ಮುಂಬೈ: ಮಾತನಾಡಲು ಬಾರದ ಮತ್ತು ಕಿವಿ ಕೇಳಿಸದ 70 ವರ್ಷದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 19 ವರ್ಷದ ಯುವಕನನ್ನು ನಗರದ ಮಾಲ್ವಾನಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪ್ರೇಮ್ ಸಿಂಗ್ ನೇಗಿ ಎಂದು ಗುರುತಿಸಲಾಗಿದ್ದು, ಆರೋಪಿಯು ಅದೇ ಪೊಲೀಸ್ ಕ್ವಾಟರ್ಸ್ ವಾಸಿಸುತ್ತಿದ್ದು, ಇಬ್ಬರು ಸಿಬಿಐ ಅಧಿಕಾರಿಗಳ ಮನೆಯಲ್ಲಿ ಆಡುಗೆ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
ನಡೆದಿದ್ದೇನು?:
ಸಂತ್ರಸ್ತೆ ಮಾಲ್ವಿಣಿ ನಗರದ ದೇವಾಲಯದ ಸಮೀಪ ಫುಟ್‍ಬಾತ್‍ನಲ್ಲಿ ಹೂವಿನ ಅಂಗಡಿಯಲ್ಲಿ ವಾಸಿಸುತ್ತಿದ್ದರು. ಇವರಿಗೆ ಮಾತನಾಡಲು ಮತ್ತು ಕಿವಿಯೂ ಕೂಡ ಕೇಳಿಸುತ್ತಿರಲಿಲ್ಲ.
ಕಳೆದ ಬುಧವಾರ ರಾತ್ರಿ ಸಂತ್ರಸ್ತೆ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ತಕ್ಷಣ ಸಂತ್ರಸ್ತೆ ಕಿರುಚಾಡಿದ್ದಾರೆ. ಅಲ್ಲೇ ಪಕ್ಕದ ಅಂಗಡಿಯಲ್ಲಿ ಕಾಫಿ ಕುಡಿಯುತ್ತಿದ್ದ ಇಬ್ಬರು ಯುವಕರು ಕಾಪಾಡಲು ಓಡಿ ಬಂದಿದ್ದಾರೆ. ಅವರು ಬಂದ ತಕ್ಷಣ ಆರೋಪಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆದರೆ ಕತ್ತಲಾಗಿದ್ದರಿಂದ ಯಾವುದೋ ವಾಹನ ಬಂದು ಡಿಕ್ಕಿ ಹೊಡೆದಿದೆ. ತಕ್ಷಣ ರಸ್ತೆಯಲ್ಲಿಯೇ ಬಿದ್ದಿದ್ದಾನೆ. ನಂತರ ಇಬ್ಬರು ಯುವಕರು ಮತ್ತು ಕೆಲವು ಮಂದಿ ಆತನನ್ನು ಹಿಡಿದು ಪೊಲೀಸರ ಕೈಗೆ ಒಪ್ಪಿಸಿದ್ದಾರೆ.
ಸಂತ್ರಸ್ತೆ ಕಳೆದ ಮೂರು ವರ್ಷಗಳಿಂದ ದೇವಾಲಯದ ಫುಟ್‍ಪಾತ್‍ನಲ್ಲಿ ವಾಸಿಸುತ್ತಿದ್ದು, ದಿನ ದೇವಸ್ಥಾನಕ್ಕೆ ಬರುತ್ತಿದ್ದವರು ನೋಡಿ ಅವರಿಗೆ ಹಣ, ಊಟದ ಸಹಾಯ ಮಾಡುತ್ತಿದ್ದರು. ಹೂವಿನ ಅಂಗಡಿಗೆ ಹೋಗಿ ಹೂವಿನ ಮಾಲೆಯನ್ನು ತಯಾರು ಮಾಡಿಕೊಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಮಾಲೀಕ ಊಟ ಮತ್ತು ಮಲಗಲು ಸ್ಥಳವನ್ನು ನೀಡುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇವು. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯ ವಿಚಾರಣೆ ವೇಳೆ ಪೊಲೀಸ್ ಠಾಣೆಯ ಹಿಂಭಾಗಲ್ಲಿರುವ ಸಿಬಿಐ ಕ್ವಾಟರ್ಸ್ ಆರೋಪಿ ವಾಸವಾಗಿದ್ದನು. ಸಂತ್ರಸ್ತೆಯ ಅಂಗಡಿಯ ಪಕ್ಕ ಕುಡಿಯುತ್ತಾ ಕುಳಿತ್ತಿದ್ದ, ಸಂತ್ರಸ್ತೆ ಮಲಗಿದ ನಂತರ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ ಎಂದು ಅವರು ಮತ್ತಷ್ಟು ಮಾಹಿತಿ ನೀಡಿದರು.