ನವದೆಹಲಿ: ನಮ್ಮ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಇಂದು ಬೆಳಗ್ಗೆ 9.29ಕ್ಕೆ ಇಸ್ರೋ ಭಾರತದ 100ನೇ ಉಪಗ್ರಹವನ್ನು ನಭಕ್ಕೆ ಚಿಮ್ಮಿಸಿ ಇಸ್ರೋ ಶತಕ ಸಾಧನೆ ಮಾಡಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಉಡಾವಣಾ ಕೇಂದ್ರದಿಂದ ಭಾರತದ ಕಾರ್ಟೋಸ್ಯಾಟ್-2 ಸಿರೀಸ್‍ನ ಒಂದು, ಒಂದು ನ್ಯಾನೋ ಮತ್ತು ಮೈಕ್ರೋ ಸ್ಯಾಟಲೈಟ್‍ಗಳನ್ನು ಹೊತ್ತು ಪಿಎಸ್‍ಎಲ್‍ವಿ ಸಿ-40 ಉಡಾವಣಾ ನೌಕೆ ನಭಕ್ಕೆ ಚಿಮ್ಮಿದೆ. ಇದರ ಜೊತೆಗೆ ಅಮೆರಿಕ, ಕೆನಡಾ, ಇಂಗ್ಲೆಂಡ್, ಕೊರಿಯಾ, ಫಿನ್‍ಲ್ಯಾಂಡ್ ಹಾಗೂ ಫ್ರಾನ್ಸ್ ಗೆ ಸೇರಿದ 28 ವಿದೇಶಿ ಉಪಗ್ರಹಗಳು ಕಕ್ಷೆ ಸೇರಲಿವೆ. ಕಾರ್ಟೋಸ್ಯಾಟ್-2 ಸ್ಯಾಟ್‍ಲೈಟ್ 710 ಕೆಜಿ ಭಾರವಿದೆ.
ಎರಡು ಕಕ್ಷೆಗಳಿಗೆ ಉಪಗ್ರಹಗಳನ್ನ ಸೇರಿಸುತ್ತಿರುವುದರಿಂದ ಈ ಉಡಾವಣೆ ವಿಶಿಷ್ಟವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 30 ಉಪಗ್ರಹಗಳನ್ನ ಭೂಮಿಯಿಂದ 550 ಕಿ.ಮೀ ಎತ್ತರದ ಕಕ್ಷೆಗೆ ಉಡಾವಣೆ ಮಾಡಿದ್ದು, ಮತ್ತೊಂದನ್ನು 359 ಕಿ.ಮೀ ಎತ್ತರದ ಕಕ್ಷೆಗೆ ಸೇರಿಸಬೇಕಿದೆ. ಮಲ್ಟಿಪಲ್ ಬರ್ನ್ ಟೆಕ್ನಾಲಜಿ ಮೂಲಕ ಇದನ್ನ ಮಾಡಲಿದ್ದು, ರಾಕೆಟ್‍ನ ಎತ್ತರವನ್ನ ನಿಯಂತ್ರಿಸಲು ಅದನ್ನು ಸ್ವಿಚ್ ಆಫ್ ಮಾಡಿ ಮತ್ತೆ ಸ್ವಿಚ್ ಆನ್ ಮಾಡಲಾಗುತ್ತದೆ.
ಉಡಾವಣೆ ಮತ್ತು ಉಪಗ್ರಹಗಳನ್ನು ಎರಡು ಕಕ್ಷೆಗೆ ಸೇರಿಸುವ ಈ ಇಡೀ ಪ್ರಕ್ರಿಯೆಗೆ ಸುಮಾರು 2 ಗಂಟೆ 21 ನಿಮಿಷ ಸಮಯ ಹಿಡಿಯುತ್ತದೆ. ಪಿಎಸ್‍ಎಲ್‍ವಿ ಉಡವಣೆಯ ಕೌಂಟ್‍ಡೌನ್ ಗುರುವಾರ ಬೆಳಗ್ಗೆ 5.29ರಿಂದ ಶುರುವಾಗಿತ್ತು.
ಕಳೆದ ವರ್ಷದ ಆಗಸ್ಟ್ ನಲ್ಲಿ ಉಷ್ಣ ಕವಚ ಪ್ರತ್ಯೇಕೀಕರಣದಲ್ಲಿ ತೊಂದರೆ ಉಂಟಾಗಿ ಉಡಾವಣೆ ವಿಫಲವಾಗಿತ್ತು.
#ISRO hits a century into space, successfully launches 100th satellite on #PSLVC40 from the Satish Dhawan Space Centre, Sriharikota in Andhra Pradesh ????@isro pic.twitter.com/oBNBRgyrSm
— DD News (@DDNewslive) January 12, 2018
https://twitter.com/DDNewsLive/status/951322170877083649