ಹಾವೇರಿ: ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಜನ್ಮದಿನ ಆಚರಿಸಿಕೊಂಡು 20 ದಿನಗಳು ಕಳೆದ್ರೂ ಟ್ರೈಸಿಕಲ್ ವಿತರಣೆ ಮಾಡದೇ ಸುದ್ದಿಯಾಗಿದ್ರು. ಈಗ ಅವರ ಬೆಂಬಲಿಗರು ಮತ್ತೊಂದು ಯಡವಟ್ಟು ಮಾಡಿದ್ದಾರೆ.
ಕೋಳಿವಾಡ ಹುಟ್ಟುಹಬ್ಬ ಮುಗಿದು ಒಂದು ತಿಂಗಳು ಕಳೆದ ನಂತರ ರಾಣೇಬೆನ್ನೂರು ತಾಲೂಕಿನಲ್ಲಿ ಹುಟ್ಟುಹಬ್ಬದ ಸೀರೆಗಳನ್ನ ಹಂಚಿಕೆ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಊದಗಟ್ಟಿ ಗ್ರಾಮದಲ್ಲಿ ಬೇಕಾಬಿಟ್ಟಿ ಸೀರೆಗಳನ್ನ ಮನೆ ಮುಂದೆ ಎಸೆದು ಹೋಗಿದ್ದಾರೆ. ಇದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ.
ಹುಟ್ಟುಹಬ್ಬ ಮುಗಿದು ಒಂದು ತಿಂಗಳು ಕಳೆದಿದೆ. ಉಳಿದ ಸೀರೆಗಳನ್ನ ಮನೆಯವರ ಕೈಗೆ ನೀಡದೆ ಬಾಗಿಲ ಬಳಿ ಎಸೆದು ಹೋಗಿದ್ದಾರೆ. ಹೀಗೆ ಸೀರೆಯನ್ನ ಎಸೆದು ಸ್ಪೀಕರ್ ಸಾಹೇಬ್ರರಿಗೆ ಅವರ ಬೆಂಬಲಿಗರೇ ಅವಮಾನ ಮಾಡಿದ್ದಾರೆ ಎಂದು ರಾಣೇಬೆನ್ನೂರು ಗ್ರಾಮೀಣ ಠಾಣೆ ಹಾಗೂ ತಹಶೀಲ್ದಾರ್‍ಗೆ ದೂರಿದ್ದಾರೆ. ಹಾಗಾದ್ರೆ ಸೀರೆ ಹಂಚುವ ನೆಪದಲ್ಲಿ ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸಿದ್ದಾರಾ ಎಂಬ ಪ್ರಶ್ನೆಯೂ ಎದ್ದಿದೆ.