ಬೆಂಗಳೂರು: ಕನ್ನಡದ ಹೆಮ್ಮೆ ಒಲಂಪಿಕ್ ಕ್ರೀಡಾಪಟು ಎಂ.ಎಂ.ಸೋಮಯ್ಯ (M.M.Somaya) ಅವರ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಇಂದಿರಾನಗರದಲ್ಲಿ ವಾಸವಾಗಿದ್ದ ಸೋಮಯ್ಯ ಕಳೆದ ತಿಂಗಳ 28ರಂದು ಕುಟುಂಬ ಸಮೇತ ತನ್ನ ತವರು ಕೊಡಗಿಗೆ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಬೆಂಗಳೂರಿನ ಮನೆಯ ಬಾಗಿಲು ಮುರಿದು ಸೋಮಯ್ಯ ಅವರು ಗಳಿಸಿದ್ದ 8 ಅಂತಾರಾಷ್ಟ್ರೀಯ ಚಿನ್ನದ ಪದಕಗಳು, 1 ಕ್ಯಾಮೆರಾ, 1 ಕೊಡಗು ಕತ್ತಿ 1 ಒಲಂಪಿಕ್ ಬ್ಯಾಗ್, ಚಿನ್ನದ ವಸ್ತುಗಳು, ನಗದು ದೋಚಿದ್ದರು. ಇದನ್ನೂ ಓದಿ: ಅಸಲಿ ಹಣದ ಬದಲಿಗೆ ಮಕ್ಕಳ ಆಟಿಕೆ ನೋಟುಗಳನ್ನಿಟ್ಟು ಮೋಸಕ್ಕೆ ಸ್ಕೆಚ್ – ಡೀಲ್ ವೇಳೆ ಸಿಸಿಬಿ ದಾಳಿ
ವಿಚಾರ ತಿಳಿದ ಕ್ರೀಡಾಪಟು ಸೋಮಯ್ಯ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಾಣಿಕ್ಯ ಮತ್ತು ಭರತ್ ಕಳ್ಳರನ್ನು ಬಂಧಿಸಿ, ಕಳುವಾಗಿದ್ದ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಮಾಣಿಕ್ಯ ಖತರ್ನಾಕ್ ಮನೆಗಳ್ಳನಾಗಿದ್ದು ತಮಿಳುನಾಡು, ಕರ್ನಾಟಕ ಸೇರಿ 33 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ವಿಚಾರಣೆ ವೇಳೆ ಪೊಲೀಸರಿಗೆ ಗೊತ್ತಾಗಿದೆ. ಇದನ್ನೂ ಓದಿ: ಕೋರ್ಟ್ ಆದೇಶದ ಬೆನ್ನಲ್ಲೇ ದರ್ಶನ್ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ
