ಚಿಕ್ಕಬಳ್ಳಾಪುರ: ಮದುವೆಯಾಗಿ ಗಂಡನ ಮನೆಯಲ್ಲಿ ಹಾಯಾಗಿದ್ದ ಪ್ರಿಯತಮೆಯ ಬೆನ್ನು ಬಿದ್ದ ಪ್ರೇಮಿಯೊಬ್ಬ ಮರುಮುದುವೆಯಾಗಿ ಬಳಿಕ ಇದೀಗ ನಾಪತ್ತೆಯಾದ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದೊಡ್ಡದಾಸರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀನಿವಾಸ-ಮಂಜುಳಾ ದಂಪತಿಯ ಏಕೈಕ ಪುತ್ರಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಹೊಸಹಳ್ಳಿ ಗ್ರಾಮದ ಯುವಕನೊಂದಿಗೆ ಕಳೆದ 5 ತಿಂಗಳ ಹಿಂದೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿದ್ದರು.
ಗಂಡನ ಮನೆಯಲ್ಲಿದ್ದ ವಿದ್ಯಾಶ್ರೀನ ತಲೆಕೆಡಿಸಿದ ಆಕೆಯ ಪ್ರಿಯತಮ ದೊಡ್ಡದಾಸರಹಳ್ಳಿ ಗ್ರಾಮದ ಮಹೇಶ್ ನಿನ್ನ ಗಂಡನ ಜೊತೆ ನೀನು ಬಾಳಬೇಡ. ನೀನು ಇಲ್ಲದಿದ್ದರೆ ನಾನು ಸಾಯಿತೀನಿ ಅಂತ ಬೆದರಿಸಿ ಬಲವಂತವಾಗಿ ಆಕೆಯನ್ನ ಗಂಡನ ಮನೆಯಿಂದ ಕರೆಸಿಕೊಂಡು ಮರುಮದುವೆಯಾಗಿದ್ದಾನೆ.
ಆದರೆ ತಿಂಗಳು ಕಾಲ ವಿದ್ಯಾ ಜೊತೆ ಸಂಸಾರ ನಡೆಸಿದ ಮಹೇಶ್ ಇದೀಗ ದಿಢೀರ್ ಅಂತ ನಾಪತ್ತೆಯಾಗಿದ್ದಾನೆ. ಹೀಗಾಗಿ ನೊಂದ ಯುವತಿ ಅತ್ತ ಮೊದಲನೇ ಗಂಡನೂ ಇಲ್ಲದೆ ಎರಡನೇ ಗಂಡನೂ ಇಲ್ಲದೆ ನ್ಯಾಯಕ್ಕಾಗಿ ಎರಡನೇ ಗಂಡ ಮಹೇಶ್ ಮನೆ ಮುಂದೆ ಕುಟುಂಬ ಸಮೇತ ಪ್ರತಿಭಟನೆಗಿಳಿದಿದ್ದಾರೆ.