತವಾದರೂ ಕಾರು ನಿಲ್ಲಿಸದೆ ಸಚಿವರು ಸ್ಥಳದಿಂದ ತೆರಳುವ ಮೂಲಕ ಮಾನವೀಯತೆಯನ್ನು ಮರೆತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ- ದೊಡ್ಡಬಳ್ಳಾಪುರ ಮಾರ್ಗದ ಸಾವಕನಹಳ್ಳಿ ಗೇಟ್ ಬಳಿ ಭಾನುವಾರ ಘಟನೆ ಈ ನಡೆದಿದೆ. ಅಪಘಾತದಿಂದಾಗಿ ಸಚಿವರ ಕಾರ್ ನ ಹಿಂದಿನಿಂದ ಬರುತ್ತಿದ್ದ ವಾಹನಗಳಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

vlcsnap 2018 01 29 11h22m31s496

ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರು ತುಮಕೂರಿನಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ದೇವನಹಳ್ಳಿ ಏರ್ ಪೋರ್ಟ್ ಗೆ ತೆರಳುತ್ತಿದ್ದರು. ಈ ವೇಳೆ ಸಚಿವರ ಕಾರಿನ ಮುಂಭಾಗದ ಪೊಲೀಸ್ ವಾಹನಕ್ಕೆ ಕೋತಿ ಅಡ್ಡ ಬಂದಿದೆ ಎನ್ನಲಾಗಿದ್ದು, ಕಾರು ಚಾಲಕ ಸಡನ್ ಬ್ರೇಕ್ ಹಾಕಿದ್ದಾನೆ. ಹೀಗಾಗಿ ಹೆಗ್ಡೆ ಅವರ ಕಾರಿನ ಹಿಂದೆ ಬಂದ ಪೊಲೀಸ್ ಜೀಪ್, ಇನ್ನೋವಾ ಕಾರು ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಬೈಕ್ ಸವಾರ ಹಾಗೂ ಇನ್ನೊವಾ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತವಾದರೂ ಕಾರು ನಿಲ್ಲಿಸದೆ ಅನಂತ್ ಕುಮಾರ್ ಹೆಗಡೆ ಸ್ಥಳದಿಂದ ಹೊರಟು ಹೋಗಿದ್ದಾರೆ ಅಂತ ಅಪಘಾತಕ್ಕೊಳಗಾದವರು ದೂರಿದ್ದಾರೆ. ಸಚಿವರು ಮಾನವೀಯತೆ ಇಲ್ಲದೆ ನಡೆದುಕೊಂಡ ಕ್ರಮದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಸಣ್ಣಪುಟ್ಟ ಗಾಯಗೊಂಡ ಮೂವರನ್ನು ಬೇರೆ ವಾಹನದಲ್ಲಿ ಸ್ಥಳೀಯರು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಪಘಾತದಲ್ಲಿ ಇನ್ನೋವಾ ಕಾರು ದ್ವಿಚಕ್ರ ವಾಹನವೂ ಕೂಡ ಜಖಂ ಆಗಿದ್ದು ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

CKB ANTHKUMAR ACCIDENT AV 3

CKB ANTHKUMAR ACCIDENT AV 4

CKB ANTHKUMAR ACCIDENT AV 5

CKB ANTHKUMAR ACCIDENT AV 6

CKB ANTHKUMAR ACCIDENT AV 7

CKB ANTHKUMAR ACCIDENT AV 8

CKB ANTHKUMAR ACCIDENT AV 9

CKB ANTHKUMAR ACCIDENT AV 10

 

Share This Article
Leave a Comment

Leave a Reply

Your email address will not be published. Required fields are marked *