ಬೆಂಗಳೂರು: ಸಿಎಂ ಡಿಕೆಶಿ (DK Shivakumar) ಮುಂದೆಯೇ ಕಾಂಗ್ರೆಸ್ (Congress) ಕಾರ್ಯಕರ್ತರ ಮೇಲೆ ಬಿಜೆಪಿ (BJP) ಶಾಸಕಿ ಫುಲ್ ಗರಂ ಆಗಿ ತರಾಟೆಗೆ ತೆಗೆದುಕೊಂಡ ಘಟನೆ ಮಹಾದೇವಪುರ (Mahadevapura) ಕ್ಷೇತ್ರದಲ್ಲಿ ನಡೆದಿದೆ.
ಮಹಾದೇವಪುರದ ಗುಂಜೂರಿನಲ್ಲಿಂದು ಸಂಜೆ ನಡೆದ ಜಿಬಿಎ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ತಮ್ಮ ಭಾಷಣಕ್ಕೆ ಆಕ್ಷೇಪಿಸಿ ಅಡ್ಡಿಪಡಿಸಲೆತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಎಂ ಎದುರೇ ಬಿಜೆಪಿ ಶಾಸಕಿ ಮಂಜುಳಾ ಲಿಂಬಾವಳಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: Video Viral | ಕ್ವಾಡ್ ನಾಯಕರ ಫೋಟೋಶೂಟ್ ವೇಳೆ ಭಾರತದ ಧ್ವಜದ ಗುರುತಿನ ಕಾರ್ಡ್ ಎತ್ತಿಕೊಂಡ ಮೋದಿ
ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ, ಕ್ಷೇತ್ರದಲ್ಲಿ ತಾವು ಮಾಡಿರುವ ಕೆಲಸಗಳ ಬಗ್ಗೆ ಶಾಸಕಿ ಮಂಜುಳಾ ಲಿಂಬಾವಳಿ ವಿವರಣೆ ಕೊಡ್ತಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಕೂತಿದ್ದ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು. ಇದರಿಂದ ಸಿಟ್ಟಾದ ಶಾಸಕಿ ಮಂಜುಳಾ ಲಿಂಬಾವಳಿ, ಕಾಂಗ್ರೆಸ್ ಕಾರ್ಯಕರ್ತರು ನನ್ನ ಭಾಷಣಕ್ಕೆ ತಡೆ ಹಾಕಬೇಡಿ. ಈ ಕ್ಷೇತ್ರದಲ್ಲಿ ನಾನು, ನನ್ನ ಪತಿ ಸಾಕಷ್ಟು ಕೆಲಸ ಮಾಡಿದ್ದೇವೆ. ಇಲ್ಲಿ ಕೆಲಸ ಮಾಡ್ತಿರೋದು ನಾನು. ಕಾಂಗ್ರೆಸ್ ಕಾರ್ಯಕರ್ತರು ನನಗೆ ಹೇಳಲು ಬರಬೇಡಿ, ನೀವೂ ನನ್ನ ಕ್ಷೇತ್ರದವರೇ ಎಂದು ಕಿಡಿಕಾರಿದ್ದಾರೆ.
ನೀವು ಕಾಂಗ್ರೆಸ್ ಕಾರ್ಯಕರ್ತರು ಇರಬಹುದು, ಆದ್ರೆ ನನ್ನ ಕ್ಷೇತ್ರದವರು ನೀವು, ನನಗೆ ಸಹಕಾರ ಕೊಡಬೇಕು. ನಮಗೂ ಕಾರ್ಯಕರ್ತರು ಇದ್ದಾರೆ, ದಯವಿಟ್ಟು ಸುಮ್ನಿರಿ. ನಾವೂ ಸಭೆಗಳನ್ನು ಮಾಡ್ತೀವಿ, ಏನು ಕೆಲಸ ಮಾಡಿದೀವಿ ತೋರಿಸ್ತೀವಿ. ಗೆದ್ದು ಬಂದು ತೋರಿಸಿ, ನಿಮ್ಮ ಈ ಉತ್ಸಾಹ ಎಲೆಕ್ಷನ್ ಸಮಯದಲ್ಲಿರ್ಲಿ. ಎಲೆಕ್ಷನ್ ನಲ್ಲಿ ಗೆದ್ದು ಬಂದು ತೋರಿಸಿ ಎಂದು ಸಿಎಂ ಎದುರೇ ಸವಾಲೆಸೆದಿದ್ದಾರೆ.ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ನಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸಲು ಕರವೇ ಆಗ್ರಹ
