ಗದಗ: ಕೌಟುಂಬಿಕ ಕಲಹಕ್ಕೆ ವ್ಯಕ್ತಿಯೋರ್ವನ ಕೊಚ್ಚಿ ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದಲ್ಲಿ ನಡೆದಿದೆ.
ಸಣ್ಣಪ್ಪ ಹೊನ್ನಣ್ಣವರ್ (32)ಕೊಲೆಯಾದ ದುರ್ದೈವಿ. ಸುಮಾರು 20 ಜನರ ತಂಡವೊಂದು ಮನೆಗೆ ನುಗ್ಗಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಆರೋಪ ಮಾಡಲಾಗಿದೆ. ಘಟನೆಯಿಂದ ಅಡಿವಪ್ಪ, ಚಂದ್ರಕಾಂತ್, ಹನುಮವ್ವ, ರಂಗವ್ವ, ವೆಂಕಪ್ಪ ಎಂಬವರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಸುಭಾಷ್ ಬಂಡಿ ಮತ್ತು ಸಹಚರರಿಂದ ಕೊಲೆ ನಡೆದಿದೆ. ಸುಭಾಷ್ ಮತ್ತು ರೇಣುಕಾ ದಂಪತಿ ನಡುವಿನ ಕಲಹಕ್ಕೆ ರೇಣುಕಾ ಸಹೋದರ ಬಲಿಯಾಗಿದ್ದಾರೆ. ಮಧ್ಯರಾತ್ರಿ ಮನೆಗೆ ನುಗ್ಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಗದಗ ಜಿಲ್ಲೆ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.