ಗದಗ: ಆ ಅಪ್ರಾಪ್ತ ಜೋಡಿಗಳು ಪರಸ್ಪರ ಪ್ರೀತಿಸುತ್ತಿದ್ದರು. ಯಾರ ನೆರಳು ನಮ್ಮ ಮೇಲೆ ಬೀಳಬಾರದೆಂದು ಮೂರು ದಿನಗಳ ಹಿಂದಷ್ಟೇ ಮನೆ ಬಿಟ್ಟು ದೂರ ಓಡಿ ಹೋಗಿದ್ದರು. ಓಡಿಹೋದ ಜೋಡಿಯನ್ನು ಕರೆತಂದ ನಂತರ ನಮ್ಮ ಮನೇಲಿ ಇರೋದು ಬೇಡ ಎಂದು ಹುಡುಗಿ ಮನೆಯವರು ವಿರೋಧ ಮಾಡಿದ್ದಾರೆ. ಈ ವೇಳೆ ಪಿಎಸ್‍ಐ ಎಂಟ್ರಿಯಾಗಿ ಹೈಡ್ರಾಮಾ ನಡೆಸಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
19 ವರ್ಷದ ಕಾರ್ತಿಕ್ ಹಿರೇಮಠ ಹಾಗೂ 17 ವರ್ಷದ ಸಹನಾ ಪ್ರೀತಿಸಿ ಓಡಿ ಹೋಗಿದ್ದರು. ನಂತರ ಪಾಲಕರು ಸೇರಿ ಇವರನ್ನ ಕರೆತಂದಿದ್ದಾರೆ. ಆದ್ರೆ ಹುಡುಗಿ ಮನೆಯವರು ಆಕೆಯನ್ನ ಕರೆದುಕೊಳ್ಳೋಕೆ ಹಿಂದೇಟು ಹಾಕಿದ್ದಾರೆ. ನಮ್ಮ ಮನೆಗೆ ವಾಪಾಸ್ ಬರೋದು ಬೇಡ, ಹುಡುಗನ ಮನೆಯಲ್ಲಿ ಇರು ಅಂದಿದ್ದಾರೆ. ಆದರೆ ಹುಡುಗನ ಮನೆಯವರು ಹುಡುಗಿಯನ್ನ ಒಪ್ಪಿಕೊಳ್ಳೋಕೆ ಹಿಂದೇಟು ಹಾಕಿದ್ದಾರೆ. ಈ ವೇಳೆ ನರಗುಂದ ಪಿಎಸ್‍ಐ ತಳವಾರ ಎಂಬವರು ಬಂದು ಹುಡುಗಿ ಪಾಲಕರಿಗೆ ಧಮ್ಕಿ ಹಾಕಿದ್ದಾರೆ.
- Advertisement 2-
- Advertisement 3-
ಹುಡುಗಿ ಹೆತ್ತು ಬೀದಿಯಲ್ಲಿ ಬಿಟ್ಟರೆ ಸಾಲದು. ಮರ್ಯಾದೆಯಿಂದ ಮನೆಗೆ ಕರೆದೊಯ್ಯಿರಿ ಎಂದು ಅವಾಜ್ ಹಾಕಿದ್ದಾರೆ ಎಂಬುದು ಹುಡುಗಿ ಸಂಬಂಧಿಕರ ಆರೋಪವಾಗಿದೆ. ಅಷ್ಟೇ ಅಲ್ಲ ಯುವಕನ ಕಡೆಯಿಂದ ಹಣಬಲ ಹಾಗೂ ರಾಜಕೀಯ ಒತ್ತಡದಿಂದ ಯಾರೂ ಕಂಪ್ಲೆಂಟ್ ನೀಡದೆ ಏಕಾಏಕಿ ಬಂದು ಅಶ್ಲೀಲವಾಗಿ ನಿಂದಿಸಿ, ಯುವತಿಯ ಅಜ್ಜನನ್ನು ಠಾಣೆಗೆ ಎಳೆದೊಯ್ದಿದ್ದಾರೆ ಎಂಬುದು ಯುವತಿ ಕುಟುಂಬದ ಆರೋಪವಾಗಿದೆ.