ಚಿಕ್ಕಮಗಳೂರು: ಪ್ರತಿಕುಟುಂಬದ ಮೇಲೆ 50 ಸಾವಿರ ಹೊರೆ ನೀಡಿರೋದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ನೀಡಿದ ಮಹಾನ್ ಕೊಡುಗೆಯಾಗಿದೆ ಅಂತ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನ ಮುಗುಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀರಾವರಿ, ರಸ್ತೆ, ಹಣ ದೋಚಿದೆ. ಅಲ್ಲದೇ ನಾಡಿನ ಜನರನ್ನ ಸಾಲಗಾರನ್ನಾಗಿ ಮಾಡಿದೆ. ಒಟ್ಟಿನಲ್ಲಿ ಜಾಹಿರಾತು ಮೂಲಕ ನಡೆಯುತ್ತಿರುವ ಸರ್ಕಾರ ಅಂದ್ರೆ ಸಿದ್ದರಾಮಯ್ಯನವರ ಸರ್ಕಾರ ಅಂತ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆ ಅಗಲು ಹೆಚ್.ಡಿ.ರೇವಣ್ಣ ಕಾರಣ. ಸಿಎಂ ಸಾಲಮನ್ನಾ ಘೋಷಣೆ ಮಾಡಿ 4 ತಿಂಗಳ ಅಗಿದೆ ಎಷ್ಟು ಜನರಿಗೆ ಸಾಲಮನ್ನ ಮಾಡಲು ಹಣ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಫೋಟೋ ಹಾಕಿ ಸಾಲ ಮನ್ನಾ ಮಾಡಿದ್ದೇವೆ ಎಂದು ಕರಪತ್ರ ಹಂಚುತ್ತಿದ್ದಾರೆ ಅಂತ ಅಂದ್ರು.
ಇದನ್ನೂ ಓದಿ: ಗ್ರಾಮ ವಾಸ್ತವ್ಯಕ್ಕೆ ಹೊಸ ಟಚ್ ಕೊಟ್ಟ ಜೆಡಿಎಸ್
ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಯನ್ನ ಆಲಿಸಿ ಪ್ರಣಾಳಿಕೆಯಲ್ಲಿ ನೀಡುವ ಉದ್ದೇಶದಿಂದ ನೀಡಲಾಗುತ್ತಿದೆ. ಜೆಡಿಎಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುವುದು ಅಂತ ಹೇಳಿದ್ರು.
ಇದನ್ನೂ ಓದಿ: ಹೆಚ್‍ಡಿಕೆ ಚುನಾವಣಾ ಪ್ರಚಾರಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್: ಒಳಗಡೆ ಏನೆಲ್ಲಾ ಇದೆ ಗೊತ್ತಾ!
ಎರಡು ರಾಷ್ಟ್ರೀಯ ಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತಿದ್ದು, ಲೂಟಿಕಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಜಯಂತಿಗಳನ್ನ ನಡೆಸಿ ಸಮುದಾಯದ ಜನರನ್ನ ತೃಪ್ತಿಪಡಿಸಲು ಮುಂದಾಗಿವೆ. ಇದನ್ನ ಬಿಟ್ಟು ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡಲಿ ಎಂದು ಹೆಚ್‍ಡಿಕೆ ಸಲಹೆ ನೀಡಿದರು.
ಇದನ್ನೂ ಓದಿ: ನಾಳೆ ಕರ್ನಾಟಕ ವಿಕಾಸ ವಾಹಿನಿ ಯಾತ್ರೆಗೆ ಚಾಲನೆ- ಮತ್ತೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಹೆಚ್‍ಡಿಕೆ



















