ಸಂಕ್ರಾಂತಿಯಂದು ದರ್ಶನ್ ನಟನೆಯ 51ನೇ ಚಿತ್ರದ ಮುಹೂರ್ತ

Public TV
1 Min Read
51th movie 1

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ದರ್ಶನ್ ಅಭಿನಯಿಸುತ್ತಿರುವ 51ನೇ ಚಿತ್ರದ ಮುಹೂರ್ತ ಇಂದು ನಗರದ ಚಂದ್ರಾಲೇಔಟ್‍ನಲ್ಲಿಯ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು.

ಸಿನಿಮಾದ ಮುಹೂರ್ತದಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ, ಹರಿಕೃಷ್ಣ ಸೇರಿದಂತೆ ಚಿತ್ರತಂಡ ಎಲ್ಲ ಸದಸ್ಯರು ಭಾಗಿಯಾಗಿದ್ದರು. ಸಂಕ್ರಾಂತಿ ಹಬ್ಬದಂದು ದರ್ಶನ್ ನಟನೆಯ 51ನೇ ಚಿತ್ರದ ಮುಹೂರ್ತ ನಡೆದಿರುವುದು ಡಿ ಬಾಸ್ ಅಭಿಮಾನಿಗಳಿಗೆ ಡಬಲ್ ಖುಷಿಯನ್ನು ನೀಡಿದೆ. ದರ್ಶನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಸಿನಿಮಾ ಇದಾಗಿದೆ.

51th movie 2

ಹಲವು ದಿನಗಳಿಂದ ಚಂದನವನದಲ್ಲಿ ದರ್ಶನ್ ನಟನೆಯ 51ನೇ ಚಿತ್ರ ಯಾವುದು? ನಟಿ ಯಾರು? ಚಿತ್ರೀಕರಣ ಆರಂಭದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಈ ಎಲ್ಲ ಪ್ರಶ್ನೆಗಳಿಗೆ ಚಿತ್ರ ತಂಡ ಸರಳವಾಗಿ ಮುಹೂರ್ತ ಮಾಡುವ ಮೂಲಕ ಉತ್ತರವನ್ನು ನೀಡಿದೆ. ಆದ್ರೆ ಚಿತ್ರದ ಹೆಸರನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.

ಸಿನಿಮಾದ ಚಿತ್ರೀಕರಣ ಫೆಬ್ರವರಿ ತಿಂಗಳನಿಂದ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಸದ್ಯ ದರ್ಶನ್ ಕುರುಕ್ಷೇತ್ರದಲ್ಲಿ ಬ್ಯುಸಿಯಾಗಿದ್ದು, ಮುಂದಿನ ತಿಂಗಳು 51ನೇ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಪಿ.ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಹರಿಕೃಷ್ಣರ ಸಂಯೋಜನೆಯಲ್ಲಿ ಹಾಡುಗಳು ಮೋಡಿ ಮಾಡಲಿವೆ. ರಶ್ಮಿಕಾ ಅಭಿನಯದ ಅಂಜಿನಿಪುತ್ರ ಮತ್ತು ಚಮಕ್ ಸಿನಿಮಾಗಳೆರೆಡು ಡಿಸೆಂಬರ್ ನಲ್ಲಿ ತೆರೆಕಂಡು ಯಶಸ್ಸಿನತ್ತ ಮುನ್ನುಗುತ್ತಿವೆ.

darshan rashmika a

Darshan Rashmika

Share This Article
Leave a Comment

Leave a Reply

Your email address will not be published. Required fields are marked *