ಶಿವಮೊಗ್ಗ: ಭೂಗತ ಲೋಕದ ಗ್ಯಾಂಗ್‍ಸ್ಟರ್ ರವಿ ಪೂಜಾರಿ ಹಾವಳಿ ಮಲೆನಾಡಿಗೂ ವ್ಯಾಪಿಸಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಪ್ರತಿಷ್ಠಿತ ಚಿನ್ನ-ಬೆಳ್ಳಿ ವರ್ತಕರ ಕುಟುಂಬಕ್ಕೆ ದೂರವಾಣಿ ಕರೆ ಮಾಡಿದ ರವಿ ಪೂಜಾರಿ ಬರೋಬ್ಬರಿ 25 ಕೋಟಿಗೆ ಬೇಡಿಕೆ ಇಟ್ಟಿದ್ದಾನೆ.
ರವಿ ಪೂಜಾರಿ ಈ ಹಣಕ್ಕಾಗಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಕರೆ ಮಾಡಿದ್ದಾನೆ. ಭೂಗತ ಪಾತಕಿಯ ಕರೆಗೆ ಈ ಚಿನ್ನ-ಬೆಳ್ಳಿ ವ್ಯಾಪಾರಿ ಕುಟುಂಬದವರು ಬೆಚ್ಚಿ ಬಿದ್ದಿದ್ದಾರೆ. ದೂರು ಕೊಡಲು ಹಿಂದೇಟು ಹಾಕಿದ್ದಾರೆ. ಸ್ವತಃ ಶಿವಮೊಗ್ಗ ಎಸ್‍ಪಿ ಅಭಿನವ್ ಖರೆ ವರ್ತಕರ ಕುಟುಂಬಕ್ಕೆ ಧೈರ್ಯ ತುಂಬಿ ದೂರು ಪಡೆದಿದ್ದಾರೆ.
- Advertisement 2-
- Advertisement 3-
ದೂರು ದಾಖಲಾದ ಬಳಿಕ ಪೊಲೀಸರು ವರ್ತಕರ ಕುಟುಂಬಕ್ಕೆ ವಿಶೇಷ ಭದ್ರತೆ ಒದಗಿಸಿ, ಒಬ್ಬ ಗನ್‍ಮ್ಯಾನ್ ನೇಮಿಸಿದ್ದಾರೆ. ಸದ್ಯ ಶಿವಮೊಗ್ಗ ಪೊಲೀಸರು ರವಿ ಪೂಜಾರಿ ಗ್ಯಾಂಗ್ ಬೆನ್ನು ಬಿದ್ದಿದ್ದು ಹಲವರ ವಿಚಾರಣೆ ನಡೆಸಿದ್ದಾರೆ. ಮುಂಬೈ ಹಾಗೂ ದೆಹಲಿಯಲ್ಲಿರುವ ರವಿ ಪೂಜಾರಿಯ ಸಹೋದರಿಯರ ಮನೆಗೆ ಹೋಗಿ ಎಚ್ಚರಿಕೆ ಕೊಟ್ಟು ಬಂದಿದ್ದಾರೆ.
- Advertisement 4-
ಇದನ್ನೂ ಓದಿ: ರವಿ ಪೂಜಾರಿ ಹೆಸರಲ್ಲಿ ಸಂಸದ ಡಿಕೆ ಸುರೇಶ್‍ಗೆ ಬೆದರಿಕೆ