ರಾಮನಗರ: ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಹೋರಾಟ ತೀವ್ರಗೊಳಿಸಿರುವ ಆಶಾ ಕಾರ್ಯಕರ್ತೆಯರ (ASHA Workers) ಗೌರವಧನವನ್ನು 1,500ರೂ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್ (Dr. Manjunath) ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಹೋರಾಟದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೌರವಧನ ಹೆಚ್ಚಳ ಕುರಿತು ಬೆಳಗ್ಗೆಯಷ್ಟೇ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರ ಜೊತೆ ಮಾತನಾಡಿ, ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಲು ಸಲಹೆ ನೀಡಿದ್ದೇನೆ. ದೇಶದಾದ್ಯಂತ ಇರುವ ಕಾರ್ಯಕರ್ತೆಯರಿಗೆ 1,500 ರೂ. ಗೌರವಧನ ಹೆಚ್ಚಳಕ್ಕೆ ಪ್ರಸ್ತಾವ ಸಿದ್ದಪಡಿಸಲಾಗಿದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಇದನ್ನು ಮಂಡಿಸಿ ಗೌರವಧನ ಹೆಚ್ಚಳ ಮಾಡಲಿದೆ. ರಾಜ್ಯ ಸರ್ಕಾರವೂ ಆಶಾ ಕಾರ್ಯಕರ್ತೆಯರ ಗೌರವಯುತ ಬದುಕಿಗೆ ನೀಡುವ ಗೌರವಧನ ಹೆಚ್ಚಳ ಮಾಡಲೇಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ; ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್-ಎಸ್ಪಿ ನಡುವೆ ಭಿನ್ನಾಭಿಪ್ರಾಯ
ಇನ್ನೂ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರತ್ಯೇಕ ರಾಜ್ಯದ ಚರ್ಚೆ ವಿಚಾರ ಕುರಿತು ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅನುದಾನ ಕೊಟ್ಟರೆ ಸಾಲದು. ಅದನ್ನು ಸರಿಯಾಗಿ ಬಳಸಿಕೊಂಡು ಜನಪರ ಯೋಜನೆಗಳಿಗೆ ಅನುಷ್ಠಾನ ಮಾಡುವುದು ಮುಖ್ಯ. ಅದು ಬಿಟ್ಟು ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ. ಇಡೀ ರಾಜ್ಯದ ಶೇ.40ರಷ್ಟು ಆದಾಯ ಬರುವುದು ಬೆಂಗಳೂರಿನಿಂದ. ಬೆಂಗಳೂರು ಪ್ರತ್ಯೇಕವಾದರೆ ಅಭಿವೃದ್ಧಿಗೆ ಎಲ್ಲಿಂದ ಹಣ ಬರುತ್ತದೆ? ಅಧಿಕಾರ ಇದ್ದಾಗ ಕೆಲಸ ಮಾಡಿದರೆ ಪ್ರತ್ಯೇಕತಾ ಭಾವನೆ ಬರುವುದಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕಾಡಾನೆ ಜಟಾಪಟಿ | ನಾವು ರಾಜೀನಾಮೆ ಬಗ್ಗೆ ಚರ್ಚೆ ಮಾಡಿಲ್ಲ – ಯೂಟರ್ನ್ ಹೊಡೆದ ಶಾಸಕರು
