ಬೆಂಗಳೂರು: ಅಡುಗೆ ಎಣ್ಣೆ (Cooking Oil) ಮರುಬಳಕೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ (Health Department) ದಿಟ್ಟ ಹೆಜ್ಜೆ ಇಟ್ಟಿದೆ. ಹೋಟೆಲ್ಗಳಲ್ಲಿ ಇನ್ಮುಂದೆ ಅಡುಗೆ ಎಣ್ಣೆ ಮರು ಬಳಕೆ ಮಾಡಿದ್ರೆ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಆರೋಗ್ಯ ಸಚಿವ ಯುಟಿ ಖಾದರ್ (UT Khader) ಎಚ್ಚರಿಸಿದ್ದಾರೆ.
ಅಡುಗೆ ಎಣ್ಣೆ ಮರುಬಳಕೆ ತಡೆಯಲು ಶೀಘ್ರದಲ್ಲೇ ಹೊಸ ಆ್ಯಪ್ (App) ಬಿಡುಗಡೆ ಆಗುತ್ತಿದ್ದು, ಹೋಟೆಲ್, ಬೇಕರಿಗಳು ಕಡ್ಡಾಯವಾಗಿ ಅಡುಗೆ ಎಣ್ಣೆ ಖರೀದಿ ಪ್ರಮಾಣ, ಮಾರಾಟದ ಪ್ರಮಾಣ ಇಲ್ಲಿ ತಿಳಿಸಲೇಬೇಕು. ಈ ಆ್ಯಪ್ ಸಿದ್ಧಪಡಿಸಿ ಜಾರಿ ಮಾಡುವುದಕ್ಕೆ ಮೂರು ತಿಂಗಳ ಸಮಯ ತೆಗೆದುಕೊಳ್ಳಲಿದೆ. ಎಣ್ಣೆ ಖರೀದಿ ಮಾಡುವ ಹೋಟೆಲ್ ಉದ್ಯಮದಾರರು, ಬೇಕರಿ ಮಾಲೀಕರು ರಿಜಿಸ್ಟರ್ ಮಾಡಿಕೊಳ್ಳಬೇಕು. ಆ್ಯಪ್ನಲ್ಲಿ ಖರೀದಿ ಮಾಡಿದ ಎಣ್ಣೆ ಎಷ್ಟು? ಬಳಕೆ ಆಗಿದ್ದು ಎಷ್ಟು? ಮತ್ತೆ ಮಾರಾಟ ಮಾಡಿದ್ದು ಎಷ್ಟು ಅಂತಾ ನಮೂದು ಮಾಡಬೇಕು. ಬಯೋಗ್ಯಾಸ್ ಏಜೆನ್ಸಿಗಳಿಗೆ ವಿತರಣೆ ಮಾಡಿದ್ದು ಎಷ್ಟು ಅಂತಲೂ ಕಡ್ಡಾಯವಾಗಿ ನಮೂದು ಮಾಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ವಕೀಲ ಮಂಜುನಾಥ್ ಶೂಟೌಟ್ ಪ್ರಕರಣ – ಪ್ರಮುಖ ಆರೋಪಿ ಬಂಧನ
ಎರಡನೇ ಹಂತದಲ್ಲಿ ಮನೆಗಳಿಂದ ಕೂಡ ಮರು ಬಳಕೆ ತಡೆಗಟ್ಟಿ ಮನೆ ಮನೆಯಿಂದ ಮರು ಬಳಕೆ ಎಣ್ಣೆ ಸಂಗ್ರಹ ಮಾಡೋ ಪ್ಲ್ಯಾನ್ ಇದೆ. ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿಯೂ ಸಚಿವ ಖಾದರ್ ತಿಳಿಸಿದ್ದಾರೆ. ಇದನ್ನೂ ಓದಿ: ಎನ್ವಿಡಿಯಾ ಮುಂದಿನ ಸಿಇಒ ಸ್ಥಾನಕ್ಕೆ ಟಿಮ್ ಕುಕ್ ಹೆಸರು ಸೂಚಿಸಿದ ಟ್ರಂಪ್
