ರಾಕಿಂಗ್ ಸ್ಟಾರ್ ಯಶ್ ಎಷ್ಟು ಸಿಂಪಲ್ ಎಂಬುದಕ್ಕೆ ಈ ಸ್ಟೋರಿ ಓದಿ

Public TV
2 Min Read
yash 9

ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಬಿಟ್ಟು ಖಾಸಗಿ ಜೀವನದಲ್ಲಿ ತುಂಬಾನೇ ಸಿಂಪಲ್ ಆಗಿರುತ್ತಾರೆ. ಯಶೋ ಮಾರ್ಗದ ಮೂಲಕ ಸಮಾಜಸೇವೆ ಮಾಡುತ್ತಾ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಾರೆ.

ಇತ್ತೀಚೆಗೆ ಯಶ್ ಮತ್ತು ರಾಧಿಕಾ ಪಂಡಿತ್ ಔಟಿಂಗ್ ಗಾಗಿ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ಹೋಗಿದ್ದರು. ಈ ಹೋಟೆಲ್ ಗೆ ಬರೀ ಬೆಂಗಳೂರು ಅಲ್ಲದೇ ದೇಶ ವಿದೇಶಗಳಿಂದಲೂ ಜನರು ಬಂದಿರುತ್ತಾರೆ. ಅದೇ ರೀತಿ ಬಹುಶಃ ಪಕ್ಕದ ರಾಜ್ಯದ ಕುಟುಂಬವೂ ಬಂದಿದೆ. ಆ ಕುಟುಂಬದ ಎರಡು ಎಳೆ ಕುಡಿಗಳು ಬೆಂಚ್ ಮೇಲೆ ಕುಳಿತುಕೊಂಡಿವೆ. ತಮ್ಮ ಫೋಟೋ ತೆಗೆಯುವಂತೆ ರಾಕಿಂಗ್ ಸ್ಟಾರ್ ಯಶ್ ಅವರನ್ನೇ ಕೇಳಿಕೊಂಡಿದ್ದಾರೆ.

ಕನ್ನಡ ಸಿನಿಮಾಗಳನ್ನು ನೋಡದ ಆ ಬಾಲಕಿಯರಿಗೆ ಯಶ್ ಇಲ್ಲಿ ಸೂಪರ್ ಸ್ಟಾರ್ ಅನ್ನೋದು ಹೇಗೆ ಗೊತ್ತಾಗಬೇಕು. ಸಹಜವಾಗಿ ಒಂದು ಫೋಟೋ ಕ್ಲಿಕ್ ಮಾಡಿ ಎಂದು ತೊದಲು ಭಾಷೆಯಲ್ಲಿ ಹೇಳಿದ್ದಾರೆ. ಬೇರೆ ಯಾರಾದರೂ ಸ್ಟಾರ್ ಆಗಿದ್ದರೆ ಏನು ಮಾಡುತ್ತಿದ್ದರೊ ಗೊತ್ತಿಲ್ಲ. ಆದರೆ ಒಬ್ಬ ಯಶ್ ಮಾತ್ರ ಯಾವುದೇ ಮುಜುಗರ ಇಲ್ಲದೆ ಆ ಬಾಲಕಿಯರ ಫೋಟೋ ತೆಗೆದುಕೊಟ್ಟಿದ್ದಾರೆ.

yash

ಈ ವೇಳೆ ಯಶ್ ಮಕ್ಕಳ ಫೋಟೋ ತೆಗೆಯುವುದನ್ನು ಪತ್ನಿ ರಾಧಿಕಾ ಪಂಡಿತ್ ತಮ್ಮ ಮೊಬೈಲ್ ನಲ್ಲಿ ಕ್ಲಿಕಿಸಿಕೊಂಡಿದ್ದಾರೆ. ಆ ಫೋಟೋವನ್ನು ರಾಧಿಕಾ ಅವರು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಆ ಮಕ್ಕಳಿಗೆ ತಮ್ಮ ಫೋಟೋ ತೆಗೆಯುತ್ತಿರುವ ವ್ಯಕ್ತಿ ಯಾರೆಂದು ಗೊತ್ತಾದರೆ ಅವರ ಪ್ರತಿಕ್ರಿಯೆ ಹೇಗಿರಬಹುದು ಎಂದು ಬರೆದುಕೊಂಡಿದ್ದಾರೆ.

ಯಶ್ ಸದ್ಯ ಕೆಜಿಎಫ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿದ್ದಾರೆ. ಈಗಾಗಲೇ ಫಸ್ಟ್ ಲುಕ್ ನಿಂದಲೇ ಸಿನಿಮಾ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ಯಶ್ 80ರ ದಶಕದ ಡಾನ್ ಪಾತ್ರಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಾಗಿ ಅದ್ಧೂರಿ ವೆಚ್ಚದಲ್ಲಿ ಕೋಲಾರ ಕೆಜಿಎಫ್ ನಲ್ಲಿ 70ರ ದಶಕದ ಸೆಟ್ ಹಾಕಿ ಚಿತ್ರೀಕರಣವನ್ನು ಸಹ ಮಾಡಲಾಗುತ್ತಿದೆ.

yash 2

ಸಿನಿಮಾದಲ್ಲಿ ಯಶ್ `ರಾಕಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ ಶ್ರೀನಿಧಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಖಳ ನಟನಾಗಿ ರವಿಶಂಕರ್ ಸಹೋದರ ಅಯ್ಯಪ್ಪ ಅಭಿನಯಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಕಿರಂಗದೂರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೆಜಿಎಫ್ ಸಿನಿಮಾ ಕನ್ನಡ ಅಲ್ಲದೇ ಹಿಂದಿ, ತೆಲಗು, ತಮಿಳು ಭಾಷೆಗಳಿಗೆ ಡಬ್ ಆಗಲಿದೆ.

yash 1

yash3

Yash KGF 12

yash 7

yash 4

yash 5

yash6

radhika

radhika 1

Share This Article
Leave a Comment

Leave a Reply

Your email address will not be published. Required fields are marked *