ಟೈಲ್ಸ್ ಲಾರಿ ಪಲ್ಟಿ- 11 ಜನ ಸ್ಥಳದಲ್ಲೇ ಸಾವು

Public TV
1 Min Read
LORRY PULTI

ವಿಜಯಪುರ: ಟೈಲ್ಸ್ ಲಾರಿ ಪಲ್ಟಿಯಾಗಿ ಓರ್ವ ಬಾಲಕ ಸೇರಿ 11 ಜನ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಮೂಲತಃ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಇಂದಿರಾಬಾಯಿ ನಿಂಬಾಳಕರ (30), ಪರಶುರಾಮ ಪೂಜಾರಿ (30), ಬಸಮ್ಮ ಪೂಜಾರಿ (25), ರೂಪೇಶ್ (25), ಸಂತೋಷ (19), ಅಶೋಕ್ ಬಿರಾದಾರ (50), ಲಕ್ಷ್ಮಿ ಬಾಯಿ ಮಾದರ (30), ಲಕ್ಷ್ಮಣ ಮಾದರ (30), ಬೇಬಿ ಶೆಖ್ (49) ಸಾಹೇಬಣ್ಣ (65) ಹಾಗೂ ನಾಗಪ್ಪ ನಿಂಬಾಳಕರ(8) ಮೃತ ದುರ್ದೈವಿಗಳು.

vlcsnap 2017 10 21 11h32m59s231

ಶನಿವಾರ ಮುಂಜಾನೆ ಸುಮಾರು 3 ಗಂಟೆಗೆ ಸಾಂಗ್ಲಿಯ ಟಸ್ಗಾನ್-ಕವಾಥೆ ಮಹನ್ಕಾಲ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಲಾರಿಯ ಚಾಲಕ ಮನೆರಾಜುರಿ ಗ್ರಾಮದ ಸಮೀಪ ತನ್ನ ನಿಯಂತ್ರಣ ಕಳೆದುಕೊಂಡ ಪರಿಣಾಮ ಲಾರಿ ಪಲ್ಟಿ ಹೊಡೆದಿದ್ದು, ಟೈಲ್ಸ್ ಕೆಳಗೆ ಕಾರ್ಮಿಕರು ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ರಕ್ಷಣೆ ಮಾಡಿ ಸಮೀಪದ ಮೀರಜ್ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಾಂಗ್ಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

BIJ LORRY PALTI AV 2

BIJ LORRY PALTI AV 7

BIJ LORRY PALTI AV 10

BIJ LORRY PALTI AV 9

BIJ LORRY PALTI AV 8

BIJ LORRY PALTI AV 4

BIJ LORRY PALTI AV 5

Share This Article
Leave a Comment

Leave a Reply

Your email address will not be published. Required fields are marked *