ಹೈದರಾಬಾದ್: ತೆಲಂಗಾಣದ (Telangana) ರಂಗಾರೆಡ್ಡಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 14 ಯೋಧರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ಟ್ರಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಎಂಟು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಹೈದರಾಬಾದ್ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಚೆವೆಲ್ಲಾ ಮಂಡಲದ ಅಲ್ಲವಾಡ ಗ್ರಾಮದಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇದನ್ನೂ ಓದಿ: 200 ಕಿಮೀ ವೇಗದಲ್ಲಿ ದ್ವಾರಕಾ ಎಕ್ಸ್ಪ್ರೆಸ್ ವೇ ಸುರಂಗಕ್ಕೆ ಕಾರು ಡಿಕ್ಕಿ – ಬೇರ್ಪಟ್ಟು ಹಾರಿಬಿದ್ದ ಎಂಜಿನ್, ಚಾಲಕ ಸಾವು
ಗೋಲ್ಕೊಂಡ ಸೇನಾ ಶಿಬಿರದಿಂದ 14 ಯೋಧರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ಟ್ರಕ್ ಬೆಳಗ್ಗೆ 6:30 ರ ಸುಮಾರಿಗೆ ಶಾಬಾದ್ಗೆ ಸೇನಾ ತರಬೇತಿ ವ್ಯಾಯಾಮದ ಭಾಗವಾಗಿ ಹೊರಟಿತ್ತು. ವಾಹನವನ್ನು ಚಲಾಯಿಸುತ್ತಿದ್ದ ತರಬೇತಿ ಚಾಲಕನೊಬ್ಬ ಸ್ಟೀರಿಂಗ್ ಮೇಲೆ ನಿಯಂತ್ರಣ ಕಳೆದುಕೊಂಡು ಮೀಡಿಯನ್ಗೆ ಡಿಕ್ಕಿ ಹೊಡೆದನು. ನಂತರ ಟ್ರಕ್ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದು ಉರುಳಿತು.
ಮಾಹಿತಿ ಪಡೆದ ಚೆವೆಲ್ಲಾ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಎಂಟು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ಗೋಲ್ಕೊಂಡಾದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ದಿಲ್ಲಿಯಲ್ಲಿ ವಿಷವಾಗುತ್ತಿದೆ ಉಸಿರಾಡುವ ಗಾಳಿ – WHO ಮಿತಿಗಿಂತ ಹಲವು ಪಟ್ಟು ಹೆಚ್ಚಿದ ಪಿಎಂ 2.5 ಪ್ರಮಾಣ
