– ವಾಪಸ್ ಕರೆತರ್ತಿರೋ ಪೊಲೀಸರು
ರಾಮನಗರ: ಶಿಕ್ಷಕರು ಬೈದಿದ್ದಕ್ಕೆ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಐಜೂರು ಠಾಣೆ ಪೊಲೀಸರು (Ijoor Police) ಒಂದೇ ದಿನದಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮೊನ್ನೆ ರಾತ್ರಿ ರಾಮನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Morarji Desai School) ನಾಲ್ವರು ವಿದ್ಯಾರ್ಥಿಗಳು, ಶಿಕ್ಷಕರು ಬೈದಿದ್ದಕ್ಕೆ ಬೇಸತ್ತು ಯಾರಿಗೂ ತಿಳಿಸದೆ ಹಾಸ್ಟೆಲ್ನಿಂದ ಕಾಂಪೌಂಡ್ ಹಾರಿ ಪರಾರಿಯಾಗಿದ್ದರು.
ವಿದ್ಯಾರ್ಥಿಗಳು ನಾಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ವಸತಿ ಶಾಲೆಯ ಪ್ರಾಂಶುಪಾಲರು ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತಕ್ಷಣವೇ ತನಿಖೆ ಚುರುಕುಗೊಳಿಸಿದ ಐಜೂರು ಪೊಲೀಸರು, ಮಕ್ಕಳು ರೈಲಿನ ಮೂಲಕ ಕೊಪ್ಪಳಕ್ಕೆ ತೆರಳಿರುವುದನ್ನು ಪತ್ತೆಹಚ್ಚಿದ್ದಾರೆ.
ನಾಪತ್ತೆಯಾದ ಒಂದೇ ದಿನದಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಪತ್ತೆ ಮಾಡಿರುವ ಪೊಲೀಸರು, ಸದ್ಯ ಮಕ್ಕಳನ್ನು ರಾಮನಗರಕ್ಕೆ ವಾಪಸ್ ಕರೆತರುತ್ತಿದ್ದಾರೆ.

